Singer Mangli: ಗಾಯಕಿ ಮಂಗ್ಲಿ ಮದುವೆ ಫಿಕ್ಸ್, ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಹೇಳಿ ಕೋಪ ಮಾಡಿಕೊಂಡ ಮಂಗ್ಲಿ.
ತೆಲುಗಿನ ಪ್ರಸಿದ್ಧ ಗಾಯಕಿ ಮಂಗ್ಲಿಯವರ ಮದುವೆ ಫಿಕ್ಸ್.
Singer Mangli Marriage: ತೆಲುಗು ಹಾಗೂ ಕನ್ನಡದ ಗಾಯಕಿ ಮಂಗ್ಲಿಯವರು (Mangli) ಇತೀಚಿನ ದಿನಗಳಲ್ಲಿ ಪರಿಚಯಿತರಾಗಿದ್ದು, ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ.ಕನ್ನಡದ ‘ರಾಬರ್ಟ್ ‘ ಸಿನಿಮಾ ತೆಲುಗು ಆವೃತ್ತಿಗಾಗಿ ‘ಕಣ್ಣೇ ಅದಿರಿಂದಿ’ ಹಾಡು ಹಾಡಿದ್ದ ಮಂಗ್ಲಿ ಅದೊಂದೇ ಹಾಡಿನಿಂದ ಕರ್ನಾಟಕದಲ್ಲಿ ಭಾರಿ ಜನಪ್ರಿಯತೆ ಗಳಿಸಿಕೊಂಡಿದ್ದರು.
ಆ ಹಾಡಿನ ಬಳಿಕ ಕೆಲವು ಲೈವ್ ಶೋಗಳನ್ನು ಸಹ ಕರ್ನಾಟಕದಲ್ಲಿ ಮಾಡಿದ್ದ ಮಂಗ್ಲಿ, ಒಂದು ಕನ್ನಡ ಸಿನಿಮಾಕ್ಕೆ ನಾಯಕಿಯಾಗಿಯೂ ಆಯ್ಕೆ ಆಗಿದ್ದಾರೆ. ಇದೆಲ್ಲದರ ನಡುವೆ ಮಂಗ್ಲಿ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಗಾಯಕಿ ಮಂಗ್ಲಿ ಮದುವೆ
ತೆಲುಗಿನ ಜನಪ್ರಿಯ ಗಾಯಕಿ, ನಿರೂಪಕಿ, ನಟಿ ಮಂಗ್ಲಿ ಮದುವೆ ಆಗುತ್ತಿದ್ದಾರೆ. ಯಾವುದೇ ನಟ, ಗಾಯಕನನ್ನು ಅಲ್ಲದೆ ತಮ್ಮದೇ ಸಂಬಂಧಿಯೊಬ್ಬರೊಟ್ಟಿಗೆ ಮಂಗ್ಲಿಯ ವಿವಾಹ ನಿಶ್ಚಯವಾಗಿದೆ ಎಂಬ ಸುದ್ದಿ ತೆಲುಗು ಚಿತ್ರರಂಗದಲ್ಲಿ ಜೋರಾಗಿ ಹರಿದಾಡುತ್ತಿದೆ.
ಮಂಗ್ಲಿ ತಮ್ಮ ಮಾವನ ಮಗನ ಜೊತೆ ಇದೇ ನವೆಂಬರ್ನಲ್ಲಿ ಹಸೆ ಮಣೆ ಏರಲಿದ್ದಾರಂತೆ. ಬಂಜಾರ ಸಮಯದಾಯಕ್ಕೆ ಸೇರಿದ ಮಂಗ್ಲಿಯ ವಿವಾಹ ಅವರ ನಂಬಿಕೆಯಂತೆ ಶಾಸ್ತ್ರೋಕ್ತವಾಗಿ ನೆರವೇರಲಿದೆ. ಮದುವೆ ಬಗ್ಗೆ ಹಿಂದೆ ಉಡಾಫೆಯ ಉತ್ತರ ನೀಡಿದ್ದ ಮಂಗ್ಲಿ, ಇದೀಗ ಮದುವೆ ಆಗಲು ನಿಶ್ಚಯಿಸಿರುವುದನ್ನು ಅವರ ಅಭಿಮಾನಿಗಳು ಸ್ವಾಗತಿಸುವುದು ಖಾತ್ರಿ.
ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ಮಂಗ್ಲಿ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸುದ್ದಿ ಹರಿದಾಡುತ್ತಿದ್ದಂತೆ ಮಾತನಾಡಿದ ಮಂಗ್ಲಿ ಅವರು ತನ್ನ ಮದುವೆ ಫಿಕ್ಸ್ ಆಗಿಲ್ಲ. ನಾನು ಮಾವನ ಜೊತೆ ಮದುವೆ ಆಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೊಂದು ಸುಳ್ಳು ಸುದ್ದಿ ಆಗಿತ್ತು ಯಾರು ನಂಬಬೇಡಿ ಎಂದು ಮಂಗ್ಲಿ ಅವರು ಹೇಳಿದ್ದಾರೆ.
ಗಾಯಕಿ ಮಂಗ್ಲಿಯವರ ಸಿನಿಮಾ ಜೀವನ
ತೆಲುಗಿನ ಹಲವು ಸಿನಿಮಾ ನಟ-ನಟಿಯರೊಡನೆ ಅತ್ಯಾಪ್ತ ಬಂಧ ಹೊಂದಿರುವ ಮಂಗ್ಲಿ ಮದುವೆಗೆ ಟಾಲಿವುಡ್ನ ದಿಗ್ಗಜರು ಆಗಮಿಸುವುದು ಖಚಿತ. ಮಂಗ್ಲಿ ತಮ್ಮ ತೆಲುಗು ಜನಪದ ಹಾಡುಗಳಿಂದ ಜನಪ್ರಿಯತೆ ಗಳಿಸಿದರು. ಬಳಿಕ ತೆಲುಗಿನ ಹಲವು ಜನಪ್ರಿಯ ಸಿನಿಮಾ ಹಾಡುಗಳಿಗೂ ಧ್ವನಿಯಾಗಿದ್ದಾರೆ. ನಟನೆಯನ್ನೂ ಆರಂಭಿಸಿರುವ ಮಂಗ್ಲಿ ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕನ್ನಡದಲ್ಲಿ ಚಕ್ರವರ್ತಿ ಚಂದ್ರಚೂಡ್ ನಿರ್ದೇಶಿಸಲು ಮುಂದಾಗಿದ್ದ ಸಿನಿಮಾ ಒಂದಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಆ ಸಿನಿಮಾ ಇನ್ನು ಸೆಟ್ಟೇರಿಲ್ಲ.