EMI: EMI ನಲ್ಲಿ ಮೊಬೈಲ್ ಖರೀದಿಸುವ ಜನರಿಗೆ ಎಚ್ಚರಿಕೆ, ಈ ತಪ್ಪು ಮಾಡಿದರೆ ನಿಮ್ಮ ಕೈಗೆ ಚಿಪ್ಪು.
ಲಾಭ ನಷ್ಟಗಳ ಬಗ್ಗೆ ತಿಳಿದು EMI ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿ.
Smart Phone Purchase On EMI: ಇಂದಿನ ಕಾಲದಲ್ಲಿ ಎಲ್ಲಾ ವಸ್ತುಗಳ ಬೆಲೆ ದುಬಾರಿ ಆಗಿದ್ದು, ಒಂದೇ ಸಲನೆ ಪೂರ್ತಿ ಹಣ ಕೊಟ್ಟು ವಸ್ತುಗಳನ್ನು ಖರೀದಿ ಮಾಡುವುದು ಕೆಲವರಿಗೆ ಕಷ್ಟ ಆಗಿರುತ್ತದೆ ಅಂತಹ ಸಮಯದಲ್ಲಿ ಇರುವ ಆಯ್ಕೆಯೇ EMI .
EMI ಮೂಲಕ ಖರೀದಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. EMI ನಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸುವುದರಿಂದ ಅನುಕೂಲಗಳು ಇದೆ ಜೊತೆಗೆ ಅನಾನುಕೂಲಗಳು ಇವೆ. ಅದು ಹೇಗೆ…? ಇದರಿಂದ ಯಾವ ರೀತಿ ನಷ್ಟ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಿ .
EMI ಆಯ್ಕೆ ಸರಳ ವಿಧಾನವಾಗಿದೆ
ಈಗ ಹೆಚ್ಚಿನ ಇ-ಕಾಮರ್ಸ್ ಸೈಟ್‌ಗಳು ಮತ್ತು ಚಿಲ್ಲರೆ ಅಂಗಡಿಗಳು ಫೋನ್‌ಗಳಿಗೆ ಸುಲಭವಾಗಿ ಮಾಸಿಕ EMI ಆಯ್ಕೆಯನ್ನು ಒದಗಿಸುತ್ತಿವೆ. ಹೀಗಾಗಿ EMI ಸವಾಲಿನ ಕೆಲಸವೇನಲ್ಲ .ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ದುಬಾರಿ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಹಾಗೂ ಬಜೆಟ್ ಕಡಿಮೆ ಇದ್ದರೆ, ಅವರು ಆರಿಸುವುದು ಇಎಂಐ ಆಯ್ಕೆ. ಒಂದೇ ಬಾರಿಗೆ ಪೂರ್ಣ ಮೊತ್ತವನ್ನು ಪಾವತಿಸುವ ಬದಲು ಮಾಸಿಕ ಕಂತುಗಳ ಮೂಲಕ ಅಂದರೆ ಇಎಂಐ ಮೂಲಕ ಸ್ಮಾರ್ಟ್‌ಫೋನ್ ಅನ್ನು ಖರೀದಿಸುತ್ತಾರೆ.
EMI ನ ಬಗ್ಗೆ ಮಾಹಿತಿ
ಇಎಂಐ ವ್ಯವಸ್ಥೆಯನ್ನು ಈ ರೀತಿ ಅರ್ಥೈಸಿಕೊಳ್ಳಬಹುದು. ಉದಾಹರಣೆಗೆ, ನೀವು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಅನ್ನು ಖರೀದಿಸುತ್ತಿರಿ ಎಂದು ಇಟ್ಟುಕೊಳ್ಳೋಣ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ಅದರ 64GB ಸ್ಟೋರೇಜ್ ರೂಪಾಂತರವನ್ನು ರೂ. 38,999 ಗೆ ಖರೀದಿಸಬಹುದು. 13 ಪ್ರತಿಶತದಷ್ಟು 3 ತಿಂಗಳ EMI ಯೋಜನೆಯನ್ನು ಆರಿಸಿದರೆ, ನೀವು ತಿಂಗಳಿಗೆ 13,283 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಹೀಗಾಗಿ, ಈ ಐಫೋನ್‌ಗೆ ನೀವು 39,849 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ 850 ರೂ. ಹೆಚ್ಚುವರಿಯಾಗೊ ನೀಡಬೇಕಾಗುತ್ತದೆ. ಒಂದುವೇಳೆ, 15 ಪ್ರತಿಶತದ 36-ತಿಂಗಳ EMI ಯೋಜನೆಯನ್ನು ಆರಿಸಿದರೆ, ನೀವು ತಿಂಗಳಿಗೆ 1352 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಆಗ ಈ ಫೋನ್‌ಗಾಗಿ ನೀವು ಒಟ್ಟು 48,672 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅಂದರೆ 38,999 ರೂ. ಫೋನ್‌ಗೆ ನೀವು 9,673 ರೂಪಾಯಿಗಳನ್ನು ಹೆಚ್ಚು ಖರ್ಚು ಮಾಡುತ್ತೀರಿ.
EMI ನಲ್ಲಿ ಖರೀದಿ ಉತ್ತಮ ಆಯ್ಕೆಯೇ ತಿಳಿಯಿರಿ ?
ಈಗ ನೀವು ಫೋನ್ ಅನ್ನು EMI ನಲ್ಲಿ ಖರೀದಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. EMI ನಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸುವುದರಿಂದ ಅನುಕೂಲಗಳು ಇದೆ ಜೊತೆಗೆ ಅನಾನುಕೂಲಗಳು ಇದೆ. ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬಡ್ಡಿದರದಲ್ಲಿ ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ, ಇಂದು ಒಂದು ಸ್ಮಾರ್ಟ್‌ಫೋನ್ ಬಿಡುಗಡೆ ಆಯಿತು ಎಂದಾದರೆ ಅದರ ಬೆಲೆ ಮೂರು-ನಾಲ್ಕು ತಿಂಗಳು ಕಳಿದ ಬಳಿಕ ಕುಸಿಯುತ್ತದೆ. ಆದ್ದರಿಂದ ಹೆಚ್ಚಿನ ಬಡ್ಡಿದರದಲ್ಲಿ ಅದನ್ನು ಖರೀದಿಸುವುದು ಉತ್ತಮ ಆಯ್ಕೆಯಲ್ಲ.