Mid-Day Meal: 1 ರಿಂದ 10 ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್, ಮದ್ಯಾಹ್ನದ ಬಿಸಿ ಊಟದಲ್ಲಿ ದೊಡ್ಡ ಬದಲಾವಣೆ.

ಇನ್ಮುಂದೆ ಬಿಸಿಯೂಟ ವಿತರಣೆಯಲ್ಲಿ ಬದಲಾವಣೆ, ಸರ್ಕಾರದ ಆದೇಶ.

School Students Mid-Day Meal: ಪ್ರತಿ ಸರ್ಕಾರೀ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದು, ಈ ಯೋಜನೆ ಬಹಳ ವರ್ಷಗಳ ಹಿಂದೆ ಬಂದಿದಾಗಿದ್ದು, ಈಗ ಈ ಬಿಸಿಯೂಟ ಕಾರ್ಯದಲ್ಲಿ ಇನ್ನಷ್ಟು ಬದಲಾವಣೆ ಮಾಡುವ ನಿಟ್ಟಿನಲ್ಲಿ ಶಾಲೆಗಳಲ್ಲಿ ನೀಡಲಾಗುತ್ತಿರುವಂತ ಬಿಸಿಯೂಟದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ.

ಅದರೊಟ್ಟಿಗೆ ಪೌಷ್ಟಿಕಾಂಶವನ್ನು ಹೆಚ್ಚಿಸೋ ಆಹಾರವನ್ನು ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ.ಈ ಬಗ್ಗೆ ವಿಧಾನಸೌಧದಲ್ಲಿ ಜಂಟಿಯಾಗಿ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಭೆ ನಡೆಸಿದರು.

school students mid day meal
Image Credit: Timesofindia.indiatimes

ಉನ್ನತ ಮಟ್ಟದ ಅಕ್ಕಿ ಪೂರೈಕೆ

ಆಹಾರ ಇಲಾಖೆ ಅಕ್ಕಿಯ ಗುಣಮಟ್ಟ ಹೆಚ್ಚಿಸಬೇಕೆಂದರೇ ಅಕ್ಕಿಗೆ ನಿಗದಿ ಮಾಡಿರೋ ದರಕ್ಕಿಂತ ಹೆಚ್ಚಿನ ದರ ನೀಡಬೇಕಾಗುತ್ತದೆ. ಶಿಕ್ಷಣ ಇಲಾಖೆಯು ಸದ್ಯ ಪಿಡಿಎಸ್ ಮೂಲಕ ಅಕ್ಕಿ ಖರೀದಿಗೆ ಪ್ರತಿ ಕೆಜಿಗೆ 30 ರೂ.ನೀಡುತ್ತಿದೆ, ಆದರೆ ಎಫ್ ಸಿಐ 34 ರೂ.ನಿಗದಿಪಡಿಸಿದೆ.

ಗುಣಮಟ್ಟದ ಅಕ್ಕಿ ಪೂರೈಕೆಗಾಗಿ ಎಫ್ ಸಿಐ ಮಾದರಿಯಲ್ಲಿಯೇ 34 ರೂ. ನೀಡಬೇಕು ಎಂದು ಮನವಿ ಮಾಡಿದರು. ಈ ಸಭೆಯ ಬಳಿಕ ಮಾತನಾಡಿದಂತ ಸಚಿವ ಮಧು ಬಂಗಾರಪ್ಪ (Madhu Bangarappa) ಸದ್ಯ ಆಹಾರ ಇಲಾಖೆ ಸಾರ್ವಜನಿಕ ವಿತರಣಾ ಪದ್ಧತಿ ಮೂಲಕ ಅಕ್ಕಿ ಪೂರೈಕೆ ಮಾಡುತ್ತಿದ್ದು, ಅದರ ಗುಣಮಟ್ಟ ಹೆಚ್ಚಿಸಬೇಕು ಎಂದರು.

Mid-Day Meal scheme
Image Credit: Indiatimes

ಪೌಷ್ಟಿಕಾಂಶವನ್ನು ಹೆಚ್ಚಿಸುವ ಉದ್ದೇಶ
ಶಾಲಾ ಮಕ್ಕಳಿಗೆ ನೀಡುತ್ತಿರುವ ಮದ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳ ಆರೋಗ್ಯ ದ್ರಷ್ಟಿಯಿಂದ ಹಾಗು ಅವರಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವ ಉದ್ದೇಶ ಕ್ಕಾಗಿ ಉತ್ತಮ ಗುಣಮಟ್ಟದ ಆಹಾರ ನೀಡುವ ಕುರಿತು ಸಭೆಯಲ್ಲಿ ಮನವಿ ಮಾಡಿದ್ದಾರೆ.

Leave A Reply

Your email address will not be published.