Actor Yash: ಕೆಜಿಎಫ್ ನಲ್ಲಿ ಶಿವು ಕೆ ಆರ್ ಪೇಟೆ ಸೀನ್‌ಗಳಿಗೆ ಕತ್ತರಿ ಹಾಕಿದ್ದು ಯಾಕೆ….? ಯಶ್ ಹೇಳಿದ್ದೇನು…?
ಕೆಜಿಎಫ್ ಸಿನಿಮಾದಲ್ಲಿ ನಟಿಸಿದ ಶಿವು ಕೆ ಆರ್ ಪೇಟೆ, ಆದರೆ ಇವರ ಎಲ್ಲಾ ಸೀನ್ ಗಳಿಗೆ ಬ್ರೇಕ್ ಬಿದ್ದಿದೆ, ಇದಕ್ಕೆ ಕಾರಣ ಇಲ್ಲಿದೆ.
Shivaraj KR Pete In KGF Chapter 1: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ KGF ಚಾಪ್ಟರ್ ಒಂದು ಹಾಗು KGF ಚಾಪ್ಟರ್ ಎರಡು ಹೊಸ ದಾಖಲೆಯನ್ನೇ ಸ್ರಷ್ಟಿಸಿತು. ಈ ಸಿನಿಮಾದಲ್ಲಿ Actor Yash ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ಹಲವು ದಿಗ್ಗಜ ನಟ ನಟಿಯರು ಕೂಡ ಕಾಣಿಸಿಕೊಂಡಿದ್ದಾರೆ.
KGF ಸಿನಿಮಾದ ದಾಖಲೆಯನ್ನು ಯಾವ ಸಿನಿಮಾವು ಇನ್ನು ಮೀರಿಸಿಲ್ಲ . ಕನ್ನಡ ಚಿತ್ರರಂಗವನ್ನೇ ಉತ್ತುಂಗಕ್ಕೆ ಏರುವಂತೆ ಈ ಸಿನಿಮಾ ಮಾಡಿದೆ. ಹೀಗಾಗಿ ಕೆಜಿಎಫ್‌ನ ಎರಡೂ ಚಾಪ್ಟರ್‌ಗಳಿಗೂ ಸ್ಯಾಂಡಲ್ ವುಡ್ ನಲ್ಲಿ ವಿಶೇಷವಾದ ಸ್ಥಾನವಿದೆ.

ಕೆಜಿಎಫ್ ಸಿನಿಮಾದಲ್ಲಿ ನಟಿಸಿದ ಶಿವು ಕೆ ಆರ್ ಪೇಟೆ
ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮದ ಮೂಲಕ ಹೆಸರು ಮಾಡಿರೋ ನಟ ಶಿವು ಕೆ ಆರ್ ಪೇಟೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. ಆದರೆ, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ ಚಾಫ್ಟರ್ 1’ನಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಶಿವು ಕೆ ಆರ್ ಪೇಟೆ ಅವರು ‘ಕೆಜಿಎಫ್’ 1 ರಲ್ಲಿ ನಟಿಸಿದ್ದಾರೆ. ಆದರೆ ಈ ವಿಷಯ ಯಾರಿಗೂ ತಿಳಿದಿಲ್ಲ ಯಾಕೆಂದರೇ ಇವರು ನಟಿಸಿದ ಸೀನ್ ಗಳನ್ನೂ ಡಿಲೀಟ್ ಮಾಡಲಾಗಿತ್ತು. ಈ ವಿಷಯವನ್ನು ಸ್ವತ: ಶಿವು ಕೆ ಆರ್ ಪೇಟೆಯವರೇ ಕನ್ನಡ ಫಿಕ್ಚರ್ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ
ಕೆಜಿಎಫ್ ಸಿನಿಮಾದ ಎಲ್ಲಾ ಪೋಷನ್ ಕಟ್ ಮಾಡಲಾಗಿದೆ
ಕನ್ನಡ ಫಿಕ್ಚರ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶಿವು ಕೆ ಆರ್ ಪೇಟೆ ಅವರು “ಕೆಜಿಎಫ್ ಪಾರ್ಟ್ 1ನಲ್ಲಿ ನಾನು ಕೆಲಸ ಮಾಡಿದ್ದೆ ಅನ್ನೋ ಖುಷಿ ಇದೆ. ಪಾರ್ಟ್ 1 ರಲ್ಲಿ ನಾನು 8-9 ದಿನ ಕೆಲಸ ಮಾಡಿದ್ದೆ ಅದು ಪೂರ್ತಿ ಕಾಮಿಡಿ ಪೋಷನ್ ಇತ್ತು. ಪ್ರಶಾಂತ್ ನೀಲ್ ಸರ್ ಅವರ ರೂಮ್‌ಗೆ ಕರೆದು ಕೂತು ಬರೆದಿದ್ದರು. ಈ ತರ ಬರುತ್ತೆ ಸೀನ್ ಅಂತ ರೆಡಿ ಮಾಡಿಕೊಂಡು ಶೂಟಿಂಗ್ ಮಾಡಿದ್ದಾಗಿತ್ತು. ಸೀನ್‌ಗಳು ಚೆನ್ನಾಗಿ ಕೂಡ ಬಂದಿದ್ದವು.” ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
“ಸಿನಿಮಾ ಅಷ್ಟು ಸೀರಿಯಸ್ ಆಗಿ ಹೋಗಬೇಕಾದರೆ ಯಾವುದೇ ಸಿನಿಮಾ ಆದರೂ ಸರಿ, ಯಾವ ಸೀನ್‌ಗಳಾದರೂ ಸರಿ. ತುರುಕುವಂತಹ ಅವಶ್ಯಕತೆ ಇರೋದಿಲ್ಲ. ಕೆಜಿಎಫ್ ಅಂತಹ ಅದ್ಭುತವಾದ ಸಿನಿಮಾದಲ್ಲಿ ನಾನು ಆಕ್ಟ್ ಮಾಡಿದ್ದೇನೆ ಅನ್ನೋ ಖುಷಿಯಿದೆ. ಅದರಲ್ಲಿ ಎಲ್ಲಾ ಪೋಷನ್ ಕಟ್ ಮಾಡಿದ್ದಾರೆ.” ಎಂದು ಶಿವು ಕೆ ಆರ್ ಪೇಟೆ ಸಂದರ್ಶನದಲ್ಲಿ ಹೇಳಿದ್ದಾರೆ.

ಶಿವು ಕೆ ಆರ್ ಪೇಟೆ ಯವರಿಗೆ ಫೋನ್ ಮಾಡಿದ ನಟ ಯಶ್
“ನನಗೆ ಯಶ್ ಸರ್ ಫೋನ್ ಮಾಡಿದ್ದರು. ಹಿಂಗಿಂಗೆ ಆಗಿದೆ ಕಣೋ ಬೇಜಾರು ಮಾಡಿಕೊಳ್ಳಬೇಡ ಅಂದಿದ್ದರು. ನನಗೆ ಬೇಜಾರು ಯಾಕೆ? ಅಷ್ಟು ದೊಡ್ಡ ಸೆಟ್ಟು, ದೊಡ್ಡ ಸಿನಿಮಾದಲ್ಲಿ ಕೆಲಸ ಮಾಡಿದ ಖುಷಿಯಿದೆ ನನಗೆ. ಪ್ರಶಾಂತ್ ನೀಲ್ ಸರ್ ಸಿಕ್ಕಾಗಲೂ ಬೈಯ್ಯಬೇಕು ಅಂತ ಅನಿಸುತ್ತಿರಬೇಕು. ಬೈದು ಬಿಡಿ ಅಂತ ಹೇಳಿದ್ದರು. ಇಲ್ಲ ಸರ್ ನನಗೆ ಕೆಲಸ ಮಾಡಿದ್ದು ಖುಷಿಯಿದೆ ಅಂತ ಹೇಳಿದ್ದೆ.” ಎಂದು ಶಿವು ಕೆ ಆರ್ ಪೇಟೆ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಶಿವು ಕೆ ಆರ್ ಪೇಟೆ ಅವರಿಗೆ ತಾನು ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದರ ಕುರಿತು ಹೆಮ್ಮೆ ಇದೆ ಎಂದು ಹೇಳಿದ್ದಾರೆ.