Smart TV: ಟಿವಿ ಖರೀದಿಸಲು ಇದು ಬೆಸ್ಟ್ ಟೈಮ್, ಸ್ಮಾರ್ಟ್ ಟಿವಿ ಮೇಲೆ ಭರ್ಜರಿ 70 % ಡಿಸ್ಕೌಂಟ್.
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನ ಫೈನಲ್ ಡೇ ಸೇಲ್ ನಲ್ಲಿ ನಿಮ್ಮ ನೆಚ್ಚಿನ ಸ್ಮಾರ್ಟ್ ಟಿವಿಯನ್ನು ಬಹಳ ಕಡಿಮೆ ಬೆಲೆಗೆ ಖರೀದಿಸಿ.
Smart TV Offer On Deepavali Festival: ದೀಪಾವಳಿ ಹಬ್ಬಕ್ಕೆ ಮನೆಯ ಟಿವಿಯನ್ನು ಬದಲಾಯಿಸಲು ಸುವರ್ಣ ಅವಕಾಶ ಇಲ್ಲಿದೆ. ನಿಮ್ಮ ಬಜೆಟ್ ಗೆ ತಕ್ಕಂತೆ, ಬಹಳ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು (Smart Tv) ಖರೀದಿ ಮಾಡಿ . ನಿಮಗೆ ತಿಳಿದಿರುವಂತೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನ ಫೈನಲ್ ಡೇ ಸೇಲ್ ನಡೆಯುತ್ತಿದ್ದು, ಈ ಸೆಲ್ ನಲ್ಲಿ ಸ್ಮಾರ್ಟ್‌ಟಿವಿಗಳಿಗೆ ಭಾರಿ ರಿಯಾಯಿತಿ ಘೋಷಿಸಲಾಗಿದೆ.
ದೊಡ್ಡ ಗಾತ್ರದ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಟಿವಿಗಳಿಗೆ ಹೆಚ್ಚಿನ ರಿಯಾಯಿತಿ ನೀಡುತ್ತಿರುವುದು ವಿಶೇಷ. ಅದರಲ್ಲೂ 55 ಇಂಚಿನ ಸ್ಮಾರ್ಟ್‌ಟಿವಿಗಳಿಗೆ 70% ವರೆಗೆ ರಿಯಾಯಿತಿ ನೀಡಲಾಗ್ತಿದೆ. ಇದರಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳ ಟಿವಿಗಳು ಕೂಡ ಸೇರಿವೆ. ಹಾಗಾದ್ರೆ ಅಮೆಜಾನ್‌ನಲ್ಲಿ ನೀವು ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್‌ಟಿವಿಗಳ ಬಗ್ಗೆ ಇಲ್ಲಿ ತಿಳಿಯೋಣ .
Vu HD ಸ್ಮಾರ್ಟ್ LED Google TV
Vu ಸಂಸ್ಥೆಯ 55 ಇಂಚಿನ ಪ್ರೀಮಿಯಂ ಸರಣಿ 4K ಅಲ್ಟ್ರಾ HD ಸ್ಮಾರ್ಟ್ LED Google ಈ ಸ್ಮಾರ್ಟ್‌ಟಿವಿ 50W ಸ್ಪೀಕರ್ ಯೂನಿಟ್ ಅನ್ನು ನೀಡಲಿದ್ದು, Google TV OSನಲ್ಲಿ ರನ್ ಆಗಲಿದೆ. ಇದು 3 HDMI ಪೋರ್ಟ್‌ಗಳನ್ನು ಹೊಂದಿದೆ.ಈ ಸ್ಮಾರ್ಟ್‌ಟಿವಿ ಮೇಲೆ 32% ರಿಯಾಯಿತಿ ನೀಡಲಾಗುತ್ತಿದೆ. ಆದರಿಂದ ಈ ಸ್ಮಾರ್ಟ್‌ಟಿವಿ ಇದೀಗ ಕೇವಲ 33,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ.
ಕೊಡಾಕ್ 55 ಇಂಚಿನ ಬೆಜೆಲ್-ಲೆಸ್ ವಿನ್ಯಾಸ ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಆಂಡ್ರಾಯ್ಡ್ LED ಟಿವಿ
ಕೊಡಾಕ್ 55 ಇಂಚಿನ ಬೆಜೆಲ್-ಲೆಸ್ ವಿನ್ಯಾಸ ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಆಂಡ್ರಾಯ್ಡ್ LED ಟಿವಿ ಅಮೆಜಾನ್ ಸೇಲ್‌ನಲ್ಲಿ 40% ರಿಯಾಯಿತಿ ಪಡೆದುಕೊಂಡಿದೆ. ಆದರಿಂದ ಸ್ಮಾರ್ಟ್‌ಟಿವಿಯನ್ನು ನೀವು ಕೇವಲ 27,999ರೂ. ಬೆಲೆಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಟಿವಿಯು 4K ಅಲ್ಟ್ರಾ HD ಸ್ಮಾರ್ಟ್ ಟಿವಿ ಆಗಿದ್ದು, 3 HDMI ಪೋರ್ಟ್‌ಗಳನ್ನು ಹೊಂದಿದೆ. ಜೊತೆಗೆ 40W ಸ್ಪೀಕರ್ ಔಟ್‌ಪುಟ್‌ನೊಂದಿಗೆ ಬರಲಿದೆ.
