Shrirasthu Shubhamasthu: ಮನೆಗೆ ಬಂದ ಸಂಧ್ಯಾಗೆ ಸಕತ್ ತಿರುಗೇಟು ಕೊಟ್ಟ ತುಳಸಿ, ಬಾಯಿ ಮುಚ್ಚಿಕೊಂಡು ಹೊರನಡೆದ ಸಂಧ್ಯಾ.
ಮಾಧವನ ಮನೆ ನೋಡಿ ಬೆರಗಾದ ಸಂಧ್ಯಾ ಹಾಗು ಆಕೆಯ ಮಾವ.
Shrirasthu Shubhamasthu Kannada Serial: ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ ಹಾಗು ತುಳಸಿಯ ಮದುವೆ ಆದ ನಂತರ ಮಾಧವನ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿರುತ್ತದೆ. ಅವಿಗೆ ತನ್ನ ತಂದೆ ಮಾಧವ್ ಮನೆಗೋಸ್ಕರ ತುಳಸಿಯನ್ನು ಬಿಡುವುದಿಲ್ಲ ಎಂದರಲ್ಲ ಎಂಬ ಬೇಸರವಿರುತ್ತದೆ. ಇದರಿಂದ ಅವಿ ಕೋಪದಲ್ಲೇ ಇರುತ್ತಾನೆ. ಪೂರ್ಣಿಮಾ ಅವಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಾಳೆ.
ಆಗ ಅವಿ ತನಗೆ ಆಗಾಗ ಸಿಕ್ಕಿ ಊಟ ಕೊಡುತ್ತಿದ್ದ ವ್ಯಕ್ತಿ ತುಳಸಿಯೇ. ಇವರು ಹೀಗೆಲ್ಲಾ ಮಾಡಲು ಕಾರಣವೂ ಇದೇ ಅಂತ ಈಗ ತಿಳೀತು ಎಂದು ಹೇಳುತ್ತಾನೆ. ಆಗ ಪೂರ್ಣಿಮಾಳಿಗೆ ಅವಿ, ತುಳಸಿ ಅಮ್ಮನನ್ನು ಅಪಾರ್ಥ ಮಾಡಿಕೊಂಡಿದ್ದಾನೆ ಎಂಬುದು ಅರ್ಥವಾಗುತ್ತದೆ. ಆದರೆ, ಅವನಿಗೆ ಹೇಗೆ ಅರ್ಥ ಮಾಡಿಸುವುದು ಎಂಬುದು ತಿಳಿಯುವುದಿಲ್ಲ.

ಶಾರ್ವರಿಯ ಚುಚ್ಚು ಮಾತುಗಳು
ಇನ್ನು ತುಳಸಿ ತನ್ನ ರೂಮ್‌ನಲ್ಲೇ ನಿತ್ಯ ದೇವರಿಗೆ ದೀಪ ಹಚ್ಚಿ ಪೂಜೆ ಮಾಡುತ್ತಿರುತ್ತಾಳೆ. ಇದನ್ನು ಗಮನಿಸಿದ ಶಾರ್ವರಿ, ಅವಳ ಬಳಿ ಮಾತನಾಡಲು ಬರುತ್ತಾಳೆ. ಅವಿ ಬಂದು ಭಾವನನ್ನು ಕೇಳಿದಾಗ ಅವರು ನಿನ್ನ ಬಿಡೋದಕ್ಕೆ ಒಪ್ಪಲಿಲ್ಲ. ನೀನಾದರೂ ಅವರನ್ನು ಒಪ್ಪಿಸಬಹುದಿತ್ತು. ಯಾಕೆ ಹಾಗೆ ಮಾಡಲಿಲ್ಲ. ನಿನಗೆ ಈ ಮನೆಯಲ್ಲಿ ಇರೋದಕ್ಕೆ ಹಕ್ಕಿಲ್ಲ. ಅಷ್ಟೇ ಅಲ್ಲದೇ, ದೇವರ ಮನೆಯಲ್ಲಿ ಪೂಜೆ ಮಾಡೋದಕ್ಕೆ ಬಿಡಲಿಲ್ಲ ಅಂತ ನೀನು ಹೀಗೆ ರೂಮ್‌ನಲ್ಲಿ ಪೂಜೆ ಮಾಡೋದು ಸರಿಯಲ್ಲ ಎಂದು ಹೇಳುತ್ತಾಳೆ. ತುಳಸಿ ಶಾರ್ವರಿಯ ಮಾತು ಕೇಳಿ ತಬ್ಬಿಬಾಗಿ ನಿಂತಿರುತ್ತಾಳೆ.
