Smartphone Camera: ಸ್ಮಾರ್ಟ್ಫೋನ್ ನ ಬ್ಯಾಕ್ ಕ್ಯಾಮೆರಾ ಪಕ್ಕದಲ್ಲಿ ಈ ಸಣ್ಣ ಹೋಲ್ ಯಾಕಿದೆ ಗೊತ್ತೇ…?
ಮೊಬೈಲ್ ಕ್ಯಾಮೆರಾ ಬಳಿ ಸಣ್ಣ ಹೋಲ್ ಯಾಕಿರುತ್ತದೆ.
Small Hole Next To Your Phone Camera: ಇಂದಿನ ಯುಗವನ್ನು ಸ್ಮಾರ್ಟ್ ಫೋನ್ ಗಳ ಯುಗ ಎಂದು ಕರೆಯಲಾಗುತ್ತದೆ. ಹುಟ್ಟಿದ ಮಗುವಿನಿಂದ ಹಿಡಿದು, ನಾಳೆ ಸಾಯುವ ಮುದುಕನ ಬಳಿಯೂ ಸ್ಮಾರ್ಟ್ ಫೋನ್ ಇರುತ್ತದೆ. ಸ್ಮಾರ್ಟ್ ಫೋನ್ ಗಳು ಕೂಡ ದಿನಕ್ಕೊಂದು ವೈಶಿಷ್ಟತೆಯನ್ನು ಹೊಂದಿ ಬಿಡುಗಡೆಗೊಳ್ಳುತ್ತಿದ್ದು, ಜನರನ್ನು ಇನ್ನಷ್ಟು ಸ್ಮಾರ್ಟ್ ಫೋನ್ ಗಳತ್ತ ಗಮನ ಹರಿಸುವಂತೆ ಮಾಡುತ್ತಿದೆ.
ಇತೀಚಿನ ವರ್ಷಗಳಲ್ಲಿ ಮೊಬೈಲ್ ಇನ್ನಷ್ಟು ಅವಶ್ಯಕ ವಸ್ತು ಆಗಿದೆ. ಎಷ್ಟೇ ಬ್ಯುಸಿ ಕೆಲಸ ಇದ್ದರು ಮೊಬೈಲ್ ನೋಡಲೆಂದೇ ಕೆಲವಂದಿಷ್ಟು ಸಮಯವನ್ನು ಇಟ್ಟುಕೊಂಡಿರುತ್ತಾರೆ. ಮೊಬೈಲ್ ಗಳು ಕೂಡ ಈಗ ಬಹಳ ಕೆಲಸಗಳಿಗೆ ಉಪಯುಕ್ತ ಆಗಿದ್ದು, ಬಹುಬೇಡಿಕೆಯ ವಸ್ತು ಆಗಿದೆ.

ಹೆಚ್ಚುತ್ತಿರುವ ಮೊಬೈಲ್ ಬಳಕೆ
ಸ್ಮಾರ್ಟ್ ಫೋನ್ ಗಳು ಮನರಂಜನೆಯ ಹಾಗು ಬಹಳ ಉಪಯುಕ್ತವಾದ ವಸ್ತು ಆಗಿದೆ. ಪ್ರತಿಯೊಬ್ಬರಿಗೂ ಸ್ಮಾರ್ಟ್ ಫೋನ್ ಅವಶ್ಯಕ ಆಗಿದೆ ಹಾಗು ಫೋನ್ ಗಳು ಇಲ್ಲದೆ ದಿನವೇ ಆರಂಭ ಆಗುವುದಿಲ್ಲ ಎನ್ನಬಹದು. ಆದ್ರೆ ಹಲವರಿಗೆ ಫೋನ್ ಬಳಕೆ ಗೊತ್ತು ಆದರೆ ಅದರಲ್ಲಿರುವ ಕೆಲವೊಂದು ಪ್ರಮುಖ ವಿಷಯಗಳು ಗೊತ್ತಿರುವುದಿಲ್ಲ. ಏಕೆಂದರೆ ದಿನ ಬಳಕೆಯ ಮೊಬೈಲ್ ಅನ್ನು ತಮಗೆ ಹೇಗೆ ಬೇಕೋ ಹಾಗೆ ಉಪಯೋಗಿಸಿ ಬಿಡುತ್ತಾರೆ ಮೊಬೈಲ್ ನಲ್ಲಿರುವ ಕೆಲವೊಂದು ಪ್ರಮುಖ ಸೌಲಭ್ಯ ಹಾಗು ಅವುಗಳ ಮಹತ್ವದ ಬಗ್ಗೆ ತಿಳಿಯುವುದಿಲ್ಲ ಹಾಗು ಅದರ ಬಗ್ಗೆ ಗಮನ ಕೂಡ ಹರಿಸುವುದಿಲ್ಲ .
