Second PUC: ದ್ವಿತೀಯ PUC ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳಿಗೆ ಇನ್ನೊಂದು ಆದೇಶ, ಶಿಕ್ಷಣ ಇಲಾಖೆಯ ಘೋಷಣೆ.

ಶಿಕ್ಷಣ ಇಲಾಖೆಯಿಂದ ಕಡ್ಡಾಯ ನಿಯಮ ಜಾರಿ, ದ್ವಿತೀಯ PUC ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗಾಗಿ ಹೊಸ ನಿಯಮ.

Second PUC Annual Exam: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಈ ಸುದ್ದಿ ಬಹಳ ಉಪಯುಕ್ತಕರ ಆಗಿದೆ. ಖಾಸಗಿ ಆಗಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುವ ಕುರಿತು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಒಂದು ಮಹತ್ವದ ನಿಯಮವನ್ನು ಜಾರಿಗೊಳಿಸಿದೆ.

ಈ ಒಂದು ನಿಯಮವು ಅಭ್ಯರ್ಥಿಗಳಿಗೆ ಬಹಳ ಸಹಾಯಕ ಆಗಲಿದೆ. ಅದೇನೆಂದರೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿಸಿಕೊಳ್ಳುವ ದಿನಾಂಕ ವಿಸ್ತರಣೆ ಮಾಡಿದೆ. ಈ ಕುರಿತು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ಹೊರಡಿಸಿದೆ. 

Second PUC Annual Exam
Image Credit: Timesofindia

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನೋಂದಾವಣೆಗೆ ದಿನಾಂಕ ವಿಸ್ತರಣೆ

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪರೀಕ್ಷೆ ನೋಂದಾವಣೆಗೆ ದಿನಾಂಕ ವಿಸ್ತರಣೆ ಮಾಡಿದ್ದು, 2024 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- ಕೈ ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿಸಿಕೊಳ್ಳಲು ಉಲ್ಲೇಖ 02 ರಲ್ಲಿ ದಿನಾಂಕ 13-11-2023 ರವರೆಗೆ ರೂ 500/- ಗರಿಷ್ಠ ದಂಡಶುಲ್ಕದೊಂದಿಗೆ ಅವಕಾಶ ನೀಡಲಾಗಿತ್ತು. ಆದರೆ ಪೋಷಕರು ಹಾಗೂ ವಿದ್ಯಾರ್ಥಿಗಳ ದೂರವಾಣಿ ಕರೆಗಳ ಮೇರೆಗೆ ಖಾಸಗಿ ಅಭ್ಯರ್ಥಿಗಳಾಗಿ ನೊಂದಾಯಿಸಿಕೊಳ್ಳುವ ದಿನಾಂಕವನ್ನು ವಿಸ್ತರಿಸಿ ಆದೇಶಿಸಲಾಗಿದೆ.

Second PUC Annual Exam New Update
Image Credit: The Indian Express

ಪರೀಕ್ಷೆ ನೋಂದಾವಣೆಗೆ ಸಂಬಂಧಿಸಿದ ಮಾಹಿತಿ

ಜಿಲ್ಲಾ ಉಪನಿರ್ದೇಶಕರು ಪ್ರಾಂಶುಪಾಲರಿಂದ ಸ್ವೀಕರಿಸಿದ ಅರ್ಜಿಗಳನ್ನು ಮಂಡಲಿಯ ಜಾಲತಾಣದ PU Exam Portal Login ನಲ್ಲಿ Update ಮಾಡಿರುವುದನ್ನು ಖಾತ್ರಿಪಡಿಸಿಕೊಂಡು, ಪ್ರಾಂಶುಪಾಲರಿಂದ Update ಮಾಡಿರುವುದಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆ ಪತ್ರ ಪಡೆದ ನಂತರ ಕಾಲೇಜುವಾರು ಕ್ರೋಢೀಕೃತ ವಿದ್ಯಾರ್ಥಿಗಳ ಪಟ್ಟಿ, ಶುಲ್ಕ ಪಾವತಿಸಿರುವ ಮೂಲ ಚಲನ್ ಹಾಗೂ ಚೆಕ್ಲಿಸ್ಟನ್ನು ಖುದ್ದಾಗಿ ಕೇಂದ್ರ ಕಛೇರಿಗೆ ದಿನಾಂಕ: 04-12-2023 ರಂದು ಸಲ್ಲಿಸಲು ಸೂಚಿಸಲಾಗಿದೆ ಎಂದು ನಿರ್ದೇಶಕರು, ಪದವಿ ಪೂರ್ವ ಕರ್ನಾಟಕ’ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದ್ದಾರೆ.

Leave A Reply

Your email address will not be published.