ATM Charges: SBI, HDFC, ICICI ಮತ್ತು PNB ಏಟಿಎಂ ಇದ್ದವರಿಗೆ ಹೊಸ ನಿಯಮ, ಏಟಿಎಂ ಶುಲ್ಕ ಬದಲಾವಣೆ.

ATM ಕಾರ್ಡ್ ಇದ್ದವರಿಗೆ ಜಾರಿಗೆ ಬಂತು ಹೊಸ ರೂಲ್ಸ್.

SBI, HDFC , ICICI And PNB Bank ATM Charges: ಸರ್ಕಾರಿ ಬ್ಯಾಂಕ್ ಆಗಿರಲಿ ಅಥವಾ ಖಾಸಗಿ ಬ್ಯಾಂಕ್ ಆಗಿರಲಿ, ಎಟಿಎಂ ನಿಂದ ನಗದು ವಿತ್ ಡ್ರಾಗೆ ಶುಲ್ಕ ವಿಧಿಸಲು ಎಲ್ಲಾ ಬ್ಯಾಂಕ್ ಗಳು ನಿಯಮಗಳನ್ನು ಮಾಡುದರ ಜೊತೆಗೆ ಮಿತಿ ನಿಗದಿಪಡಿಸಿವೆ. ಎಟಿಎಂನಿಂದ ನಗದು ವಿತ್ ಡ್ರಾಗೆ ಬ್ಯಾಂಕ್ ಗಳು ಗ್ರಾಹಕರಿಗೆ ಶುಲ್ಕ ವಿಧಿಸುತ್ತಿದ್ದಾರೆ.

ಗ್ರಾಹಕರಿಗೆ ಮಾಸಿಕ ಮಿತಿ ಪೂರ್ಣಗೊಂಡಿರುವ ಕುರಿತು ಅರಿವಿಲ್ಲದಿದ್ದಾಗ ಪ್ರತಿ ನಗದು ಹಿಂಪಡೆಯುವಿಕೆಯ ಮೇಲೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. RBI ನ ಹೊಸ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್‌ಗಳು ಗ್ರಾಹಕರಿಗೆ ಗರಿಷ್ಠ 21 ರೂ. ಶುಲ್ಕ ವಿಧಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವ ಬ್ಯಾಂಕ್ ಯಾವ ಶುಲ್ಕವನ್ನು ವಿಧಿಸುತ್ತದೆ ಮತ್ತು ಎಷ್ಟು ಮಿತಿಯನ್ನು ಉಚಿತವಾಗಿ ಇರಿಸಲಾಗುತ್ತದೆ ಎಂಬುದನ್ನು ತಿಳಿಯುವುದು ಮುಖ್ಯ ಆಗಿರುತ್ತದೆ.

SBI Bank ATM Charge
Image Credit: Outlookindia

SBI (State Bank Of India) ಬ್ಯಾಂಕ್ ಶುಲ್ಕ ವಿಧಿಸುವ ನಿಯಮ

ಎಸ್‌ಬಿಐ ತನ್ನ ಎಟಿಎಂಗಳಲ್ಲಿ 25,000 ರೂ.ಗಿಂತ ಹೆಚ್ಚಿನ ಖಾತೆಯ ಬ್ಯಾಲೆನ್ಸ್‌ನಲ್ಲಿ 5 ಉಚಿತ ವಹಿವಾಟುಗಳನ್ನು ನೀಡುತ್ತದೆ. ಈ ಮಿತಿಯನ್ನು ಮೀರಿದ ವಹಿವಾಟುಗಳಿಗೆ 10 ರೂ.ಶುಲ್ಕ ವಿಧಿಸಬೇಕಾಗುತ್ತದೆ. ಆದರೆ, ಇತರ ಬ್ಯಾಂಕ್‌ಗಳ ಎಟಿಎಂ ಕಾರ್ಡ್ ಬಳಸಿ ಎಸ್‌ಬಿಐ ಎಟಿಎಂನಿಂದ ಹಣ ಡ್ರಾ ಮಾಡಲು, ಪ್ರತಿ ವಹಿವಾಟಿಗೆ ರೂ. 20 ಮತ್ತು ಜಿಎಸ್‌ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

PNB Bank ATM Charge
Image Credit: Thelallantop

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)

ಪಂಜಾಬ್ ನ್ಯಾಷನಲ್ ಬ್ಯಾಂಕ್ ಐದು ವಹಿವಾಟುಗಳ ನಂತರ ಶುಲ್ಕ ವಿಧಿಸುತ್ತದೆ. ಇದರ ನಂತರ ಗ್ರಾಹಕರು ಪ್ರತಿ ವಹಿವಾಟಿಗೆ 10 ರೂ. ಪಾವತಿಸಬೇಕು . PNB ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಮೆಟ್ರೋ ನಗರಗಳಲ್ಲಿ ಮೂರು ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಐದು ಉಚಿತ ವಹಿವಾಟುಗಳ ಆಯ್ಕೆಯನ್ನು ನೀಡುತ್ತದೆ. ಇದರ ನಂತರ, ಗ್ರಾಹಕರು ಹಣವನ್ನು ಹಿಂಪಡೆಯಲು ರೂ 21 ಮತ್ತು ಜಿಎಸ್‌ಟಿ ಮತ್ತು ಇತರ ವಹಿವಾಟುಗಳಿಗೆ ರೂ 9 ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ICICI Bank ATM Charge
Image Credit: Veinmaster

ICICI ಬ್ಯಾಂಕ್ ಶುಲ್ಕ ವಿಧಿಸುತ್ತದೆ

ಐಸಿಐಸಿಐ ಬ್ಯಾಂಕ್ ತನ್ನ ಎಟಿಎಂ ಹೊಂದಿರುವವರಿಗೆ ಪ್ರತಿ ತಿಂಗಳು 3 ಉಚಿತ ವಹಿವಾಟುಗಳನ್ನು ನೀಡುತ್ತದೆ. ಉಚಿತ ವಹಿವಾಟಿನ ಮಿತಿಯನ್ನು ತಲುಪಿದ ನಂತರ, ICICI ಬ್ಯಾಂಕ್ ಪ್ರತಿ ಹಣಕಾಸು ಅಲ್ಲದ ವಹಿವಾಟಿನ ಮೇಲೆ ರೂ 8.5 ಮತ್ತು ಪ್ರತಿ ಹಣಕಾಸು ವಹಿವಾಟಿನ ಮೇಲೆ 21 ರೂ. ವಿಧಿಸುತ್ತದೆ.

HDFC Bank ATM Charge
Image Credit: Worldorgs

HDFC ಬ್ಯಾಂಕ್ ನ ವಹಿವಾಟಿನ ಮಿತಿ

HDFC ಬ್ಯಾಂಕ್ ATM ನಲ್ಲಿ ಪ್ರತಿ ತಿಂಗಳು 5 ಉಚಿತ ವಹಿವಾಟುಗಳು ಲಭ್ಯವಿವೆ. ಮಿತಿಯನ್ನು ತಲುಪಿದ ನಂತರ, ಎಟಿಎಂನಲ್ಲಿ ಪ್ರತಿ ಹಣಕಾಸು ವಹಿವಾಟಿನ ಮೇಲೆ ರೂ 8.5 ಮತ್ತು ಪ್ರತಿ ಹಣಕಾಸು ವಹಿವಾಟಿನ ಮೇಲೆ 21 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Leave A Reply

Your email address will not be published.