Shoaib Malik: ಸಾನಿಯಾ ಮಿರ್ಜಾ ಮತ್ತು ಮಲಿಕ್ ವಿಚ್ಛೇಧನ, ವಿಚ್ಛೇಧನದ ಬಗ್ಗೆ ಸ್ಪಷ್ಟನೆ ನೀಡಿದ ಮಲಿಕ್.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವೈವಾಹಿಕ ಜೀವನ ಅಂತ್ಯ, ವಿಚ್ಛೇಧನದ ಬಗ್ಗೆ ಮಾಹಿತಿ ನೀಡಿದ ಮಲಿಕ್
Shoaib Malik And Sania Mirza latest News: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಅವರು ಪ್ರೀತಿಸಿ ಮದುವೆ ಆಗಿ 13 ವರ್ಷಗಳು ಕಳೆದಿದ್ದು, ಇವರಿಬ್ಬರಿಗೆ ಒಂದು ಗಂಡು ಮಗನಿದ್ದಾನೆ. ಕೆಲವು ತಿಂಗಳುಗಳಿಂದ ಇವರಿಬ್ಬರಿಗೆ ಸಂಬಂಧಿಸಿ ಭಾರೀ ಊಹಾಪೋಹಗಳು ಸದ್ದು ಮಾಡಿವೆ. ಕಳೆದ ವರ್ಷದಿಂದ ಇವರಿಬ್ಬರ ವಿಚ್ಛೇದನದ ಊಹಾಪೋಹಗಳು ಹರಿದಾಡುತ್ತಿದ್ದರೂ, ಇಬ್ಬರೂ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ವಿಶ್ವದ ಸ್ಟಾರ್ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾದ, ಭಾರತದ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ನಡುವಿನ ಸಂಬಂಧ ಮುರಿದುಬಿದ್ದಿದೆ ಎನ್ನಲಾಗುತ್ತಿದೆ .ಈ ಮಧ್ಯೆ ಶೋಯೆಬ್ ಮಲಿಕ್ ಮಾಡಿದ ಪೋಸ್ಟ್ ಒಂದು ವೈರಲ್ ಆಗಿದ್ದು, ಜೊತೆಗೆ ಸಾನಿಯಾ ಮಿರ್ಜಾ ನೀಡಿರುವ ಹೇಳಿಕೆಯೊಂದು ಸಖತ್ ಸದ್ದು ಮಾಡುತ್ತಿದೆ.

ಮಗನನ್ನು ಆಯ್ಕೆ ಮಾಡಿದ ಸಾನಿಯಾ ಮಿರ್ಜಾ
ಸಾನಿಯಾ ಮತ್ತು ಶೋಯೆಬ್ 2010 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆ ಎರಡೂ ದೇಶಗಳ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಸೃಷ್ಟಿ ಮಾಡಿತ್ತು. ಇತ್ತೀಚೆಗೆಯಷ್ಟೇ ಸೋಶಿಯಲ್ ಮೀಡಿಯಾ ಸಂದರ್ಶನವೊಂದರಲ್ಲಿ ನಿರೂಪಕಿ ಸಾನಿಯಾ ಬಳಿ ಒಂದು ಪ್ರಶ್ನೆಯನ್ನು ಕೇಳಿದ್ದರು.
ಅದೇನೆಂದರೆ, “ನಿಮಗೆ ಶೋಯೆಬ್ ಮತ್ತು ನಿಮ್ಮ ಮಗನಲ್ಲಿ ಯಾರೆಂದರೆ ಇಷ್ಟ?” ಎಂಬುದಾಗಿತ್ತು, ಇದಕ್ಕೆ ಹಿಂದೂ ಮುಂದೂ ಯೋಚಿಸದೆ ಮಗನೇ ಇಷ್ಟ ಎಂದು ಹೇಳಿಕೆ ನೀಡಿದ್ದಾರೆ ಸಾನಿಯಾ. ಈ ಬೆನ್ನಲ್ಲೇ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನದ ಬಗ್ಗೆ ಮತ್ತೆ ಗಾಸಿಪ್ ಎದ್ದಿದೆ.

ಇನ್‌ಸ್ಟಾಗ್ರಾಮ್ ಬಯೋ ಚೇಂಜ್
41 ವರ್ಷದ ಮಲಿಕ್ ತಮ್ಮ ಇನ್‌ಸ್ಟಾಗ್ರಾಂ ಬಯೋದಿಂದ ‘ಸೂಪರ್ ವುಮನ್ ಸಾನಿಯಾ ಮಿರ್ಜಾ ಪತಿ’ ಎಂಬ ಬರಹವನ್ನು ತೆಗೆದುಹಾಕಿ, ‘ಫಾದರ್ ಆಫ್ ಒನ್ ಟ್ರೂ ಬ್ಲೆಸ್ಸಿಂಗ್’ ಎಂದು ಬರೆದಿದ್ದಾರೆ. ಇದು ವಿಚ್ಛೇದನದ ಗಾಸಿಪ್’ಗೆ ತುಪ್ಪ ಸುರಿದಂತೆ ಆಗಿದೆ.
ಇನ್ನು ಅವರ ಆಪ್ತ ಮೂಲಗಳು ಹೇಳುವಂತೆ, “ಸಾನಿಯಾ ಮತ್ತು ಶೋಯೆಬ್ ವಿಚ್ಛೇದನ ವಿಚಾರ ಅವರ ವೈಯಕ್ತಿಕ ಜೀವನದ್ದಾಗಿದ್ದು, ಈ ಹಿನ್ನೆಲೆಯಲ್ಲಿಯೇ ಅವರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲು ಬಯಸುವುದಿಲ್ಲ. ಅವರ ಖಾಸಗಿತನವನ್ನು ಗೌರವಿಸುವುದಾದರೆ ಅವರು ಕೃತಜ್ಞರಾಗಿರುತ್ತಾರೆ” ಎಂದು ಹೇಳಿದೆ. ಹಾಗಾಗಿ ಸ್ವತಃ ಇವರಿಬ್ಬರು ಏನನ್ನು ಹೇಳದೆ ಊಹಾಪೋಹಗಳನ್ನು ನಂಬುವುದು ಸೂಕ್ತ ಅಲ್ಲ ಎನ್ನಬಹುದು.