Adhaar Card: ನಿಮಗೆ ತಿಳಿಯದಂತೆ ನಿಮ್ಮ ಆಧಾರ್ ನಿಂದ ಬೇರೆಯವರು ಸಿಮ್ ಖರೀದಿಸಿರಬಹುದು, ಈ ರೀತಿ ಚೆಕ್ ಮಾಡಿ.

ನಿಮಗೆ ತಿಳಿಯದಂತೆ ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಖರೀತಿ ಮಾಡಿರಬಹುದು, ಈ ರೀತಿ ತಿಳಿಯಿರಿ.

Sim Card And Aadhaar Card: ಆಧಾರ್ ಕಾರ್ಡ್ (Aadhaar Card Wiki) ಬಹಳ ಪ್ರಮುಖವಾದ ಗುರುತಿನ ಚೀಟಿಯಾಗಿದೆ. ಆಧಾರ್ ಕಾರ್ಡ್ ಇದ್ದರೆ ಮಾತ್ರ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಬಹುದು ಇಲ್ಲ ಅಂತಾದರೆ ಯಾವ ಕೆಲಸವೂ ಸಾಧ್ಯವಿಲ್ಲ. ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ಪಡೆಯಲು, ಬ್ಯಾಂಕ್ ಕೆಲಸಗಳಿಗೆ, ಪಾಸ್ ಪೋರ್ಟ್ ಪಡೆಯಲು, ಸರ್ಕಾರದಿಂದ ಸೌಲಭ್ಯ ಪಡೆಯಲು, ಅಷ್ಟೇ ಅಲ್ಲದೆ ಸಿಮ್ ಕಾರ್ಡ್ ಪಡೆಯಲು ಸಹ ಆಧಾರ್ ಕಾರ್ಡ್ ಬಹಳ ಮುಖ್ಯ ಆಗಿದೆ.

ಹಾಗು ಕೆಲವರು ಬೇರೆಯವರ ಆಧಾರ್ ಕಾರ್ಡ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ. ಆಧಾರ್ ಕಾರ್ಡ್ ಜೆರಾಕ್ಸ್ ಕೂಡ ಬೇರೆಯವರ ಕೈ ಸೇರದಂತೆ ಜಾಗ್ರತೆ ವಹಿಸುವುದು ಬಹಳ ಮುಖ್ಯ.

Sim Card And Aadhaar Card
Image Credit: Firstbharatiya

ಆಧಾರ್ ಕಾರ್ಡಿನ ದುರುಪಯೋಗ

ಬೇರೆಯವರ ಆಧಾರ್ ಕಾರ್ಡ್ ಪಡೆದು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಅಪರಾಧಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವರದಿ ಆಗಿದೆ. ಬೇರೆಯವರ ಆಧಾರ್ ಕಾರ್ಡ್ ಜೆರಾಕ್ಸ್ ಪಡೆದು ಅನವಶ್ಯಕವಾಗಿ ಸಿಮ್ ಖರೀದಿ ಮಾಡಿ ಕಾನೂನು ಬಾಹಿರ ಕೆಲಸಗಳಿಗೆ ಅಂತಹ ಸಿಮ್ ಅನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ ಎಂಬ ವಿಚಾರ ಹೊರಬಿದ್ದಿದೆ. ಒಂದೇ ಆಧಾರ್ ಕಾರ್ಡ್ ನಿಂದ 600 ಕ್ಕೂ ಹೆಚ್ಚು ಸಿಮ್ ಕಾರ್ಡುಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತನಿಖೆಯ ಸಮಯದಲ್ಲಿ ತಿಳಿದುಬಂದಿದೆ.

ಸಿಮ್ ಕಾರ್ಡ್ ಖರೀದಿಸಲು ಆಧಾರ್ ಕಾರ್ಡ್ ದುರ್ಬಳಕೆ

ದೂರಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ನಲ್ಲಿ ಕೇವಲ ಒಂಬತ್ತು ಸಿಮ್ ಕಾರ್ಡುಗಳನ್ನು ತೆಗೆದುಕೊಳ್ಳಬಹುದು. ಇದಕ್ಕಿಂತ ಹೆಚ್ಚಿನ ಸಿಮ್ ಗಳನ್ನು ಪಡೆಯಲು ಅನುಮತಿಸಲಾಗುವುದಿಲ್ಲ. ಈ ನಿಬಂಧನೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಒಂದು ಸಣ್ಣ ಟ್ರಿಕ್ ಮೂಲಕ, ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಕಾರ್ಡ್ ಗಳಿವೆ ಎಂಬುದನ್ನು ನೀವು ಕಂಡುಹಿಡಿಯಬಹುದು.

Sim Card And Aadhaar latest update
Image Credit: Original Source

ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ ಎಂದು ತಿಳಿಯುವ ವಿಧಾನ

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ ಎಂದು ತಿಳಿಯಲು ಮೊದಲು ಸಂಚಾರ್ ಸಾತಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ಮಾಡಿ ನಂತರ ಮೊಬೈಲ್ ಕನೆಕ್ಷನ್ ಆಯ್ಕೆಯನ್ನು ಆರಿಸಿ, ಇದು ತಕ್ಷಣವೇ ಹೊಸ ಪುಟವನ್ನು ತೆರೆಯುತ್ತದೆ, ನೀವು ತಕ್ಷಣ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.

ನಂತರ ಕ್ಯಾಪ್ಚಾ ಕೋಡ್ ಅನ್ನು ಕೇಳಲಾಗುತ್ತದೆ ಮತ್ತು ನಂತರ ಒಟಿಪಿಯನ್ನು ನಮೂದಿಸಲಾಗುತ್ತದೆ ನಂತರ ಇದು ಮತ್ತೆ ಹೊಸ ಪುಟವನ್ನು ತೆರೆಯುತ್ತದೆ. ಇದು ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ರೀತಿಯ ವಿಧಾನದಿಂದ ನಿಮ್ಮ ಆಧಾರ್ ಕಾರ್ಡ್ ಸೇಫ್ ಇದೆಯಾ ಎಂದು ತಿಳಿದುಕೊಳ್ಳಬಹುದು.

Leave A Reply

Your email address will not be published.