Home Loan Rules: ಗೃಹಸಾಲ ಮಾಡುವವರಿಗೆ RBI ನಿಂದ ಬಂಪರ್ ಗುಡ್ ನ್ಯೂಸ್, ಐತಿಹಾಸಿಕ ಯೋಜನೆ ಜಾರಿಗೆ.
ಗೃಹ ಸಾಲ ಪಡೆಯುವವರಿಗೆ ಇಲ್ಲಿದೆ ಆರ್ಬಿಐ ನಿಂದ ಹೊಸ ಯೋಜನೆ.
Home Loan Interest Rate: ನಮ್ಮದೇ ಆದ ಒಂದು ಮನೆ ಕಟ್ಟಿಸಬೇಕು ಎನ್ನುವುದು ಪ್ರತಿ ಒಬ್ಬ ವ್ಯಕ್ತಿಯ ಕನಸಾಗಿರುತ್ತದೆ. ಒಂದು ಮನೆ ಕಟ್ಟುವುದೆಂದರೆ ಸುಲಭವಲ್ಲ. ಈಗಿನ ಕಾಲದಲ್ಲಂತೂ ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಮನೆ ಕಟ್ಟುವುದು ಕನಸೇ ಆಗಿ ಉಳಿಯುವುದುಂಟು.
ಬ್ಯಾಂಕುಗಳು ಸಾಲ (Bank Loan) ನೀಡುವ ಮೂಲಕ ಬಡವರು, ಮಧ್ಯಮ ವರ್ಗದವರ ಕನಸನ್ನು ಸಾಕಾರಗೊಳಿಸುತ್ತಿವೆ. ಇದೀಗ ಗೃಹಸಾಲ(Home Loan) ಪಡೆದವರಿಗೆ ಕೇಂದ್ರ ಸರಕಾರ (Central Government) ಗುಡ್ನ್ಯೂಸ್ ಕೊಟ್ಟಿದೆ.
ಗೃಹಸಾಲ ಪಡೆದ ಸಾಲಗಾರರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಯೋಜನೆ
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of india) ರೇಪೋ ದರಗಳನ್ನು (Repo Rate ) ಹೆಚ್ಚಿಸಿದೆ. ಇದರಿಂದಾಗಿ ಹೊಸದಾಗಿ ಗೃಹ ಸಾಲ ಪಡೆಯುವವರು ಹೆಚ್ಚು EMI ಕಟ್ಟಬೇಕಾಗುತ್ತದೆ, ಆದರೆ ಈಗಾಗಲೇ ಸಾಲ ಪಡೆದವರಿಗೆ ಬ್ಯಾಂಕ್ ಗಳು ಸಾಲ ಮರುಪಾವತಿ ಅವಧಿಯನ್ನು ಹೆಚ್ಚಿಸುತ್ತವೆ.
ಅಂದರೆ ನೀವು ದೀರ್ಘಾವಧಿಯವರೆಗೆ EMI ಅನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕ್ಗಳು ಅಧಿಕಾರಾವಧಿಯನ್ನು ಇನ್ನೂ ಕೆಲವು ವರ್ಷ ಹೆಚ್ಚಳ ಮಾಡುವುದರಿಂದ ಸಾಲಗಾರರು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗಿದೆ. ಆದರೆ RBI ಇದೀಗ ಹೊಸ ರೂಲ್ಸ್ ಜಾರಿಗೆ ತಂದಿದೆ. ಇದು ಗೃಹಸಾಲ ಪಡೆದ ಸಾಲಗಾರರಿಗೆ ಪ್ರಯೋಜನವನ್ನು ತಂದುಕೊಡಲಿದೆ.
