Smart TV: ಹೊಸ ಟಿವಿ ಖರೀದಿ ಮಾಡುವವರಿಗೆ ದೀಪಾವಳಿ ಆಫರ್, ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಡಿಸ್ಕೌಂಟ್.
ನಿಮ್ಮ ಮನೆಗೆ ಸ್ಮಾರ್ಟ್ ಟಿವಿ ಖರೀದಿಸುವ ಪ್ಲಾನ್ ಇದ್ದರೆ ದೀಪಾವಳಿ ಆಫರ್ ನಲ್ಲಿಯೇ ನಿಮ್ಮ ನೆಚ್ಚಿನ ಟಿವಿ ಮನೆಗೆ ತನ್ನಿ.
Smart TV Offer In Diwali Festival: ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ಎಷ್ಟೇ ಹೆಚ್ಚಾದರೂ ಪ್ರತಿಯೊಂದು ಮನೆಯಲ್ಲೂ ಟಿವಿ(TV) ಅಂತೂ ಇದ್ದೆ ಇರುತ್ತದೆ. ಟಿವಿ ನೋಡುವವರ ಸಂಖ್ಯೆ ಕಡಿಮೆ ಇದ್ರು ಮನೆಯಲ್ಲಿ ಟಿವಿ ಇರಲೇ ಬೇಕು. ಅದರಲ್ಲೂ ಈಗ ಪ್ರತಿ ಮನೆಯಲ್ಲೂ ಸ್ಮಾರ್ಟ್ ಟಿವಿಯದ್ದೇ ಹವಾ. ಜನರು ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಒಗ್ಗಿಕೊಳ್ಳುತ್ತಿರುವುದರಿಂದ ಮತ್ತು ಈ ಟಿವಿಗಳಲ್ಲಿ ಯೂಟ್ಯೂಬ್(Youtube) ಬರುತ್ತಿರುವುದರಿಂದ, ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಟಿವಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ.
ಸ್ಮಾರ್ಟ್ ಟಿವಿಗಳಿಗೆ ಬೇಡಿಕೆ ಹೆಚ್ಚಿದ್ದರೂ ಅದರ ಬೆಲೆ ಮಾತ್ರ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ ಎನ್ನಬಹುದು. ಸ್ಮಾರ್ಟ್ ಟಿವಿಗಳು ಮೊಬೈಲ್ ನಲ್ಲಿ ಇರುವ ಅಪ್ಲಿಕೇಶನ್ ಅನ್ನು ಹೊಂದಿದ್ದು, ಪ್ರತಿಯೊಬ್ಬರು ಸ್ಮಾರ್ಟ್ ಟಿವಿಯನ್ನು ಇಷ್ಟ ಪಡುತ್ತಾರೆ.
ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿಗಳು
ಕೆಲವು ವರ್ಷಗಳ ಹಿಂದೆ 43 ಇಂಚಿನ ಅಥವಾ 50 ಇಂಚಿನ ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿ ಮಾಡಲು ಕನಿಷ್ಠ ರೂ. 35,000 ರಿಂದ ರೂ. 50,000 ವರೆಗೆ ಹೂಡಿಕೆ ಮಾಡಬೇಕಾಗಿತ್ತು. ಆದರೆ ಈಗ ರೂ. ಅವು 25,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿವೆ. ವಾಸ್ತವವಾಗಿ, ಬೇಡಿಕೆ ಹೆಚ್ಚಾದರೆ ಮಾರುಕಟ್ಟೆ ನಿಯಮದ ಪ್ರಕಾರ ಬೆಲೆ ಹೆಚ್ಚಾಗಬೇಕು. ಆದರೆ ಸ್ಮಾರ್ಟ್ ಟಿವಿಗಳ ವಿಷಯದಲ್ಲಿ, ಸ್ಮಾರ್ಟ್ ಟಿವಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅವುಗಳ ಬೆಲೆಗಳು ತೀವ್ರವಾಗಿ ಕಡಿಮೆಯಾಗುತ್ತಿವೆ.
ಟಿವಿಗಳ ಮೇಲೆ ಜಾಹೀರಾತುಗಳ ಪ್ರಭಾವ
ಇತೀಚಿನ ವರ್ಷಗಳಲ್ಲಿ ಟಿವಿಗಳ ಬೆಲೆ ಕಡಿಮೆ ಆಗುತ್ತಲೇ ಇದೆ. ಇದರ ಹಿಂದಿನ ಕಾರಣವೆಂದರೆ ಕಂಪನಿಗಳು ಹೆಚ್ಚುವರಿ ಜಾಹೀರಾತು ಆದಾಯವನ್ನು ಪಡೆಯುತ್ತಿವೆ. ಟಿವಿಗಳಲ್ಲಿನ ಜಾಹಿರಾತುಗಳು ಟಿವಿ ನೋಡುಗರಿಗೆ ಬೇಸರ ಉಂಟು ಮಾಡುತ್ತದೆ. ಟಿವಿಗಳಲ್ಲಿ ಜಾಹೀರಾತು ಆದಾಯ ಎಷ್ಟು ಎಂದು ಯೋಚಿಸುತ್ತಿದ್ದೀರಾ? ಇನ್ ಬಿಲ್ಟ್ ಜಾಹೀರಾತುಗಳು ನಿಮ್ಮ ಟಿವಿಗಳಲ್ಲಿವೆ. ನೀವು ಅಪ್ಲಿಕೇಶನ್ ತೆರೆದಾಗ ಅಥವಾ ನೀವು ಅವುಗಳನ್ನು ಬಳಸುವಾಗ ಅವು ಬರುತ್ತವೆ. ಅನೇಕ ಗ್ರಾಹಕರು ಅವುಗಳಿಂದ ಬೇಸತ್ತಿರಬೇಕು.
ಎಲ್ಲಾ ಟಿವಿಗಳಿಗೆ ಜಾಹೀರಾತುಗಳು ಬರುತ್ತವೆಯೇ?
ವಿಜಿಯೊ ಸ್ಯಾಮ್ಸಂಗ್, ಎಲ್ಜಿ ಮತ್ತು ಟಿಸಿಎಲ್ ಸೇರಿದಂತೆ ಪ್ರಮುಖ ಟಿವಿ ತಯಾರಕರು ವೀಕ್ಷಕರಿಗೆ ಅವರ ವೀಕ್ಷಣೆಯ ಮಾದರಿಗಳು, ಸ್ಥಳ ಮತ್ತು ಇತರ ಸಂಗ್ರಹಿಸಿದ ಡೇಟಾದ ಆಧಾರದ ಮೇಲೆ ಜಾಹೀರಾತುಗಳನ್ನು ತೋರಿಸುತ್ತಾರೆ. ಹೆಚ್ಚಿನ ಸ್ಮಾರ್ಟ್ ಟಿವಿಗಳು ಜಾಹೀರಾತುಗಳನ್ನು ಹೊಂದಿದ್ದರೂ ಎಲ್ಲಾ ಕಂಪನಿಗಳು ಈ ನೀತಿಯನ್ನು ಜಾರಿಗೆ ತರುತ್ತಿಲ್ಲ. ಆದರೆ ಮುಖ್ಯವಾಗಿ ರೋಕುವಿನಂತಹ ಟಿವಿ ಸೇವಾ ಪೂರೈಕೆದಾರರು ಜಾಹೀರಾತುಗಳನ್ನು ಪ್ರದರ್ಶಿಸುತ್ತಿದ್ದಾರೆ.