Seetha Rama: ಸೀತಾರಾಮ ಧಾರಾವಾಹಿಯಲ್ಲಿ ಸಿಹಿಗೆ ಆಘಾತ, ಸಿಹಿಯನ್ನು ಎತ್ತುಕೊಂಡು ಆಸ್ಪತ್ರೆಗೆ ಓಡಿದ ರಾಮ.
ಸೀತ ರಾಮ ಧಾರಾವಾಹಿಯಲ್ಲಿ ಸಿಹಿ ಆರೋಗ್ಯದಲ್ಲಿ ಏರುಪೇರು.
Seetha Rama Serial: ‘ಸೀತಾರಾಮ’ ಧಾರಾವಾಹಿ (Seetha Rama Serial) ಈಗಿನ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಧಾರಾವಾಹಿಯಲ್ಲಿ ಸಿಹಿಯೇ (Sihi) ಹೈಲೈಟ್. ಸೀತಮ್ಮನ ಕಷ್ಟಕ್ಕೆ ಯೋಚಿಸುವಾಗಂತು ದೊಡ್ಡ ಯಜಮಾನಿಯಂತೆ ಕಾಣುತ್ತಾಳೆ. ಕೋಪಗೊಂಡರೆ ಎದುರಿಗಿರುವವರು ಸುಟ್ಟು ಹೋಗಬೇಕು ಆ ರೀತಿ ಭಯ ಹುಟ್ಟಿಸುತ್ತಾಳೆ.
ದೊಡ್ಡ ದೊಡ್ಡವರನ್ನು ಮೀರಿಸುವಂತ ನಟನಾ ಕೌಶಲ್ಯವನ್ನು ಸಿಹಿ ಪುಟ್ಟ ಹೊಂದಿದ್ದಾಳೆ. ನಗುವುದಕ್ಕೆ ಶುರು ಮಾಡಿದರೆ ಎಲ್ಲರ ಮನಸ್ಸು ಅರಳುತ್ತದೆ. ಎಷ್ಟೇ ಗುಣಗಾನ ಮಾಡಿದರೂ ಸಿಹಿಯ ಹೊಗಳಿಕೆ ಕಡಿಮೆಯೆ.
ಸಿಹಿಗೆ ಸಪ್ರೈಸ್ ಕೊಟ್ಟ ರಾಮ್, ಸಿಹಿ ಫುಲ್ ಖುಷಿ
ಗಣೇಶ ಹಬ್ಬದ ಸಮಯವಾದ್ದರಿಂದ ಗಣೇಶನನ್ನು ಕೂರಿಸುವುದಕ್ಕಾಗಿ ಸಿಹಿ ಅಂಡ್ ಗ್ಯಾಂಗ್ ಕಲೆಕ್ಷನ್ ಮಾಡಿತ್ತು. ಹೇಳಿಕೊಳ್ಳುವಷ್ಟು ಕಲೆಕ್ಷನ್ ಆಗಿರಲಿಲ್ಲವಾದರೂ, ಆಗಿದ್ದ ಕಲೆಕ್ಷನ್ ಹಣವನ್ನೆಲ್ಲ ಮಾವ ಕಿತ್ತುಕೊಂಡು ಹೋಗಿದ್ದ. ಕಣ್ಣೀರಿಡುತ್ತ ಬಂದ ಫ್ರೆಂಡ್‌ಗೆ ರಾಮ್ ಪ್ರಾಮೀಸ್ ಮಾಡಿದ್ದ. ಅದರಂತೆ ತನ್ನ ಛೋಟಾ ಫ್ರೆಂಡ್‌ಗಾಗಿ ಗಣಪತಿಯನ್ನು ತಂದುಕೊಟ್ಟಿದ್ದಾನೆ. ಇನ್ನು ಕಲೆಕ್ಷನ್‌ನಲ್ಲೇ ಮುಳುಗಿದ್ದ ಫ್ರೆಂಡ್‌ಗೆ ಸಪ್ರೈಸ್ ಆಗಿ ರಾಮ್ ಗಣೇಶನನ್ನು ತಂದು ಕೊಟ್ಟಿದ್ದಾನೆ.
