School Time: ಮಕ್ಕಳನ್ನ ಶಾಲೆಗೆ ಕಳುಹಿಸುವ ಎಲ್ಲಾ ಪೋಷಕರಿಗೆ ಗುಡ್ ನ್ಯೂಸ್, ಶಾಲಾ ಸಮಯದಲ್ಲಿ ಬದಲಾವಣೆ.
ಶಾಲಾ ಮಕ್ಕಳಿಗೆ ಸಮಯದಲ್ಲಿ ಬದಲಾವಣೆ, ಇದರ ಪರಿಣಾಮ ಏನಾಗಬಹುದು?
School Time Change: ಸಾಮಾನ್ಯವಾಗಿ ದಿನ ಬೆಳ್ಳಿಗ್ಗೆ 09 ರಿಂದ 10 ಗಂಟೆಯ ಅಷ್ಟರಲ್ಲಿ ಎಲ್ಲಾ ಶಾಲೆಗಳು ಆರಂಭವಾಗುವುದು ಸಹಜ. ಈ ಕ್ರಮ ಮೊದಲಿನಿಂದಲೂ ಇದ್ದಿದಾಗಿದೆ. ಆದರೆ ಈ ಕ್ರಮದಲ್ಲಿ ಬದಲಾವಣೆ ಮಾಡುವ ಕುರಿತು ಚರ್ಚೆ ಆರಂಭವಾಗಿದೆ.
ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಶಾಲಾ ಸಮಯ ಬದಲಾವಣೆ ಬಗ್ಗೆ ಚರ್ಚೆ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಮುಖಂಡರ ಸಭೆ ಕರೆದು ತೀರ್ಮಾನಿಸಲು ಮುಂದಾಗಿದೆ.

ಶಾಲಾ ಸಮಯ ಅರ್ಧ ಗಂಟೆ ಬೇಗ ಮಾಡುವ ನಿರ್ಧಾರ
ರಾಜ್ಯಾದ್ಯಂತ ಬಹುತೇಕ ಶಾಲೆಗಳಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಶಾಲೆಗಳು ಆರಂಭವಾಗುತ್ತವೆ. ಶಾಲಾ ಸಮಯವನ್ನು ಅರ್ಧ ಗಂಟೆ ಬೇಗನೆ ಮಾಡಬೇಕೆಂಬ ಚಿಂತನೆ ನಡೆದಿದೆ. ಆದರೆ, ಇದರಿಂದ ಅನಾನುಕೂಲವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಕ್ಕಳ ಮೇಲೆ ಅಡ್ಡ ಪರಿಣಾಮ
ಮಕ್ಕಳು ಬೆಳಿಗ್ಗೆ ಬೇಗನೇ ಏಳಬೇಕು, ದೈಹಿಕ ಚಟುವಟಿಕೆಗೆ ಕಡಿಮೆ ಅವಕಾಶ ಸಿಗುತ್ತದೆ. ಕಡಿಮೆ ನಿದ್ದೆಯಿಂದ ಆರೋಗ್ಯ ಸಮಸ್ಯೆ ಎದುರಾಗಬಹುದು. ಸಂಜೆ ಸಮಯಕ್ಕೆ ಶಾಲೆ ಬಿಡುವುದು ವಿಳಂಬವಾಗುತ್ತದೆ. ಶಾಲಾ ಸಮಯಕ್ಕೆ ಉದ್ಯೋಗಿಗಳು ಕಂಪನಿಗಳಿಂದ ಹೊರಬರುವುದರಿಂದ ಸಂಚಾರ ದಟ್ಟಣೆ ಆಗಬಹುದು. ಶಾಲಾ ಸಮಯ ಬದಲಾಯಿಸಿದರೆ ಅನಾನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ಈ ಕ್ರಮ
ಸಂಚಾರದಟ್ಟಣೆಗೆ ಪ್ರಮುಖವಾಗಿ ಕಾರಣವಾಗಿರುವ ಶಾಲೆ, ಕೈಗಾರಿಕೆ, ವಾಣಿಜ್ಯ ಸಂಸ್ಥೆ, ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಇತರರ ಸಭೆ ಕರೆದು ಚರ್ಚೆ ನಡೆಸಲು ಕೋರ್ಟ್ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಬೆಂಗಳೂರಿನಲ್ಲಿ ಮಾತ್ರ ಸಮಯ ಬದಲಾವಣೆ ಮಾಡಬೇಕೆ ಅಥವಾ ರಾಜ್ಯಾದ್ಯಂತ ಶಾಲೆಗಳ ಸಮಯ ಬದಲಾವಣೆ ಮಾಡಬೇಕೆಂಬುದರ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಶಾಲೆ ಮತ್ತು ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆಗೆ ಹೈಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿದೆ.