Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಇನ್ನೊಂದು ಟ್ವಿಸ್ಟ್, ಭಾರ್ಗವಿ ಕುತಂತ್ರಕ್ಕೆ ರಾಮನಿಂದ ದೂರ ಆಗ್ತಾಳ ಸೀತಾ.
ಆಫೀಸ್ನಲ್ಲೂ ಭಾರ್ಗವಿ ಕುತಂತ್ರ, ರಾಮನಿಂದ ದೂರವಾಗ್ತಾಳಾ ಸೀತಾ..?
Seetha Rama Kannada Serial: ‘ಸೀತರಾಮ’ ಧಾರಾವಾಹಿಯಲ್ಲಿ (Seetha Rama Kannada Serial) ರಾಮ ಹುಟ್ಟಿದಾಗಿನಿಂದ ಶ್ರೀಮಂತಿಕೆಯ ಬದುಕನ್ನೇ ನೋಡಿ ಬೆಳೆದವನು. ನಿಜವಾದ ಬದುಕು ಅಂದರೆ ಏನು ಅಂತ ಕಲಿತಿದ್ದು ಇದೇ ಸೀತೆಯಿಂದ. ಹೀಗಾಗಿಯೇ ಸೀತಾಳ ಕಷ್ಟಕ್ಕೆ ಮರುಗುತ್ತಾನೆ. ಅಡ್ವಾನ್ಸ್ ಸ್ಯಾಲರಿಯನ್ನು ಕೊಡಿಸುವ ದಾರಿಯಲ್ಲಿದ್ದಾನೆ. ಆದರೆ, ಭಾರ್ಗವಿಯ ಮತ್ತೊಂದು ಮುಖ ಇಬ್ಬರ ಸ್ನೇಹಕ್ಕೆ ಯಾವ ರೀತಿಯ ಅಡ್ಡಿಯಾಗುತ್ತೋ ಗೊತ್ತಿಲ್ಲ.
ಸೀತೆ ಮತ್ತು ರಾಮನನ್ನು ಒಂದು ಮಾಡಿರುವುದು ಮುದ್ದಾದ ಸಿಹಿ. ರಾಮನಿಗೆ ಬೆಸ್ಟ್ ಫ್ರೆಂಡ್ ಆಗಿ, ಸೀತೆಗೆ ಬೆಸ್ಟ್ ಮಗಳಾಗಿ, ಪ್ರೇಕ್ಷಕರಿಗೆ ಬೆಸ್ಟ್ ಆಕ್ಟರ್ ಆಗಿ ಎಲ್ಲರ ಕಣ್ಮನವನ್ನು ಸೆಳೆದಿದ್ದಾಳೆ. ಅದರಲ್ಲೂ ರಾಮನ ಖುಷಿಗೆ ಸಿಹಿಯೇ ಕಾರಣ. ರಾಮನ ದುಃಖಕ್ಕೆ ಸಿಹಿ ಕಡೆಯಿಂದ ಒಂದು ಫೋನ್ ಕಾಲ್ ಸಾಕು. ಅಷ್ಟೂ ಎನರ್ಜಿ ಬೂಸ್ಟರ್ ಈ ಸಿಹಿ.
ಆಫೀಸ್ ನಲ್ಲಿ ಭಾರ್ಗವಿಯ ಅಟ್ಟಹಾಸ
ರಾಮ್ ಇಲ್ಲದ ಸಮಯದಲ್ಲಿ ಆಫೀಸಿಗೆ ಬಂದ ಭಾರ್ಗವಿ, ಆಫೀಸ್‌ನಲ್ಲಿ ರಾಮ್ ಇದ್ದರೆ ಭಾರ್ಗವಿ ಬರುವುದಕ್ಕೆ ಕಷ್ಟ. ಬಂದರೂ ಹೆಚ್ಚು ಯಾವುದನ್ನು ಮಾತನಾಡುವುದಕ್ಕೆ ಆಗುವುದಿಲ್ಲ. ಒಳಗೆ ಹಣ ಹೊಡೆಯುವ ಮಾರ್ಗಕ್ಕೂ ಕೈ ಹಾಕುವುದಕ್ಕೆ ಆಗುವುದಿಲ್ಲ. ಅದರಲ್ಲೂ ಆಫೀಸ್‌ನಲ್ಲಿ ಬೇರೆ ಮಾರ್ಗದಲ್ಲಿ ಹೋಗುತ್ತಿರುವ ಹಣದ ಹೊಳೆಯನ್ನು ಕಂಡು ಹಿಡಿಯುವ ಮಾರ್ಗದಲ್ಲಿ ಅಶೋಕ ಹಾಗೂ ರಾಮ್ ಪಯಣ ಬೆಳೆಸಿದ್ದಾರೆ. ಹೀಗಾಗಿ ಭಾರ್ಗವಿ ಆಟ ರಾಮ್ ಇದ್ದಾಗ ನಡೆಯುವುದು ಕಷ್ಟ ಸಾಧ್ಯ. ಅದಕ್ಕೆಂದೇ ರಾಮ್ ಇಲ್ಲದೆ ಇದ್ದಾಗ ಭಾರ್ಗವಿ ಆಫೀಸಿಗೆ ಬಂದಿದ್ದಾಳೆ.
ಅಶೋಕನಿಗೆ ಅವಮಾನ ಮಾಡಿದ ಭಾರ್ಗವಿ
ಆಫೀಸ್‌ನಲ್ಲಿ ರಾಮ್ ಒಬ್ಬ ಸಾಮಾನ್ಯ ಕೆಲಸಗಾರ. ಅಶೋಕ್ ನನ್ನೇ ಎಲ್ಲರೂ ಬಾಸ್ ಎಂದುಕೊಂಡಿದ್ದಾರೆ. ಆಫೀಸ್‌ನಲ್ಲಿ ನಡೆಯಿತ್ತಿರುವ ನಾಟಕ ಭಾರ್ಗವಿಗೆ ಗೊತ್ತಿಲ್ಲ. ಭಾರ್ಗವಿ ಬಂದಾಗ ಅಶೋಕ ಬಾಸ್ ಚೆಂಬರ್‌ನಲ್ಲಿ ಇದ್ದದ್ದು ಕಂಡು ಕೋಪಗೊಂಡಿದ್ದಾಳೆ. ರಾಮ್ ಬರುವುದು ತಡ ಆಗಿತ್ತು. ಅದಕ್ಕೆ ನಾನು ಕುಳಿತೆ ಎಂದೇ ಅಶೋಕ ಹೇಳಿದ್ದಾನೆ. ಆದರೆ, ಅಶೋಕನಿಗೆ ನೋವಾಗುವಂತ ಮಾತನ್ನೇ ಭಾರ್ಗವಿ ಆಡಿದ್ದಾಳೆ. ‘ಚಪ್ಪಲಿಯನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಡಬೇಕು’ ಎಂದಿದ್ದಾಳೆ.
ಸೀತಾಳ ಮನಸ್ಸಿಗೇ ನೋವು , ಕ್ಷಮೆ ಕೇಳಿದ ಸೀತಾ
ಸೀತಾಳ ಅಡ್ವಾನ್ಸ್ ಸ್ಯಾಲರಿ ಬಗ್ಗೆ ಪ್ರಶ್ನೆ ಮಾಡಿದ ಭಾರ್ಗವಿಗೆ ಎಲ್ಲರ ಮನಸ್ಸಿಗೂ ನೋವು ಕೊಡುವುದಷ್ಟೇ ಗೊತ್ತು. ತಾನೊಬ್ಬಳೇ ಶ್ರೀಮಂತಿಕೆ ಅನುಭವಿಸಬೇಕು ಎಂಬ ಅಹಂಕಾರ ಅವಳದ್ದು. ಹೊರಗಿನವರಿಗೆ ಮಾತ್ರವಲ್ಲ ಒಳಗಿನವರಿಗೂ ಆಗಾಗ ನೋವು ಕೊಡುತ್ತಲೆ ಇರುತ್ತಾಳೆ. ಈಗ ಸೀತಾ ಮುಂದೆ “ಇವರೊಬ್ಬರಿಗೆ ಅಡ್ವಾನ್ಸ್ ಸ್ಯಾಲರಿ ಕೊಟ್ಟರೆ, ಉಳಿದವರು ಕೂಡ ಬಂದು ಕೇಳುತ್ತಾರೆ.
ಆಗ ಏನು ಮಾಡುತ್ತೀರಾ” ಅಂತ ಬಾಯಿಗೆ ಬಂದಂತೆ ಮಾತನಾಡಿದ್ದಾಳೆ. ಇದರಿಂದ ಸೀತಾಳ ಮನಸ್ಸು ನೊಂದಿದೆ. ಕಣ್ಣಲ್ಲಿ ನೀರು ಬಂದಿದೆ. ಭಾರ್ಗವಿಗೆ ಕ್ಷಮೆ ಕೇಳಿ, ಸೀತಾ ಅಲ್ಲಿಂದ ಕಣ್ಣೀರು ಹಾಕುತ್ತಾ ಹೊರ ನಡೆದಿದ್ದಾಳೆ. ಈ ವಿಚಾರವನ್ನು ರಾಮ್‌ಗೆ ಹೇಳಿದರೆ ಮತ್ತಷ್ಟು ನೋವು ಮಾಡಿಕೊಳ್ಳುತ್ತಾನೆ ಎಂಬ ಕಾರಣಕ್ಕೆ ಸತ್ಯ ಮುಚ್ಚಿಡುವ ಸಾಧ್ಯತೆ ಇದೆ.