Seetha Rama Serial: ರಾಮನ ಕೈಗೆ ಸಿಕ್ಕಿ ಬೀಳುವ ಭೀತಿಯಲ್ಲಿ ಭಾರ್ಗವಿ, ರಾಮನ ಕೈ ಸೇರಿದೆ ದೊಡ್ಡ ಅಸ್ತ್ರ.
ಫೈಲ್ ಹಿಡಿದು ಹೊರಟ ರಾಮ, ಸಿಕ್ಕಿಬೀಳ್ತಾಳಾ ಚಿಕ್ಕಿ....?
Seetha Rama Serial Kannada:’ಸೀತಾರಾಮ’ ಧಾರಾವಾಹಿಯಲ್ಲಿ (Seetha Rama Serial) ಸದ್ಯಕ್ಕೆ ರಾಮನ ನೆಮ್ಮದಿಯನ್ನು ಕೆಡಿಸಬೇಕು ಎಂದು ಗಮನ ಕೊಟ್ಟ ಭಾರ್ಗವಿ ಈಗ ರಾಮನ ಕೈಲಿರುವ ಫೈಲ್‌ನಿಂದಾಗಿ ತನ್ನ ಹಳ್ಳಕ್ಕೆ ತಾನೇ ಬೀಳುವ ಸಾಧ್ಯತೆ ಇದೆ.
ಆದ್ರೆ ಇನ್ನೊಂದಡೆ ರಾಮ ಸೀತಾ ಸಿಕ್ಕಾಪಟ್ಟೆ ಹತ್ತಿರವಾಗಿದ್ದಾರೆ. ರಾಮ ಯಾರದ್ದೋ ಪ್ರೀತಿಯಲ್ಲಿ ಬಿದ್ದಿದ್ದಾನೆ ಎನ್ನುವ ಊಹೆಯಲ್ಲಿ ಭಾರ್ಗವಿ ಹುಡುಕಾಟ ಶುರು ಮಾಡಿದ್ದಾಳೆ.

ರಾಮ್ ನ ಹುಡುಕಾಟದಲ್ಲಿ ಮನೆಯವರು
ರಾಮ್ ಎಷ್ಟು ಹೊತ್ತಾದರೂ ಮನೆಗೆ ಬಾರದೆ ಇರುವುದು, ಆಫೀಸ್‌ಗೆ ಕೂಡ ಹೋಗದೆ ಇರುವುದು ದೇಸಾಯಿ ಮನೆಯವರಲ್ಲಿ ಆತಂಕ ಸೃಷ್ಟಿಸಿದೆ. ರಾಮ್ ಮಾತ್ರ ಒಂದಷ್ಟು ಗಂಟೆಗಳು ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದ. ಅದೇ ಸಮಯಕ್ಕೆ ಸೀತಾಳ ಮನೆಯ ಬಾಗಿಲನ್ನು ಪೊಲೀಸರು ಬಡಿದಿದ್ದು, ಆತಂಕಕ್ಕೆ ಕಾರಣವಾಗಿತ್ತು. ರಾಮ್ ಅದನ್ನು ಹೇಗೋ ಬ್ಯಾಲೆನ್ಸ್ ಮಾಡಿ ಮನೆಗೆ ಬಂದಿದ್ದಾನೆ.
ಅಶೋಕನ ಮುನಿಸಿಗೆ ರಾಮ್ ನ ಸಾಂತ್ವನ
ಭಾರ್ಗವಿ ಅಶೋಕನ ಮನಸ್ಸಿಗೆ ನೋವು ಮಾಡಿ ಅವಮಾನಿಸಿರುತ್ತಾಳೆ. ಇತ್ತ ರಾಮ್ ಹಾಗು ಅಶೋಕ ಇಬ್ಬರು ಆಫೀಸಿಗೆ ಹೋಗಿಲ್ಲ. ಯಾಕಂದ್ರೆ ಭಾರ್ಗವಿಯ ಸತ್ಯವನ್ನು ಹೇಳುವುದಕ್ಕೆ ಹೋದರೆ ರಾಮ ನಂಬುವುದಕ್ಕೆ ರೆಡಿ ಇಲ್ಲ. ಹೀಗಾಗಿ ಅಶೋಕನ ಮನಸ್ಸಿಗೆ ತಂಬಾ ನೋವಾಗಿತ್ತು. ಅಶೋಕ ಆಫೀಸಿಗೆ ಹೋಗದೆ ಇರುವುದನ್ನು ತಿಳಿದ ರಾಮ್ ನೇರ ಮನೆಗೆ ಹೋಗಿದ್ದಾನೆ. ಅಲ್ಲಿ ಅಶೋಕ ಆಡಿದ ಆಳು, ಯಜಮಾನ ಎಂಬ ಮಾತುಗಳು ರಾಮನಿಗೆ ನೋವು ಕೊಟ್ಟಿದೆ. ರಾಮ್‌ಗೆ ಅಶೋಕ ಎಷ್ಟು ಮುಖ್ಯ ಎಂಬುದನ್ನು ಬಿಡಿಸಿ ಹೇಳಿದ್ದಾನೆ. ಒಂದು ಗಟ್ಟಿ ಅಪ್ಪುಗೆಯಿಂದ ಇಬ್ಬರ ಮುನಿಸು ಕಳೆದಿದೆ.

