Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಇನ್ನೊಂದು ಬಿಗ್ ಟ್ವಿಸ್ಟ್, ರಾಮ್ ಬಾಳಿನಲ್ಲಿ ಬಂದ ಇನ್ನೊಬ್ಬಳು.
ರಾಮ್ ನನ್ನು ನಡುಗಿಸಿದ ಕಾರು, ರಾಮ್ ಬದುಕಲ್ಲಿ ಆಟ ಆಡಿದ ಚಾಂದಿನಿ ಯಾರು?
Seetha Rama Serial latest: ಸೀತಾ ರಾಮ ಧಾರಾವಾಹಿ (Seetha Rama Serial) ಬಹಳ ಸುಂದರವಾಗಿ ಮೂಡಿ ಬರುತ್ತಿದೆ. ಸಿಹಿಯ ನಗು, ಮಾತು ಹಾಗು ಆಕೆಯ ಕಾಳಜಿ ರಾಮ್ ನನ್ನು ಆಕಾಶದಲ್ಲಿ ತೇಲಾಡಿಸುತ್ತಿದೆ. ಅಷ್ಟೇ ಅಲ್ಲದೆ ಸೀತಾಳ ಪ್ರೀತಿಯ ಬಗೆಗಿನ ಅಡ್ವೈಸ್ ಕೇಳಿ ಕೇಳಿ ರಾಮ್ ಗೆ ಆಕೆ ಮಾತು ಟೀಚಿಂಗ್ ತರ ಅನ್ನಿಸುತ್ತಿದೆ.
ಸೀತಾ ಹಾಗು ರಾಮ್ ನಡುವಿನೆ ಪ್ರೀತಿ ಬಗೆಗಿನ ಸಂಭಾಷಣೆ ಕೇಳಲು ಬಹಳ ಖುಷಿ ಆಗುತ್ತಿದ್ದು, ಅಷ್ಟರಲ್ಲೇ ಭಾರ್ಗವಿ ತನ್ನ ಹೊಸ ಆಟ ಪ್ರಾರಂಭಿಸಿದ್ದಾಳೆ. ರಾಮ್ ಭಾರ್ಗವಿ ಕೈ ಗೆ ಸರಿಯಾಗಿ ಸಿಗದ ಕಾರಣ ಕೋಪಗೊಂಡ ಭಾರ್ಗವಿ ರಾಮ್ ನ ಮನಸ್ಸನ್ನು ಕೆದಕುವ ಕೆಲಸಕ್ಕೆ ಕೈ ಹಾಕಿದ್ದಾಳೆ.
ರಾಮ್ ನಿಗೆ ಶಾಕ್ ಕೊಟ್ಟ ಕಾರು
ಸೀತಾ ಹಾಗು ರಾಮ್ ಆಫೀಸ್ ಕೆಲಸ ಮುಗಿಸಿ ಯಾರನ್ನು ಪ್ರೀತಿ ಮಾಡಬೇಕು, ಹೇಗೆ ಪ್ರೀತಿ ಮಾಡಬೇಕು ಎನ್ನದರ ಬಗ್ಗೆ ಮಾತಾಡುತ್ತಾ ಬರುತ್ತಿರುತಾರೆ. ರಾಮ್ ಮುಖದಲ್ಲಿನ ನಗು ನೋಡಿ ಅಶೋಕ್ ಇವನ ನಗು ಯಾವತ್ತಿಗೂ ಹೀಗೆ ಇರಲಪ್ಪ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾನೆ. ಅದೇ ಸಮಯಕ್ಕೆ ಕಾರೊಂದು ರಾಮ್ ನ ಎದುರು ಹಾದು ಹೋಗುತ್ತದೆ. ಕಾರನ್ನು ನೋಡಿದ ರಾಮ್ ಶಾಕ್ ಅಲ್ಲಿ ನಿಂತು ತಲೆ ಸುತ್ತಿ ಬೀಳುತ್ತಾನೆ. ಭಯ ಗೊಂಡ ಸೀತಾ ಏನಾಯಿತು ಎಂದು ಕೇಳಿದರು ರಾಮ್ ಏನು ಮಾತಾಡದೆ ಕಣ್ಣು ಮುಚ್ಚುತ್ತಾನೆ.
ರಾಮ್ ನ ಸ್ಥಿತಿ ನೋಡಿ ಭಯ ಪಟ್ಟ ಅಶೋಕ್
ರಾಮ್ ಕೆಳಗೆ ಬಿದ್ದು ಮೂರ್ಛೆ ತಪ್ಪುತ್ತಿದ್ದಂತೆ ಅಲ್ಲಿಗೆ ಓಡಿ ಬಂದ ಅಶೋಕ್ ಅವನನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಾನೆ. ಕಾರಿನಲ್ಲಿ ಕುಳಿತುಕೊಂಡು ರಾಮ್‌ಗೆ ಏನಾಯ್ತು ಎಂದು ವಿಚಾರಿಸಿದ್ದಾನೆ ಅಶೋಕ. ಭಯದಲ್ಲಿಯೇ ತನ್ನ ವಾಚ್ ನೋಡಿಕೊಳ್ಳುತ್ತ ಚಾಂದಿನಿ ಮತ್ತೆ ಬಂದಿದ್ದಾಳೆ ಎಂದಿದ್ದಾನೆ ರಾಮ್. ಅವಳು ಬೆಂಗಳೂರಿಗೆ ಬಂದಿದ್ದಾಳೆ ಮಗಾ ಎಂದು ಹೇಳಿಕೊಂಡಿದ್ದಾನೆ. ಹಳೇದನ್ನೆಲ್ಲ ಮರೆತುಬಿಡು, ನೀನಿವಾಗ ಚೆನ್ನಾಗಿದ್ದೀಯಾ ಎಂದು ಅಶೋಕ ಹೇಳಿದರೆ, ಹೊಸದನ್ನ ನೆನಪಿಟ್ಟುಕೊಳ್ಳಲು ಹಳೆಯದನ್ನು ಮರೆತರೇ ತಾನೆ ಎಂದಿದ್ದಾನೆ ರಾಮ್.
ರಾಮ್ ನ ಜೀವನದ ಕಟು ಸತ್ಯ ಏನದು?
ರಾಮ್ ಜೀವನದಲ್ಲಿ ಒಂದು ಮರೆಯಲಾಗದ ಘಟನೆ ಆಗಿದ್ದು,ಕೇವಲ ಕಾರ್ ನೋಡಿ ರಾಮ್ ಅಕ್ಷರಶಃ ನಲುಗಿದ್ದಾನೆ. ಹಾಗಾದರೆ, ರಾಮ್ ಜೀವನದಲ್ಲಿ ಬಂದ ಹುಡುಗಿ ಮತ್ತೆ ಅದೇ ರಾಮ್ ಜೀವನಕ್ಕೆ ಎಂಟ್ರಿಯಾಗ್ತಾಳಾ? ರಾಮನ ಈ ಲವಲವಿಕೆ ಮಾಯವಾಗುತ್ತಾ? ಹಾಗು ಭಾರ್ಗವಿ ಅಟ್ಟಹಾಸ ರಾಮ್ ನನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸುತದೆಯೋ ಕಾದು ನೋಡಬೇಕು.