ಗ್ರಾಹಕರಿಗೆ ಈ ರೀತಿಯ ಆಯ್ಕೆ ನೀಡಲಿದೆ
RBI ಆಗಸ್ಟ್ 18 ರಂದು ಈ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹೊಸ ರೂಲ್ಸ್ ಪ್ರಕಾರ, ಬಡ್ಡಿದರಗಳು ಹೆಚ್ಚಾದಾಗ ಬ್ಯಾಂಕ್ಗಳು ಮತ್ತು ಇತರ ಹಣಕಾಸು ಕಂಪನಿಗಳು ಸಾಲಗಾರರಿಗೆ ತಿಳಿಸಬೇಕು. ಜೊತೆಗೆ EMI ಹೆಚ್ಚಿಸಬೇಕೇ ಅಥವಾ ಅವಧಿಯನ್ನು ಹೆಚ್ಚಳ ಮಾಡಬೇಕೇ ಎನ್ನುವ ಆಯ್ಕೆಯನ್ನು ಗ್ರಾಹಕರು ಮಾಡಿಕೊಳ್ಳಲು ತಿಳಿಸಬೇಕು.
ಸಾಲಗಾರರಿಗೆ ಸಾಲದ ಅವಧಿಯನ್ನು ಹೆಚ್ಚಿಸುವ, EMI ಮೊತ್ತವನ್ನು ಹೆಚ್ಚಿಸುವ ಅಥವಾ ಎರಡರ ಆಯ್ಕೆಯನ್ನು ನೀಡಬೇಕು. ಈ ಹೊಸ ನಿಯಮ ದೊಂದಿಗೆ, ಬ್ಯಾಂಕ್ಗಳು ಇಎಂಐ ಅವಧಿಯನ್ನು ಹೆಚ್ಚಿಸುವಾಗ ಅನಿಯಂತ್ರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಹೊಂದಿರುವುದಿಲ್ಲ.
50 ಲಕ್ಷ ರೂ. ಗೃಹ ಸಾಲಕ್ಕೆ ರೂ.33 ಲಕ್ಷ ಬಡ್ಡಿ ಉಳಿತಾಯ
ಬ್ಯಾಂಕುಗಳಿಂದ ಒಂದೊಮ್ಮೆ 50 ಲಕ್ಷ ರೂ. ಗೃಹ ಸಾಲ ತೆಗೆದುಕೊಂಡಿದ್ದರೆ, ಸಾಲದ ಮರುಪಾವತಿಗೆ 38,765 ರೂ. EMI ಪಾವತಿ ಮಾಡಬೇಕು. ಈ ಲೆಕ್ಕಾಚಾರದಲ್ಲಿ ಒಟ್ಟು 43.04 ಲಕ್ಷ ರೂಪಾಯಿ ಬಡ್ಡಿದರವನ್ನು ನೀವು ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ. ಸಾಲ ತೆಗೆದುಕೊಂಡ ಮೂರು ವರ್ಷಗಳವರೆಗೆ ಬಡ್ಡಿ ದರವು ಶೇಕಡಾ 9.25 ಕ್ಕೆ ಹೆಚ್ಚಾಗುತ್ತದೆ.
ಒಂದು ವರ್ಷದೊಳಗೆ ರೆಪೋ ದರ ಶೇ.2.50ರಷ್ಟು ಏರಿಕೆಯಾಗಿದೆ. RBI ಹೊಸ ನಿಯಮದ ಪ್ರಕಾರ EMI ಹೆಚ್ಚಿಸಬೇಕೇ ? ಅಥವಾ ಅವಧಿ ವಿಸ್ತರಣೆ ಮಾಡಬೇಕೆ ಎಂಬ ನಿರ್ಧಾರದ ಮೇಲೆ ನಿಮ್ಮ ಗೃಹಸಾಲದ ಬಡ್ಡಿದರ ಇಳಿಕೆ ಮಾಡಿಕೊಳ್ಳಬಹುದು. ಸಾಲ ಪಡೆದುಕೊಂಡ ಮೂರು ವರ್ಷಗಳ ನಂತರ ನೀವು 17 ವರ್ಷಗಳಲ್ಲಿ ಗೃಹ ಸಾಲವನ್ನು ಮರುಪಾವತಿಸಿದರೆ EMI( EMI) 44,978 ರೂ.ಕ್ಕೆ ಏರಿಕೆ ಆಗಲಿದೆ. ಒಟ್ಟು ಬಡ್ಡಿ ರೂ. 55.7 ಲಕ್ಷ ಇರುತ್ತದೆ.