Seetha Rama Serial: ಸೀತಾ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು, ಆಂಬುಲೆನ್ಸ್ ಗೆ ಕಾಲ್ ಮಾಡಿ ಸಮಸ್ಯೆ ತಂದುಕೊಂಡ ರಾಮ್.
ಆತಂಕದಲ್ಲಿ ರಾಮ್ ಮಾಡಿದ ಯಡವಟ್ಟು, ರಾಮ್ ನನ್ನು ಇನ್ನಷ್ಟು ಸಂಕಷ್ಟಕ್ಕೆ ಗುರಿ ಮಾಡುತ್ತಾ...?
Seetha Rama Serial: ಸೀತಾರಾಮ(Seetha Rama) ಧಾರಾವಾಹಿಯಲ್ಲಿ ರಾಮ್ ಸೀತಾ ಹಿಂದೆ ಓಡಾಡುತ್ತಿದ್ದರೆ, ಭಾರ್ಗವಿ ರಾಮ್ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂದು ತಲೆಕೆಡಿಸಿಕೊಂಡು ಪತ್ತೆದಾರಿಕೆ ಶುರು ಮಾಡಿದ್ದಾಳೆ.
ರಾಮ ಯಾವುದೇ ಕಾರಣಕ್ಕೂ ಖುಷಿಯಾಗಿರುವುದು ಇಷ್ಟವಿರದ ಭಾರ್ಗವಿ, ಸತ್ಯ ತಿಳಿಯುವುದಕ್ಕೆ ಬೇರೆ ಬೇರೆ ಮಾರ್ಗಗಳನ್ನೇ ಹಿಡಿಯುತ್ತಾಳೆ. ಆದರೆ ರಾಮ ಸದ್ಯಕ್ಕಂತು ಚಿಕ್ಕಿಯ ಕೈಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾನೆ. ಇವತ್ತು ರಾಮನೇ ಲಾಕ್ ಆಗುವ ಎಲ್ಲಾ ಸಾಧ್ಯತೆ ಇದೆ.
ರಾಮ್ ನಿಂದ ಸೀತಾಗೆ ಉಪಚಾರ
ಸೀತಾಳಿಗೆ ಜ್ವರ ಎಂದು ಗೊತ್ತಾದ ಕೂಡಲೇ ರಾಮ್, ಸೀತಾ ಮನೆಗೆ ಬಂದಿದ್ದಾನೆ. ಸೀತಾಳಿಗೆ ಎದ್ದು ತಿಂಡಿ ಮಾಡುವಷ್ಟು ಶಕ್ತಿ ಇರಲಿಲ್ಲ. ರಾಮ್ ಬಂದ ಮೇಲೆ ತಿಂಡಿ ಮಾಡಿ, ಮಾತ್ರೆ ಕೊಟ್ಟು ಉಪಚರಿಸಿದ್ದಾನೆ. ಇದರಿಂದಾಗಿ ಸೀತಾ ಕೊಂಚ ಸುಧಾರಿಸಿಕೊಂಡಿದ್ದಳು. ಮುಖ್ಯವಾಗಿ ಸಿಹಿಗೆ ರಾಮ್ ಇರುವುದೇ ಒಂದು ಧೈರ್ಯ. ಸೀತಾಳಿಗೆ ರೆಸ್ಟ್ ಮಾಡಲು ಹೇಳಿ ಮನೆಯ ಎಲ್ಲಾ ಕೆಲಸವನ್ನು ಇಬ್ಬರು ಸೇರಿ ಮುಗಿಸಿದ್ದಾರೆ.