ಶಾರ್ವರಿ ಎದುರೇ ತುಳಸಿ ಪರ ನಿಂತ ಪೂರ್ಣಿ
ತುಳಸಿ-ಶಾರ್ವರಿ ಮಾತು ಕೇಳುತ್ತಾ ಬರುವ ಪೂರ್ಣಿಮಾ ಹೌದು, ನನಗೂ ಬೇಸರವಾಗುತ್ತೆ. ಮನೆಯಲ್ಲಿ ಅಷ್ಟು ದೊಡ್ಡ ದೇವರ ಮನೆ ಇರಬೇಕಾದರೆ ಇಲ್ಯಾಕೆ ಪೂಜೆ ಮಾಡಬೇಕು. ನಾಳೆಯಿಂದ ನೀವು ದೇವರ ಮನೆಯಲ್ಲೇ ಪೂಜೆ ಮಾಡಿ ಎಂದು ಪೂರ್ಣಿ ಶಾರ್ವರಿ ಎದುರಿಗೆ ತುಳಸಿಗೆ ಹೇಳುತ್ತಾಳೆ.

ಮಾಧವನ ಮನೆಗೆ ಮಾವನ ಜೊತೆ ಬಂದ ಸಂಧ್ಯಾ
ಇನ್ನು ಮನೆಯಲ್ಲಿ ರಾಕಿ ಹಬ್ಬ ಇರುತ್ತದೆ. ಅಭಿ ಹಾಗೂ ಅವಿ, ನಿಧಿ ಕೈಯಲ್ಲಿ ರಾಕಿ ಕಟ್ಟಿಸಿಕೊಳ್ಳಲು ಕಾಯುತ್ತಿರುತ್ತಾರೆ. ಆದರೆ, ಸಂಧ್ಯಾ ಮನೆಗೆ ಬಂದು ಇಬ್ಬರ ಕೈಗೂ ರಾಕಿ ಕಟ್ಟಿ ನನಗೆ ಅಣ್ತಮ್ಮಾಸ್ ಸಿಕ್ಕಿದರು. ಥ್ಯಾಂಕ್ಸ್ ಎಂದು ಹೇಳುತ್ತಾಳೆ. ಆದರೆ, ಮನೆಯವರಿಗೆಲ್ಲಾ ಇವಳು ಯಾರು ಎಂಬುದೇ ಗೊತ್ತಾಗುವುದಿಲ್ಲ.
ಅಷ್ಟರಲ್ಲಿ ತುಳಸಿ ಹಾಗೂ ಪೂರ್ಣಿಮಾ ಬರುತ್ತಾರೆ. ಸಂಧ್ಯಾ, ತುಳಸಿ ಮೈಮೇಲೆ ಇರುವ ಒಡವೆಗಳನ್ನು ನೋಡಿ ಹಿಗ್ಗುತ್ತಾಳೆ. ನಮ್ಮ ಅಮ್ಮ ಕೊನೆಗೂ ಇಷ್ಟು ದೊಡ್ಡ ಮನೆಗೆ ಸೊಸೆಯಾದರು. ಈ ಒಡವೆಗಳೆಲ್ಲಾ ಪ್ಯೂರ್ ಗೋಲ್ಡ್ ಆ ಎಂದು ಕೇಳುತ್ತಾಳೆ. ಸಂಧ್ಯಾ ಮಾತುಗಳೆಲ್ಲವೂ ತುಳಸಿಗೆ ಮುಜುಗರ ಉಂಟು ಮಾಡುತ್ತಿರುತ್ತದೆ.