ಏಸರ್ 55 ಇಂಚಿನ ಸುಧಾರಿತ I ಸರಣಿ 4K ಅಲ್ಟ್ರಾ HD ಸ್ಮಾರ್ಟ್ LED Google TV
ಏಸರ್ ಸಂಸ್ಥೆಯ ಈ ಸ್ಮಾರ್ಟ್ ಟಿವಿ 3 HDMI ಪೋರ್ಟ್‌ಗಳನ್ನು ಹೊಂದಿದ್ದು, 36W ಸ್ಪೀಕರ್ ಯೂನಿಟ್ ಅನ್ನು ಪ್ಯಾಕ್ ಮಾಡಲಿದೆ. ಇದಲ್ಲದೆ ಸ್ಮಾರ್ಟ್ ಟಿವಿ 2GB RAM ಮತ್ತು 16GB ಇಂಟರ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು ಕ್ವಾಡ್-ಕೋರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಟಿವಿಯ ಮೇಲೆ ಅಮೆಜಾನ್ ಬರೋಬ್ಬರಿ 48% ಡಿಸ್ಕೌಂಟ್ ಘೋಷಣೆ ಮಾಡಿದೆ. ಆದರಿಂದ ಈ ಸ್ಮಾರ್ಟ್‌ಟಿವಿಯನ್ನು ನೀವು 30,999ರೂ. ಬೆಲೆಯಲ್ಲಿ ಖರೀದಿಸುವುದಕ್ಕೆ ಸಾಧ್ಯವಾಗಲಿದೆ.
TCL 4K ಅಲ್ಟ್ರಾ HD ಸ್ಮಾರ್ಟ್ QLED Google TV
TCL ಸಂಸ್ಥೆಯ 55-ಇಂಚಿನ 4K ಅಲ್ಟ್ರಾ ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 70% ರಿಯಾಯಿತಿಯನ್ನು ಪಡೆದುಕೊಂಡಿದೆ. ಆದರಿಂದ ಇದರ ಮೂಲಬೆಲೆಯಲ್ಲಿ ಭಾರಿ ಬದಲಾವಣೆಯನ್ನು ಕಾಣಬಹುದಾಗಿದ್ದು, ಕೇವಲ 36,490ರೂ. ಬೆಲೆಗೆ ಲಭ್ಯವಾಗುತ್ತಿದೆ. ಇನ್ನು ಈ 4K ಸ್ಮಾರ್ಟ್ ಟಿವಿ 3 HDMI ಪೋರ್ಟ್‌ಗಳನ್ನು ನೀಡುತ್ತದೆ. ಇದು 56W ಸ್ಪೀಕರ್ ಯೂನಿಟ್‌ನೊಂದಿಗೆ ಬರಲಿದ್ದು, 2GB RAM ಮತ್ತು 16GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ.
MI 55 ಇಂಚಿನ X 4K ಡಾಲ್ಬಿ ವಿಷನ್ ಸರಣಿ ಸ್ಮಾರ್ಟ್ ಗೂಗಲ್ ಟಿವಿ
ಈ ಸ್ಮಾರ್ಟ್‌ಟಿವಿಯ ಮೇಲೆ ಅಮೆಜಾನ್ ಬರೋಬ್ಬರಿ 33% ರಿಯಾಯಿತಿ ನೀಡುತ್ತಿದೆ. ಆದರಿಂದ ಈ ಸ್ಮಾರ್ಟ್‌ಟಿವಿಯು ಕೇವಲ 36,999ರೂ ಬೆಲೆಗೆ ಲಭ್ಯವಾಗುತ್ತಿದೆ. ಇನ್ನು ಸ್ಮಾರ್ಟ್‌ಟಿವಿಯು 4K ರೆಸಲ್ಯೂಶನ್ ನೊಂದಿಗೆ ವಿಶಾಲವಾದ ವ್ಯೂ ಆಂಗಲ್ ಅನ್ನು ನೀಡಲಿದೆ. ಜೊತೆಗೆ 30W ಸ್ಪೀಕರ್ ಯೂನಿಟ್ ಅನ್ನು ಸಹ ಹೊಂದಿದೆ. ಇದಲ್ಲದೆ ಸ್ಮಾರ್ಟ್ ಟಿವಿ 2GB RAM ಮತ್ತು 8GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.