ಸೀತಾಳ ಆರೋಗ್ಯದಲ್ಲಿ ಮತಷ್ಟು ಏರುಪೇರು
ಸೀತಾಳಿಗೆ ತುಂಬಾನೇ ಆರೋಗ್ಯ ಸರಿ ಇಲ್ಲ ಅನ್ನುವುದು ರಾಮ್‌ಗೆ ಅರ್ಥವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದ. ಸೀತಾ ಇದಕ್ಕೆ ಒಪ್ಪದೆ ಇದ್ದರು ರಾಮ್ ಆಂಬುಲೆನ್ಸ್‌ಗೆ ಕಾಲ್ ಮಾಡಿದ. ಆದರೆ, ಇಲ್ಲೊಂದು ಸಮಸ್ಯೆ ಎಂದರೆ ಫ್ಯಾಮಿಲಿ ಆಸ್ಪತ್ರೆಗೆ ರಾಮ್ ಕಾಲ್ ಮಾಡಿದ್ದಾನೆ. ಗಾಬರಿಯಲ್ಲಿ, ಆತಂಕದಲ್ಲಿ ರಾಮ್ ಫ್ಯಾಮಿಲಿ ಡಾಕ್ಟರ್‌ಗೆ ಕರೆ ಮಾಡಿದ್ದಾನೆ. ಹೀಗಾಗಿ ಆಂಬುಲೆನ್ಸ್ ವಠಾರಕ್ಕೆ ಬರುವ ಬದಲಿಗೆ ದೇಸಾಯಿ ಮನೆ ಕಡೆಗೆ ಹೊರಟಿದೆ.
ರಾಮ್ ಮಾಡಿದ ಯಡವಟ್ಟಿನಿಂದ ಭಾರ್ಗವಿಗೆ ಸತ್ಯ ಗೊತ್ತಾಗುವ ಸಾಧ್ಯತೆ
ಮೊದಲೇ ಬೆಳಗ್ಗೆಯಿಂದ ರಾಮ್ ಆಫೀಸಿಗೆ ಹೋಗಿಲ್ಲ. ಎಲ್ಲಿಗೆ ಹೋಗಿರಬಹುದು ಎಂಬ ಆಲೋಚನೆಯಲ್ಲಿ ಭಾರ್ಗವಿ ಇದ್ದಳು. ಮಾವನ ಬಳಿ ಆ ಬಗ್ಗೆ ಪರೋಕ್ಷವಾಗಿ ತಿಳಿದುಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಳು. ಆದರೆ, ಮಾವನಿಗೂ ವಿಚಾರ ಗೊತ್ತಿಲ್ಲದ ಕಾರಣ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಭಾರ್ಗವಿ ಬಯಸಿದ್ದು ಕಾಲ್ ಮೂಲಕ ವಿಚಾರ ತಲುಪಿದೆ. ರಾಮ್ ಆಂಬುಲೆನ್ಸ್ ಬೇಕು ಅಂತ ಹೇಳಿದ್ದು ವಠಾರಕ್ಕೆ, ಆದರೆ ಆಸ್ಪತ್ರೆಯವರು ಅಡ್ರೆಸ್ ತಿಳಿದುಕೊಂಡಿದ್ದು ಮನೆಗೆ ಬೇಕು ಅಂತ.
ಹೀಗಾಗಿ ಆಸ್ಪತ್ರೆಯವರು ಮನೆಗೆ ಕಾಲ್ ಮಾಡಿ ಕಳುಹಿಸುವುದಾಗಿ ಹೇಳಿದ್ದಾರೆ. ಈ ಕಾಲ್ ಅನ್ನು ಭಾರ್ಗವಿಯೇ ಅಟೆಂಡ್ ಮಾಡಿದ್ದಾಳೆ. ಇದು ಮನೆಯವರೆಲ್ಲರ ತಲೆ ಕೆಡಿಸಿದ್ದು ಅಲ್ಲದೆ ಈಗ ರಾಮ ವಠಾರದಲ್ಲಿ ಬಿಡಾರ ಹೂಡಿದ ಸತ್ಯ ಭಾರ್ಗವಿಗೆ ತಿಳಿಯುವ ಸಾಧ್ಯತೆ ಇದೆ.