Shoiab Akhtar: ಟೀಮ್ ಮಾಡಿದ ಈ ತಪ್ಪಿನ ಕಾರಣ ವಿಶ್ವಕಪ್ ಕೈತಪ್ಪಿತು, ಮಾಜಿ ಪಾಕ್ ವೇಗಿ ಅಕ್ತರ್ ಹೇಳಿಕೆ.

ಪಾಕಿಸ್ತಾನ ಮಾಜಿ ಆಟಗಾರ ಶೋಯಬ್ ಅಖ್ತರ್ ಭಾರತ ವಿಶ್ವಕಪ್ ಸೋತ ಬಗ್ಗೆ ಟ್ವೀಟ್ ಮಾಡಿ, ಭಾರತೀಯರ ಬೇಸರಕ್ಕೆ ಕಾರಣರಾಗಿದ್ದಾರೆ

Shoaib Akhtar Tweet About Team India: ದೇಶದಲ್ಲಿ ಸದ್ಯಕ್ಕೆ ಈಗ ಭಾರತ ಏಕದಿನ ವಿಶ್ವಕಪ್ (World Cup) ಸೋತ ಬಗೆಯೇ ಮಾತುಕತೆ ನಡೆಯುತ್ತಿದೆ. ಭಾರತ ತಂಡ ಎಲ್ಲಾ ಪಂದ್ಯಗಳನ್ನು ಗೆದ್ದು ಕೊನೆಗೆ ಫೈನಲ್ ನಲ್ಲಿ ಟ್ರೋಫಿ ಕಳೆದುಕೊಂಡಿರುವುದು ಎಲ್ಲರ ಬೇಸರಕ್ಕೆ ಕಾರಣ ಆಗಿದೆ. ಇಡೀ ದೇಶವೇ ಬೇಸರದಲ್ಲಿದ್ದು, ಈ ಸಮಯದಲ್ಲಿ ಕೆಲವು ಟೀಕೆಗಳು, ಟ್ರೋಲ್ ಗಳು (Troll) ಇನ್ನಷ್ಟು ಬೇಸರವನ್ನು ಉಂಟು ಮಾಡುತ್ತಿದೆ.

ಕೆಲವು ಆಟಗಾರರು, ಸೆಲೆಬ್ರೆಟಿಗಳು ಸಮಾಧಾನಕರವಾಗಿ ಟ್ವೀಟ್ (Tweet) ಮಾಡಿ, ಟೀಮ್ ಇಂಡಿಯಾದ (Team India) ಗೆಲುವಿನ ಪಂದ್ಯಗಳ ಬಗ್ಗೆ ಮಾತನಾಡಿದ್ದರೆ, ಇನ್ನು ಕೆಲವರು ಸಿಕ್ಕಿದೇ ಅವಕಾಶ ಎಂದು ತುಂಬ ಹೀನಾಯವಾಗಿ ಟ್ವೀಟ್ ಮಾಡುತ್ತಿದ್ದಾರೆ. ವಿಶ್ವಕಪ್ ಟೂರ್ನಿಯುದ್ದಕ್ಕೂ ಟೀಂ ಇಂಡಿಯಾ ಅದ್ಭುತ ಆಟ ಪ್ರದರ್ಶನ ಮಾಡಿತ್ತು. ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಈ ಬಾರಿ ಭಾರತ ವಿಶ್ವ ಚಾಂಪಿಯನ್ ಆಗಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆಸ್ಟ್ರೇಲಿಯಾದ ಕೈಯಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡಿದ್ದು, ಬಹಳ ಬೇಸರವನ್ನು ಉಂಟು ಮಾಡಿದೆ.

Shoaib Akhtar Tweet About Team India
Image Credit: Hindustan Times

ಟೀಮ್ ಇಂಡಿಯಾ ಕುರಿತು ಟ್ವೀಟ್ ಮಾಡಿದ ಪಾಕಿಸ್ತಾನ ಮಾಜಿ ಆಟಗಾರ

ವಿಶ್ವಕಪ್ ಸೋಲಿನ ನಂತರ ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ನಿರಾಸೆಯ ವಾತಾವರಣ ಆವರಿಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ದಿಗ್ಗಜ ಶೋಯೆಬ್ ಅಖ್ತರ್ ಹೇಳಿಕೆ ನೀಡಿದ್ದಾರೆ. ಜೊತೆಗೆ ಮಾಜಿ ಭಾರತೀಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಕ್ರಿಕೆಟಿಗ-ಆಂಕರ್ ಆಕಾಶ್ ಚೋಪ್ರಾ ಅವರನ್ನು ತರಾಟೆಗೆ ತೆಗೆದುಕೊಂಡರು.”ಕ್ಷಮಿಸಿ ಸಹೋದರ, ಇದನ್ನು ಕರ್ಮ ಎಂದು ಕರೆಯಲಾಗುತ್ತದೆ’ ಎಂದು ಶೋಯಬ್ ಅಖ್ತರ್ ಟ್ವೀಟ್ ಮಾಡಿದ್ದಾರೆ.