ಸಿಹಿ ಕೋರಿಕೆಗೆ ವರಕೊಟ್ಟ ಗಣಪತಿ
ಈ ಬಾರಿಯ ಚೆಂದವಾದ ಗಣೇಶನಿಗೆ ಐದು ಸಾವಿರ ಬಹುಮಾನ ಎಂದು ದಾರಿಯಲ್ಲಿ ಹೋಗುವಾಗ ಘೋಷಣೆ ಮಾಡಿದ್ದಾರೆ. ಸೀತಮ್ಮನಿಗೆ ಸಹಾಯ ಆಗುತ್ತೆ ಅಂತ ಸಿಹಿಗೆ ಹಠ, ಹೇಗಾದರೂ ಮಾಡಿ ಆ ಬಹುಮಾನ ಗೆಲ್ಲಬೇಕೆಂದು ಅದಕ್ಕೆ ಅಂತ ಗಣೇಶನನ್ನು ಕೂರಿಸಲು ಓಡಾಡಿದಳು. ಈಗ ರಾಮ್ ನೀಡಿರುವ ಗಣೇಶನಿಂದ ಆ ಬಹುಮಾನ ಸಿಹಿಯ ಪಾಲಾಗಿದೆ. ಸಿಹಿಗಂತೂ ಸಂತಸ ತಡೆಯುವುದಕ್ಕೆ ಆಗುತ್ತಿಲ್ಲ. ಯಾಕಂದರೆ ಬಹುಮಾನ ನಮಗೆ ಬರಬೇಕೆಂದು ವಿನಾಯಕ ಬಳಿ ಕಳಕಳಿಯಿಂದ ಕೇಳಿಕೊಂಡಿದ್ದಳು.
ರಾಮ್ ಸೀತಮ್ಮ ಸೇರಿ ಸಕತ್ ಡಾನ್ಸ್
ರಾಮ್‌ನಿಂದಾಗಿ ಶಾಂತಮ್ಮನ ವಠಾರದಲ್ಲಿ ಗಣಪತಿ ಇಡುವಂತೆ ಆಯಿತು. ಇಡೀ ವಠಾರದ ಜನರೆಲ್ಲ ಸೇರಿ ಭಕ್ತಿ ಭಾವದಿಂದ ಗಣೇಶನನ್ನು ಕೂರಿಸಿ, ಪೂಜೆ ಮಾಡಿದರು. ಅದರಲ್ಲೂ ಇದೇ ಗಣೇಶನಿಗೆ ಬಹುಮಾನ ಬಂದಿದ್ದಂತು ಸಿಹಿ ಮತ್ತು ಗ್ಯಾಂಗ್‌ಗೆ ಸಂತಸ ಸ್ವಲ್ಪ ಹೆಚ್ಚಾಗಿತ್ತು. ಅದಕ್ಕೆ ಕುಣಿದು ಕುಪ್ಪಳಿಸಿದರು. ಇನ್ನು ರಾಮ್ ಅಂತು ಮಕ್ಕಳಲ್ಲಿ ಮಗುವಾಗಿದ್ದ. ಸೀತಮ್ಮ ಕೂಡ ಎಲ್ಲರ ಜೊತೆಗೆ ಸೇರಿ ಡ್ಯಾನ್ಸ್ ಮಾಡುತ್ತಿದ್ದಳು.
ಸಿಹಿಯಾ ಆರೋಗ್ಯದಲ್ಲಿ ಏರುಪೇರು
ಸಿಹಿ ಗಣೇಶನಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಕಡೆಗೂ ಗಣೇಶ ಕಣ್ಣು ಬಿಟ್ಟ. ಈ ಸಂಭ್ರಮದಲ್ಲಿ ಸಿಹಿ ಸರಿಯಾಗಿ ಊಟ, ತಿಂಡಿ ಮಾಡಿಲ್ಲ. ಸೀತಮ್ಮ ಕೂಡ ಇದರ ಕಡೆ ಗಮನ ಕೊಟ್ಟಿಲ್ಲ ಅಂತ ಕಾಣುತ್ತೆ. ರಾಮ್ ಜೊತೆಗೆ ಕುಣಿಯುತ್ತಿದ್ದವಳು ಇದ್ದಕ್ಕಿದ್ದ ಹಾಗೆ ಸೈಡಿಗೆ ಹೋಗಿದ್ದಳು. ತಲೆ ಸುತ್ತಿ ಬಿದ್ದೆ ಬಿಟ್ಟಳು. ಸಿಹಿ ಕಾಣದೆ, ಹುಡುಕುತ್ತಾ ಡ್ಯಾನ್ಸ್‌ನಿಂದ ಆಚೆ ಬಂದ ರಾಮ್‌ಗೆ ಸಿಹಿ ಬಿದ್ದಿರುವುದು ಗೊತ್ತಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾನೆ. ಸಿಹಿಯ ಶುಗರ್ ಕಾಯಿಲೆಗೆ ರಾಮ್ ಪರಿಹಾರ ಹುಡುಕಬಹುದು.