ಸ್ಮಾರ್ಟ್ಫೋನ್ನ ಹಿಂದಿನ ಕ್ಯಾಮೆರಾದ ಪಕ್ಕದಲ್ಲೇ ರಂಧ್ರವಿರುತ್ತದೆ
ಪ್ರತಿಯೊಂದು ಸ್ಮಾರ್ಟ್ ಫೋನ್ ನಲ್ಲೂ ಕ್ಯಾಮರಾ ಇದ್ದೆ ಇರುತ್ತದೆ. ಕ್ಯಾಮರಾ ಇಲ್ಲದೆ ಯಾವ ಫೋನ್ ಕೂಡ ಇರುವುದಿಲ್ಲ. ನಿಮ್ಮ ಸ್ಮಾರ್ಟ್ ಫೋನ್ ನಲ್ಲೂ ಕೂಡ ಕ್ಯಾಮರಾ ಇದ್ದು, ಕ್ಯಾಮೆರಾ ಬಳಿ ಈ ಹೋಲ್ ಅನ್ನು ನೀವು ಕಾಣಬಹುದು. ಸಾಮಾನ್ಯವಾಗಿ ಸ್ಮಾರ್ಟ್ಫೋನ್ ನ ಹಿಂದಿನ ಕ್ಯಾಮೆರಾದ ಪಕ್ಕದಲ್ಲೇ ಈ ರಂಧ್ರವಿರುತ್ತದೆ.
ಈ ರಂಧ್ರವು ವಿಭಿನ್ನ ಮಾದರಿಗಳಲ್ಲಿ ಚಿಕ್ಕದಾಗಿ ಅಥವಾ ದೊಡ್ಡದಾಗಿರುತ್ತದೆ. ಅಷ್ಟಕ್ಕೂ ಕಂಪನಿಯು ಈ ರಂಧ್ರವನ್ನು ಏಕೆ ನೀಡಿದೆ…? ಮತ್ತು ಇದು ಏನು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ..?. ಇದನ್ನು ಕೇವಲ ಡಿಸೈನ್ಗಾಗಿ ಬಳಸಲಾಗುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಇದು ನಿಜ ಅಲ್ಲ. ಈ ಹೋಲ್ ನೀಡಿರುವುದಕ್ಕೆ ಕಾರಣವಿದೆ.

ಹೊರಗಿನ ಶಬ್ದವನ್ನು ಕಡಿಮೆ ಮಾಡುತ್ತದೆ
ಸ್ಮಾರ್ಟ್ಫೋನ್ನ ಹಿಂಭಾಗದಲ್ಲಿರುವ ಈ ಸಣ್ಣ ರಂಧ್ರವನ್ನು ನಾಯ್ಸ್ ಕ್ಯಾನ್ಸಲೇಷನ್ ಗೆ ನೀಡಲಾಗಿದೆ. ಇದೊಂದು ಮೈಕ್ರೊಫೋನ್ ಆಗಿದೆ. ಸುಲಭವಾಗಿ ಹೇಳಬೇಕೆಂದರೆ, ನೀವು ಸ್ಮಾರ್ಟ್ಫೋನ್ನಲ್ಲಿ ಯಾರೊಂದಿಗಾದರೂ ಮಾತನಾಡುವಾಗ, ಈ ಮೈಕ್ರೊಫೋನ್ ನಿಮ್ಮ ಸುತ್ತಲಿನ ಶಬ್ದವನ್ನು ಕಡಿಮೆ ಮಾಡಿ ನೀವು ಮಾತನಾಡುವುದನ್ನು ಮಾತ್ರ ಸೆರೆಹಿಡಿಯುತ್ತದೆ. ಇದರರ್ಥ ನೀವು ಫೋನ್ನಲ್ಲಿ ಇನ್ನೊಬ್ಬರೊಂದಿಗೆ ಮಾತನಾಡುವಾಗ ನಿಮ್ಮ ಧ್ವನಿ ಸ್ಪಷ್ಟವಾಗಿ ಇನ್ನೊಬ್ಬ ವ್ಯಕ್ತಿಗೆ ಕೇಳಿಸುತ್ತದೆ.
ನೀವು ಚಾರ್ಜರ್ ಪಾಯಿಂಟ್ ಇರುವ ಸ್ಮಾರ್ಟ್ಫೋನ್ ನ ಕೆಳಭಾಗದಲ್ಲಿ ಮೈಕ್ರೊಫೋನ್ ಕಾಣಬಹುದು. ಅದರ ಮೂಲಕ ಈ ಸಣ್ಣ ರಂಧ್ರ ನಿಮ್ಮ ಸ್ಪಷ್ಟ ಧ್ವನಿಯು ಫೋನ್ನ ಇನ್ನೊಂದು ಬದಿಯಲ್ಲಿರುವ ವ್ಯಕ್ತಿಗೆ ತಲುಪಿಸುತ್ತದೆ. ಹಿಂಬದಿಯಲ್ಲಿರುವ ಈ ಹೋಲ್ ಹೊರಗಿನ ಶಬ್ದವನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂದು ಬಿಡುಗಡೆ ಆಗುವ ಹೆಚ್ಚಿನ ಪ್ರಮುಖ ಫೋನ್ಗಳಲ್ಲಿ ಈ ವೈಶಿಷ್ಟ್ಯವನ್ನು ನೋಡಬಹುದು. ಹಾಗು ಈ ಸೌಲಭ್ಯ ಮೊಬೈಲ್ ಬಳಕೆದಾರರಿಗೆ ಸಹಕಾರಿ ಆಗಿದೆ.