ಆಫೀಸಿನಲ್ಲಿ ನೆಡೆಯುತ್ತಿರುವ ಮೋಸದ ಗುಟ್ಟು ರಟ್ಟಾಗುವ ಸಮಯ
ಯಥಾಸ್ಥಿತಿಯಲ್ಲಿ ರಾಮ್ ಎಂಪ್ಲಾಯ್ ಆಗಿ, ಅಶೋಕ ಬಾಸ್ ಆಗಿ ಆಫೀಸಿಗೆ ಬಂದಿದ್ದಾರೆ. ರಾಮನಿಗೆ ಏನು ಗೊತ್ತಿಲ್ಲ ಎಂದುಕೊಂಡಿರುವ ಮ್ಯಾನೇಜರ್ ಚರಣ್ ಡಿ ಮೋಸದ ಫೈಲ್ ಅನ್ನು ರಾಮ್ ಬಳಿಯೇ ಕೊಟ್ಟಿದ್ದಾನೆ. ರಾಮ್‌ನನ್ನು ಕರೆದು ಈ ಫೈಲ್ ಅನ್ನು, ನಾನು ಹೇಳಿದ ಅಡ್ರೆಸ್‌ಗೆ ಹೋಗಿ ಕೊಟ್ಟು ಬಾ ಎಂದಿದ್ದಾನೆ. ಅದು ಆಫೀಸಿನ ಅಧಿಕೃತ ವ್ಯವಹಾರಗಳ ಫೈಲ್ ಆಗಿರಲಿಲ್ಲ. ಹೀಗಾಗಿ ನಾವೂ ಹುಡುಕುತ್ತಿದ್ದವರು ಇವತ್ತು ಸಿಗುವ ಭರವಸೆ ಅಶೋಕ ಹಾಗೂ ರಾಮ್ ಇಬ್ಬರಲ್ಲೂ ಮೂಡಿದೆ.
ಭಾರ್ಗವಿಯ ನಂಬಿಕೆ ದ್ರೋಹದ ಬಗ್ಗೆ ರಾಮ್ ಗೆ ತಿಳಿಯುತ್ತಾ?
ಮನೆಯಲ್ಲಿ ಸಿಕ್ಕಾಪಟ್ಟೆ ನಾಟಕವಾಡುವ ಭಾರ್ಗವಿಯ ನಿಜ ಬಣ್ಣ ಅರಿಯದೆ ಭಾರ್ಗವಿಯ ಮೇಲೆ ಮನೆಯವರಿಗೆ ಅತಿಯಾದ ನಂಬಿಕೆ. ಅಶೋಕ ಹೇಳಿದರೂ ರಾಮ್ ನಂಬುವ ಸ್ಥಿತಿಯಲ್ಲಿ ಇಲ್ಲ.ಇದೆಲ್ಲ ಮುಗಿದರೂ ಆಫೀಸ್‌ನಲ್ಲಿ ಯಾರೋ ಗೋಲ್ಮಾಲ್ ಮಾಡುತ್ತಿದ್ದಾರೆ ಅನ್ನುವುದಂತು ರಾಮ್‌ಗೆ ಗೊತ್ತಾಗಿದೆ. ಅದರಲ್ಲಿ ಮ್ಯಾನೇಜರ್ ಕೂಡ ಸೇರಿಕೊಂಡಿದ್ದಾನೆ ಅಂತ ಎನಿಸಿದೆ.ಆಫೀಸಲ್ಲಿ ಚರಣ್ ಡಿ ಯನ್ನ ಭಾರ್ಗವಿ ಹ್ಯಾಂಡಲ್ ಮಾಡುತ್ತಿದ್ದಾಳೆ. ಈಗ ಆ ಫೈಲ್‌ನಿಂದಾಗಿ ಭಾರ್ಗವಿಯ ಅಡ್ಡ ತಿಳಿಯುವುದು ರಾಮ್‌ಗೆ ಸುಲಭವಾಗುತ್ತದೆ.