SIP: ಕೇವಲ 10 ರಿಂದ 20 ವರ್ಷಗಳಲ್ಲಿ ಕೋಟ್ಯಧಿಪತಿಯಾಗಬೇಕಾ? ಹೀಗಿರಲಿ ನಿಮ್ಮ ಹೂಡಿಕೆ

ಕಡಿಮೆ ಅವಧಿಯಲ್ಲಿ ಕೋಟಿ ಕೋಟಿ ಗಳಿಕೆ ಮಾಡಲು ಈ ವಿಧಾನವನ್ನು ಅನುಸರಿಸಿ ಹಾಗು ಇಲ್ಲಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ

SIP Investment Tips: ಜನ ಸಾಮಾನ್ಯರು ತನ್ನ ಆದಾಯದಲ್ಲಿ ಸ್ವಲ್ಪ ಹಣವನ್ನು ಉಳಿತಾಯ ಅಥವಾ ಹೂಡಿಕೆ ಮಾಡಲು ಇಷ್ಟ ಪಡುತ್ತಾರೆ. ಮುಂದಿನ ಭವಿಷ್ಯಕ್ಕೆ ಆರ್ಥಿಕ ನೆರವು ಬೇಕೆನ್ನುವ ಕಾರಣಕ್ಕೆ ಹೂಡಿಕೆಯ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಅಲ್ಪಾವಧಿಯಲ್ಲಿ ಉತ್ತಮ ಆದಾಯವನ್ನು ಹೊಂದಬೇಕೆಂಬ ಕಾರಣಕ್ಕಾಗಿ ಮ್ಯೂಚುವಲ್ ಫಂಡ್‌ಗಳಲ್ಲಿನ (Mutual Fund)ಹೂಡಿಕೆ ಮಾಡಲು ಹಲವರು ಆಯ್ಕೆ ಮಾಡಿಕೊಳ್ಳುತ್ತಾರೆ.

ಮ್ಯೂಚುವಲ್ ಫಂಡ್‌ಗಳಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆಗಳು (SIP) ಹೂಡಿಕೆಗೆ ಉತ್ತಮ ಮಾರ್ಗ ಎನಿಸಿಕೊಂಡಿವೆ. ಮ್ಯೂಚುವಲ್ ಫಂಡ್‌ ನಲ್ಲಿ ಕಡಿಮೆ ಹೂಡಿಕೆ ಮಾಡಿ ಅಧಿಕ ಲಾಭ ಪಡೆಯಬಹುದಾಗಿದೆ.

sip investment
Image Credit: etmoney

ಹೂಡಿಕೆಯ ಅವಧಿಯಲ್ಲಿ ಆಯ್ಕೆಗಳಿರುತ್ತದೆ

ಮ್ಯೂಚುಯಲ್ ಫಂಡ್‌ ನಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ಹೂಡಿಕೆಯ ಅವಧಿಯನ್ನು ಹೊಂದಬಹುದಾಗಿದೆ. ಇದರಲ್ಲಿ ಅಲ್ಪಾವಧಿಯ, ಮಧ್ಯಮ ಅಥವಾ ದೀರ್ಘಾವಧಿಯ ಹೂಡಿಕೆಯ ಅವಧಿಯನ್ನು ಆಯ್ಕೆ ಮಾಡಬಹುದು. ಈ ರೀತಿಯ ಆಯ್ಕೆಯ ಮೂಲಕ ಅವಧಿ ಮುಗಿದ ನಂತರ ನಮ್ಮ ಹೂಡಿಕೆಯ ಹಣದ ಜೊತೆಗೆ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಈ ಹೂಡಿಕೆಯಲ್ಲಿ ಕೋಟ್ಯಧಿಪತಿ ಆಗುವ ಅವಕಾಶ

ನಾವು ಕಡಿಮೆ ಅವಧಿಯಲ್ಲಿ ಕೋಟ್ಯಧಿಪತಿ ಆಗಲು ಎಷ್ಟು, ಹೇಗೆ ಹೂಡಿಕೆ ಮಾಡಬೇಕು ಎಂಬ ಮಾಹಿತಿ ಬಹಳ ಮುಖ್ಯ ಆಗಿರುತ್ತದೆ. 10, 15 ಮತ್ತು 20 ವರ್ಷಗಳಲ್ಲಿ ಕೋಟ್ಯಾಧಿಪತಿ ಆಗಲು ನಾವಿಲ್ಲಿ ಮೂರು ವರ್ಷಗಳ ಲೆಕ್ಕಚಾರಗಳಿಗೆ 12 ಪ್ರತಿಶತದ ಪ್ರಮಾಣಿತ ವಾರ್ಷಿಕ ಬೆಳವಣಿಗೆ ದರವನ್ನು ಅಂದಾಜಿಸಿಕೊಂಡು ಲೆಕ್ಕ ಹಾಕುತ್ತಿದ್ದೇವೆ. ಮೊದಲಿಗೆ 10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಲು ನೀವು SIP ನಲ್ಲಿ ತಿಂಗಳಿಗೆ 43,041 ರೂ. ಹೂಡಿಕೆ ಮಾಡಬೇಕಾಗುತ್ತದೆ.

