Jasprit Bumrah: ಬುಮ್ರಾ ಮಗುವಿಗೆ ಉಡುಗೊರೆ ನೀಡಿದ ಪಾಕಿಸ್ತಾನ ಬೌಲರ್ ಶಾಹೀನ್ ಆಫ್ರಿದಿ, ವೈರಲ್ ಆಗಿದೆ ಪೋಸ್ಟ್.
ಬುಮ್ರಾ ಮಗುವಿಗೆ ಉಡುಗೊರೆ ನೀಡಿ ಶುಭ ಹಾರೈಸಿದ ಪಾಕ್ ವೇಗಿ ಶಾಹೀನ್ ಅಫ್ರಿದಿ,
Shaheen Afridi Gives Gift To Jasprit Bumrah: ಭಾರತ ಮತ್ತು ಪಾಕಿಸ್ತಾನ ಏಶ್ಯ ಕಪ್ (Asia Cup) ಸೂಪರ್ -4 ಪಂದ್ಯ ಶ್ರೀಲಂಕಾದ ಕೊಲಂಬೊದಲ್ಲಿ ಭಾನುವಾರ ಆಯೋಜಿಸಲಾಯಿತು. ಆದರೆ ಭಾರೀ ಮಳೆಯಿಂದಾದ ಪಂದ್ಯ ರದ್ದಾಗಿದೆ. ಪಂದ್ಯ ರದ್ದಾದ ನಂತರ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ (Shaheen Afridi) ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ಭೇಟಿ ಮಾಡಿದ್ದೂ, ಮೊದಲ ಮಗುವಿಗೆ ತಂದೆಯಾಗಿರುವುದಕ್ಕೆ ಅಭಿನಂದಿಸಿ ಉಡುಗೊರೆ ನೀಡಿದರು.

ಶಾಹೀನ್ ಶಾ ಅಫ್ರಿದಿ ನೀಡಿದ ಪ್ರೀತಿಯ ಉಡುಗೊರೆ
ಭಾನುವಾರದ ಪಂದ್ಯ ರದ್ದಾದ ನಂತರ ತಂಡದ ಹೋಟೆಲ್ ಗೆ ಹಿಂತಿರುಗುವ ಮೊದಲು ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಶಾಹೀನ್ ಶಾ ಅಫ್ರಿದಿ ಹಾಗು ಜಸ್ಪ್ರೀತ್ ಬುಮ್ರಾ ಇಬ್ಬರೂ ಭೇಟಿಯಾದಾಗ ಅಫ್ರಿದಿ ಅವರು ನವಜಾತ ಮಗುವಿಗೆ ಉಡುಗೊರೆಯನ್ನು ಬುಮ್ರಾಗೆ ರವಾನಿಸಿದರು.
Spreading joy 🙌
Shaheen Afridi delivers smiles to new dad Jasprit Bumrah 👶🏼🎁#PAKvIND | #AsiaCup2023 pic.twitter.com/Nx04tdegjX
— Pakistan Cricket (@TheRealPCB) September 10, 2023
ಶಾಹೀನ್ ಅಫ್ರಿದಿ ಕೆಂಪು ಬಣ್ಣದ ಪೆಟ್ಟಿಗೆಯನ್ನು ಗಿಫ್ಟ್ ರೂಪದಲ್ಲಿ ಜಸ್ಪ್ರೀತ್ ಬುಮ್ರಾಗೆ ಹಸ್ತಾಂತರಿಸಿದರು. ಭಾರತದ ಆಟಗಾರನ ನವಜಾತ ಶಿಶುವಿಗೆ ಉತ್ತಮ ಆರೋಗ್ಯ ಹಾಗೂ ಸಂತೋಷಕ್ಕಾಗಿ ಹಾರೈಸಿದರು.

ಉಡುಗೊರೆಯನ್ನು ಸಂತೋಷದಿಂದ ಸ್ವೀಕರಿಸಿದ ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ ಅವರು ಅಫ್ರಿದಿ ನೀಡಿದ ಉಡುಗೊರೆಯನ್ನು ಸಂತೋಷದಿಂದ ಸ್ವೀಕರಿಸಿದರು. ಇದು ಚೆನ್ನಾಗಿದೆ ಎಂದು ಪ್ರತಿಕ್ರಿಯಿಸಿದರು. ವಿಶ್ವದ ಇಬ್ಬರು ಅತ್ಯುತ್ತಮ ವೇಗಿಗಳ ನಡುವಿನ ಹೃದಯಸ್ಪರ್ಶಿ ವಿನಿಮಯದ ವೀಡಿಯೊವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಹಂಚಿಕೊಂಡಿದೆ. ಇವರಿಬ್ಬರ ನಡುವಿನ ಸ್ನೇಹ ಎಲ್ಲರ ಅಚ್ಚರಿಗೂ ಕೂಡ ಕಾರಣವಾಗಿದೆ.