ತುಳಸಿ ಬೀಗರಾದ ಜಗದೀಶ್ ಗೆ ಆಸ್ತಿ ಮೇಲೆ ಕಣ್ಣು
ಇದೇ ವೇಳೆಗೆ ತುಳಸಿ ಬೀಗರು ಅಂದರೆ, ಸಂಧ್ಯಾ ಮಾವ ಜಗದೀಶ್ ಕೂಡ ಬರುತ್ತಾರೆ. ಜಗದೀಶ್ ಮಾಧವ್ ಆಸ್ತಿ ಹಾಗೂ ಹಣದ ಮೇಲೆ ಕಣ್ಣು ಹಾಕುತ್ತಾನೆ. ಜಗದೀಶ್ ಅವರು ಎಷ್ಟು ದೊಡ್ಡ ಮನೆ ಎಂದು ಹೇಳುತ್ತಾ ಬರುತ್ತಾನೆ. ಇದೆಲ್ಲವೂ ತುಳಸಿಗೆ ಕೋಪ ಬರುವಂತೆ ಮಾಡುತ್ತದೆ. ಕೊನೆಗೆ ತುಳಸಿ ಇಬ್ಬರನ್ನು ನೀವು ಇಲ್ಲಿಗೆ ಯಾಕೆ ಬಂದಿದ್ದೀರಾ ಎಂದು ನನಗೆ ಚೆನ್ನಾಗಿ ಗೊತ್ತಿದೆ. ದಯವಿಟ್ಟು ಇಲ್ಲಿಂದ ಹೊರಡಿ. ಎಲ್ಲಾ ವಿಚಾರವನ್ನು ನಾನು ಇಲ್ಲಿ ಮಾತನಾಡೋದಕ್ಕೆ ಆಗೋದಿಲ್ಲ ಎಂದು ಹೇಳಿ ಬೇಸರದಿಂದ ಬೈದು ಕಳಿಸುತ್ತಾಳೆ.

ತುಳಸಿ ಕೈ ಮೇಲೆ ಬಿಸಿ ಕಾಫಿ ಚೆಲ್ಲಿದ ಅಭಿ
ಇನ್ನು ಅವರೆಲ್ಲಾ ಹೊರಟ ಮೇಲೆ ತುಳಸಿಗೆ ಬೇಸರ ಆಗಿರುತ್ತದೆ. ಆದರೂ ಬೇರೆ ದಾರಿ ಇರುವುದಿಲ್ಲ. ಇನ್ನು ಅಭಿ ಹಾಗೂ ಅವಿ ಮನೆಯಲ್ಲಿ ನಡೆದ ಘಟನೆಗಳು ನೋವು ಕೊಟ್ಟಿರುತ್ತದೆ. ಇದೇ ತಲೆ ಬಿಸಿಯಲ್ಲಿ ಅಭಿ ಬಂದು ಪಾಪಮ್ಮನಿಗೆ ಸ್ಟ್ರಾಂಗ್ ಕಾಫಿ ಕೊಡಲು ಕೇಳುತ್ತಾನೆ. ಆಗ ತುಳಸಿ ಸ್ಟ್ರಾಂಗ್ ಆಗಿ ಕಾಫಿ ತಂದು ಕೊಡುತ್ತಾಳೆ. ಕೋಪ ಮಾಡಿಕೊಂಡಿರುವ ಅಭಿ ಹಿಂದೆ ಮುಂದೆ ಯೋಚಿಸದೇ ಬಿಸಿ ಕಾಫಿ ಅನ್ನು ಚೆಲ್ಲುತ್ತಾನೆ. ಅದು ತುಳಸಿ ಕೈ ಮೇಲೆಯೇ ಬೀಳುತ್ತದೆ. ಮುಂದೆ ಏನಾಗುತ್ತದೆ ಎಂದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.