SIP Investment Tips
Image Credit: Jama

ನೀವು ಮಾಡಿದ ಈ ಒಟ್ಟು ಮೊತ್ತ ಹತ್ತು ವರ್ಷಕ್ಕೆ ಬರೋಬ್ಬರಿ 51.65 ಲಕ್ಷ ಆಗುತ್ತದೆ.ಅಲ್ಲಿಗೆ ನಿಮ್ಮ ಮೊತ್ತಕ್ಕೆ 12 ಪ್ರತಿಶತದ ಬಡ್ಡಿ ಹಾಕಿದರೆ, ನಿಮ್ಮ ಹೂಡಿಕೆ ಹಣ ಬಿಟ್ಟು ರೂ 48.35 ಲಕ್ಷ ಬಂಡವಾಳ ಲಾಭವನ್ನು ಪಡೆಯುತ್ತೀರಾ. ಹೀಗೆ 10 ವರ್ಷಗಳ ನಂತರ ನೀವು ಒಂದು ಕೋಟಿ ಆದಾಯ ಪಡೆಯಬಹುದು.

15 ವರ್ಷಗಳಲ್ಲಿ 1 ಕೋಟಿ ಗಳಿಸಲು SIPನಲ್ಲಿ 19,819 ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ 15 ವರ್ಷಗಳಲ್ಲಿ ನೀವು ರೂ 35.67 ಲಕ್ಷ ಹೂಡಿಕೆ ಮಾಡುತ್ತೀರಿ.ಈ ಹೂಡಿಕೆಯ ನಂತರ ಇದಕ್ಕೆ ಪ್ರತಿಯಾಗಿ ನೀವು 64.33 ಲಕ್ಷ ರೂಪಾಯಿಗಳ ಬಂಡವಾಳ ಲಾಭವನ್ನು ಪಡೆಯುತ್ತೀರಿ, ಆದರೆ ಒಟ್ಟು ಆದಾಯವು 1 ಕೋಟಿ ರೂಪಾಯಿಗಳಾಗಿರುತ್ತದೆ.

SIP Latest Update
Image Credit: Securityintelligence

20 ವರ್ಷಗಳಲ್ಲಿ 1 ಕೋಟಿ ರೂ.ಗಳನ್ನು ಸಂಗ್ರಹಿಸುವ ವಿಧಾನ

20 ವರ್ಷಗಳಲ್ಲಿ 1 ಕೋಟಿ ರೂ.ಗಳನ್ನು ಗಳಿಸಲು ಬಯಸಿದರೆ, ತಿಂಗಳಿಗೆ ನಿಮ್ಮ SIPನಲ್ಲಿ 10,009 ರೂ. ಹೂಡಿಕೆ ಮಾಡಬೇಕಾಗುತ್ತದೆ. ಇಲ್ಲಿ ನಿಮ್ಮ ಒಟ್ಟು ಹೂಡಿಕೆಯು 24.02 ಲಕ್ಷ ರೂಪಾಯಿ ಆಗಿರುತ್ತದೆ.ಆದರೆ ನೀವು ಅದರ ಮೇಲೆ 75.98 ಲಕ್ಷ ರೂಪಾಯಿಗಳ ಬಂಡವಾಳ ಲಾಭವನ್ನು ಪಡೆಯುತ್ತೀರಿ.

ಹೀಗೆ ನಿಮಗೆ 20 ವರ್ಷಗಳಲ್ಲಿ ನೀವು ರೂ. 1 ಕೋಟಿ ಸಂಗ್ರಹ ಮಾಡಬಹುದು.ಮೇಲಿನ ಲೆಕ್ಕಾಚಾರವನ್ನು ನೀವು ವಿಶ್ಲೇಷಿಸಿ ನೋಡಿದರೆ, 10 ವರ್ಷಗಳಲ್ಲಿ 1 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ತಿಂಗಳಿಗೆ 43,041 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗಿದೆ.ಆದರೆ ನೀವು ಹೂಡಿಕೆಯ ಅವಧಿಯನ್ನು 20 ವರ್ಷಗಳವರೆಗೆ ವಿಸ್ತರಿಸಿದರೆ, ತಿಂಗಳಿಗೆ ನಿಮ್ಮ SIP ಹೂಡಿಕೆಯು ಕೇವಲ 10,009 ರೂ.ಗಳಷ್ಟು ಕಡಿಮೆ ಇರುತ್ತದೆ.

Leave A Reply

Your email address will not be published.