Scam Alert: ‘ಮುಂದಿನ 2 ಗಂಟೆಯಲ್ಲಿ ನಿಮ್ಮ ಸಿಮ್ ಕಾರ್ಡ್ ಬಂದ್ ಆಗುತ್ತೆ’, ನಿಮ್ಗೂ ಅಂತಹ ಕರೆ ಬಂದ್ರೆ, ತಕ್ಷಣ ಈ ಕೆಲಸ ಮಾಡಿ ;
ನಿಮ್ಮ ಮೊಬೈಲ್ ಗೆ ಬಂದ DOT ಹೆಸರಿನ ಕರೆಯನ್ನು ತಕ್ಷಣ ಕಟ್ ಮಾಡಿ ಹಾಗು ಕಡ್ಡಾಯವಾಗಿ ನಿಮ್ಮ ಯಾವುದೇ ಮಾಹಿತಿ ಶೇರ್ ಮಾಡಿಕೊಳ್ಳಬೇಡಿ
Scam Alert: ದೇಶದಲ್ಲಿ ಸಾಮಾನ್ಯ ಜನರನ್ನು ಮೋಸ ಮಾಡಲೆಂದು ಹಲವು ಮಾರ್ಗಗಳನ್ನು ಸ್ಕ್ಯಾಮರ್ಸ್ (Scanners) ಗಳು ಹೊಂದಿರುತ್ತಾರೆ. ನಾವು ಎಷ್ಟು ಜಾಗರೂಕರಾಗಿದ್ದರು ಸಾಲುವುದಿಲ್ಲ. ಹಾಗಾಗಿ ಕೆಲವು ಅಪರಿಚಿತ ಕರೆಗಳನ್ನು ಖಂಡಿತವಾಗಿ ರೀಸೀವ್ ಮಾಡಬೇಡಿ ಯಾಕೆಂದರೆ ಸ್ಕ್ಯಾಮರ್ಸ್ ಗಳು ನಮಗೆ ವಂಚಿಸಲೆಂದೇ ಕರೆ ಮಾಡಿ ಮಾತನಾಡುತ್ತಾರೆ.
ಅಷ್ಟೇ ಅಲ್ಲದೆ ಈಗ ಅನೇಕರು DOT ಹೆಸರಿನಲ್ಲಿ ಕರೆಯನ್ನ ಸ್ವೀಕರಿಸುತ್ತಿದ್ದು, ಅದರಲ್ಲಿ ಮುಂದಿನ 2 ಗಂಟೆಗಳಲ್ಲಿ ಸಿಮ್ ಕಾರ್ಡ್ ಬಂದ್ (Sim Card Bandh) ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ. ಅಂತಹ ಕರೆಗಳನ್ನು ನಂಬಿ ಯಾವುದೇ ಕಾರಣಕ್ಕೂ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
ನಕಲಿ ಕರೆಗಳ ಮೂಲಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ
ಇತ್ತೀಚಿನ ದಿನಗಳಲ್ಲಿ ಡಿಒಟಿ ಹೆಸರಿನಲ್ಲಿ ಕಾಲ್ ಮಾಡಿ ನಾವು ಅಧಿಕಾರಿಗಳು ನಿಮ್ಮ ಸಿಮ್ ರದ್ದಾಗಲಿದೆ ಅಂತ ಹೇಳಿ, ನಿಮ್ಮ ಎಲ್ಲಾ ಮಾಹಿತಿ ಪಡೆದು ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಕೊಳ್ಳೆ ಹೊಡೆಯುವ ಹೊಸ ಜಾಲ ಪ್ರಾರಂಭ ಆಗಿದೆ. ಒಂದು ವಿಷಯವನ್ನು ನೀವು ಯಾವಾಗಲು ಗಮನದಲ್ಲಿ ಇಡೀ ಅದೇನೆಂದರೆ ಅಂತಹ ಯಾವುದೇ ಕರೆಯನ್ನು ಡಿಒಟಿ ಮಾಡುತ್ತಿಲ್ಲ. ದೂರಸಂಪರ್ಕ ಇಲಾಖೆ ಅಂತಹ ಕರೆಗಳನ್ನ ತಕ್ಷಣವೇ ಕಡಿತಗೊಳಿಸುವಂತೆ ಮತ್ತು ಕರೆಯಲ್ಲಿ ಯಾವುದೇ ವೈಯಕ್ತಿಕ ವಿವರಗಳನ್ನ ಹಂಚಿಕೊಳ್ಳದಂತೆ ಮನವಿ ಮಾಡಿದೆ.
ಅಧಿಕಾರಿಗಳಿಗೆ ನಕಲಿ ಕರೆಗಳ ನಂಬರ್ ಅನ್ನು ವರದಿ ಮಾಡಿ
ಭಾರತದಲ್ಲಿ ಟೆಲಿಕಾಂ ಸೇವೆಗಳನ್ನ ದೂರಸಂಪರ್ಕ ಇಲಾಖೆ ನಿಯಂತ್ರಿಸುತ್ತದೆ. ಇದರ ಲಾಭವನ್ನ ಪಡೆದುಕೊಂಡು, ಸ್ಕ್ಯಾಮರ್ಸ್ ಗಳು ನಕಲಿ ಕರೆಗಳನ್ನ ಮಾಡುವ ಮೂಲಕ ಜನರನ್ನ ಗುರಿಯಾಗಿಸುತ್ತಿದ್ದಾರೆ. ನೀವು DOT ಅಧಿಕಾರಿ ಎಂದು ಹೇಳಿಕೊಳ್ಳುವ ಕರೆಯನ್ನ ಸ್ವೀಕರಿಸಿದ್ರೆ, ತಕ್ಷಣ ಕರೆಯನ್ನ ಕಡಿತಗೊಳಿಸಿ ಮತ್ತು ಸಂಖ್ಯೆಯನ್ನ ನಿರ್ಬಂಧಿಸಬೇಕು ಎಂದು DOT ಹೇಳಿದೆ.
ನಂತ್ರ, ಆ ಸಂಖ್ಯೆಯನ್ನ ವರದಿ ಮಾಡಿ ಇದರಿಂದ ಈ ಕರೆ ಇನ್ನೊಬ್ಬ ವ್ಯಕ್ತಿಗೆ ಬಂದಾಗ, ಈ ಸಂಖ್ಯೆ ಸ್ಕ್ಯಾಮ್ ಗೆ ಸಂಬಂಧಿಸಿದೆ ಎಂದು ಅವರಿಗೆ ಮುಂಚಿತವಾಗಿ ತಿಳಿಯುತ್ತದೆ. ಟ್ರೂಕಾಲರ್’ನಂತಹ ಅಪ್ಲಿಕೇಶನ್’ಗಳು ಸಂಖ್ಯೆಯನ್ನ ವರದಿ ಮಾಡಲು ಮತ್ತು ಹಗರಣದ ಪ್ರಕಾರವನ್ನ ವಿವರಿಸಲು ನಿಮಗೆ ಆಯ್ಕೆಯನ್ನ ನೀಡುತ್ತವೆ. ಹಾಗಾಗಿ ಇನ್ನು ಮುಂದೆ ಯಾವುದೇ ಕರೆ ಬಂದರು ಬಹಳ ಜಾಗರೂಕರಾಗಿ ಪ್ರತಿಕ್ರಿಯಿಸಿ ಎನ್ನಲಾಗಿದೆ.