ಆಕಾಶ್ ಚೋಪ್ರಾ ಮತ್ತು ಹರ್ಭಜನ್ ಸಿಂಗ್ ಅವರ ಹಳೆಯ ಟ್ವೀಟ್ ಅನ್ನು ಮರುಟ್ವೀಟ್ ಮಾಡಿ, “ನಾವು ನಿರೀಕ್ಷೆಗಳ ಬಗ್ಗೆ ಮಾತನಾಡುವುದಿಲ್ಲ” ಎಂದಿದ್ದಾರೆ. ಈ ಹಿಂದೆ ಪಾಕಿಸ್ತಾನ ತಂಡ ಆಸೀಸ್ ವಿರುದ್ಧ ಸೋಲು ಕಂಡಿತ್ತು. ಅಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿ, “ಆಸೀಸ್ ಆಸಿ ಆಸಿ, ಎಂತಹ ಅದ್ಭುತ ಗೆಲುವು, ಕ್ಲಾಸ್ ಟಾಪ್ ಕ್ಲಾಸ್ ಬ್ಯಾಟಿಂಗ್ #ವೇಡ್..” ಎಂದು ಬರೆದಿದ್ದರು, ಅದನ್ನೇ ಮರು ಟ್ವೀಟ್ ಮಾಡಿದ ಶೋಯಬ್ ಅಖ್ತರ್, “ಆಸೀಸ್ ಆಸಿ ಆಸಿ, ಓಯ್ ಓಯ್ ಓಯ್ ವಾಟ್ ಎ ಗೆಲುವು…ಕ್ಲಾಸ್ ಟಾಪ್ ಕ್ಲಾಸ್ ಬ್ಯಾಟಿಂಗ್ #ಹೆಡ್” ಎಂದು ಗೇಲಿ ಮಾಡಿದ್ದಾರೆ.

ಅವರೇ ತೋಡಿದ ಹಳ್ಳಕ್ಕೆ ಅವರೇ ಬಿದ್ದರು ಎಂದು ಟ್ವೀಟ್ ಮಾಡಿದ ಶೋಯಬ್ ಅಖ್ತರ್

ವಿಶ್ವಕಪ್’ನಲ್ಲಿ ಭಾರತ ಸೋಲಲು ಕಾರಣವೇನೆಂದು ತಿಳಿಸಿದ ಅಖ್ತರ್‌, “ಟೀಂ ಇಂಡಿಯಾದ ಸೋಲಿಗೆ ಕಾರಣವಾಗಿದ್ದು ಪಿಚ್‌. ಫೈನಲ್‌ ಪಂದ್ಯಕ್ಕೆ ಆತಿಥೇಯ ಭಾರತ ಉತ್ತಮ ಪಿಚ್‌ ನಿರ್ಮಾಣ ಮಾಡಬೇಕಿತ್ತು. ಪಿಚ್‌ನಲ್ಲಿ ವೇಗ ಮತ್ತು ಬೌನ್ಸ್‌ ಇರಬೇಕು. ಆದರೆ, ಸ್ಪಿನ್ನರ್‌’ಗಳಿಗೆ ನೆರವಾಗಲಿ ಎಂದು ಮಂದಗತಿಯ ಪಿಚ್‌ ನಿರ್ಮಾಣ ಮಾಡಿ, ಅವರೇ ತೋಡಿದ ಹಳ್ಳಕ್ಕೆ ಅವರೇ ಬಿದ್ದರು. ಭಾರತದ ಈ ತಂತ್ರ ಸರಿಯಾಗಿರಲಿಲ್ಲ” ಎಂದು ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಶೋಯೆಬ್ ಅಖ್ತರ್ ಹೇಳಿಕೆಗೆ ಪ್ರತ್ಯುತರ

ಪ್ರಸ್ತುತ ಶೋಯೆಬ್ ಅಖ್ತರ್ ಅವರ ಈ ಕಾಮೆಂಟ್‌’ಗೆ, ಜನರು ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಮಾಡುತ್ತಿದ್ದಾರೆ. “ಪಾಕಿಸ್ತಾನ ಯಾವಾಗಲೂ ತನ್ನ ಮನಸ್ಥಿತಿಯನ್ನು ತೋರಿಸುತ್ತದೆ. ಅವರು ಎಷ್ಟೊಂದು ಕಳಪೆ ಆಟವನ್ನಾಡಿದರೂ ಅದು ಅವರಿಗೆ ಕಾಣುವುದಿಲ್ಲ, ಬದಲಿಗೆ ಭಾರತ ಸೋತಿರುವುದನ್ನು ನೋಡುತ್ತಿದೆ. ಮೊದಲು ಏಷ್ಯಾಕಪ್‌’ನಲ್ಲಿ ಮತ್ತು ನಂತರ ವಿಶ್ವಕಪ್‌’ನಲ್ಲಿ ಭಾರತ ತಂಡ ಅದ್ಭುತವಾಗಿ ಆಟವಾಡಿದೆ ಎಂಬುದನ್ನು ಮರೆತ ನಾಚಿಕೆಗೇಡಿಗಳು ಇವರು” ಎಂದು ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಕೆಲವರು ಇನ್ನು ಸರಿಯಾಗಿ ಟಾಂಗ್ ಕೊಟ್ಟು ಕಾಮೆಂಟ್ ಮಾಡಿರುವುದನ್ನು ಕಾಣಬಹುದಾಗಿದೆ.

Leave A Reply

Your email address will not be published.