Jawan: ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ಬಳಸಿದ ಬೈಕ್ ಯಾರದ್ದು…? ಬೈಕ್ ಹಿಂದಿಂದೆ ರೋಚಕ ಕಥೆ.

ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಬಳಸಿದ ಬೈಕ್ ನ ವಿಶೇಷತೆ.

SRK Riding Yezdi Motorbike In Jawan Movie: ಶಾರುಖ್ ಖಾನ್ (Shah Rukh Khan) ಅಭಿನಯದ ಜವಾನ್ (Jawan) ಸಿನಿಮಾ ಬ್ಲಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈ ಸಿನಿಮಾದ ಯಶಸ್ಯು ಹಾಗು ಅದರ ಸಂಭ್ರಮದ ಜೊತೆಗೆ ಇನ್ನು ಕೆಲವು ವಿಷಯಗಳು ಅಚ್ಚರಿಯನ್ನು ಮೂಡಿಸುತ್ತಿದೆ.

ಹಾಗೆಯೆ ಶಾರುಖ್ ಖಾನ್ ಮತ್ತು ಕ್ಲಾಸಿಕ್ ಯೆಜ್ಡಿ ಬೈಕನ್ನು ಜೊತೆಯಾಗಿಯೇ ತೋರಿಸಿದ ಜವಾನ್ ಚಲನಚಿತ್ರ ದೊಡ್ಡ ಮಟ್ಟದ ಸಕ್ಸಸ್ ಕಂಡಿದೆ. ಚಿತ್ರದಲ್ಲಿ ಶಾರುಖ್ ಖಾನ್ ಅವರ ಪಾತ್ರವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಚಲನಚಿತ್ರವು ದೇಶಾದ್ಯಂತ ಹೆಚ್ಚಿನ ಪ್ರೇಕ್ಷಕರನ್ನು ರೀಚ್ ಆಗಿದೆ.

SRK Riding Yezdi Motorbike In Jawan Movie
Image Credit: Indiatoday

ಐಕಾನಿಕ್ ಬೈಕ್ ಜಾವಾ ಯೆಜ್ಡಿ‌ಯನ್ನು ರೈಡ್ ಮಾಡುತ್ತಿರುವ ವೀಡಿಯೊ ಗಮನ ಸೆಳೆದಿದೆ
ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಖಾನ್ ಅವರ ಜವಾನ್ ಸಿನಿಮಾದ ಯಶಸ್ಸಿನ ಸಂಭ್ರಮವನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿನಂದನೆ ಸಲ್ಲಿಸಿರುವ ಈ ಪೋಸ್ಟ್‌ನಲ್ಲಿ ಆನಂದ್ ಮಹೀಂದ್ರಾ ಶಾರುಖ್‌ ಖಾನ್ ಐಕಾನಿಕ್ ಬೈಕ್ ಜಾವಾ ಯೆಜ್ಡಿ‌ಯನ್ನು ರೈಡ್ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಸಿನಿಮಾದ ವಿಜಯೋತ್ಸವದ ಉತ್ಸಾಹವನ್ನು ಹೆಚ್ಚಿಸಿದೆ.

ಈ ವೀಡಿಯೋದಲ್ಲಿ ಶಾರುಖ್ ಖಾನ್ ಅವರ ಸ್ಟೈಲ್ ಮತ್ತು ಯೆಜ್ಡಿ ಬೈಕ್‌ನ್ನು ತೋರಿಸುವ ಮೂಲಕ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಯಿತು. ಮಹೀಂದ್ರಾ ಅವರ ತಮ್ಮ ಪೋಸ್ಟ್‌ಗೆ ಕ್ಯಾಪ್ಸನ್ ನೀಡಿದ್ದು ಅದರಲ್ಲಿ, “ಲೆಜೆಂಡ್ಸ್ ರೈಡ್ ಆನ್ ಲೆಜೆಂಡ್ಸ್. ಯೆಜ್ಡಿ. ಫಿಯರ್ಸ್..ಪ್ರೌಡ್. ಇಂಡಿಯನ್,” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಭಾರತೀಯ ಸಿನಿಮಾದ ಸಾಂಪ್ರದಾಯಿಕ ಸಮ್ಮಿಲನ ಮತ್ತು ಇಂಡಿಯನ್ ಮೋಟಾರ್‌ ಬೈಕ್‌ಗಳ ಇತಿಹಾಸವನ್ನು ಪೂರ್ತಿಯಾಗಿ ತೋರಿಸುವಂತಿದೆ.

SRK Riding Yezdi Motorbike In Jawan Movie
Image Credit: Livemint

ಶಾರುಖ್ ಖಾನ್ ಬಗ್ಗೆ ಆನಂದ್ ಮಹೀಂದ್ರಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯು ಕೂಡ ಅವರು ಬಾಲಿವುಡ್ ತಾರೆ ಶಾರುಖ್ ಖಾನ್‌ ಅವರನ್ನು “ನೈಸರ್ಗಿಕ ಸಂಪನ್ಮೂಲ” ಎಂದು ಉಲ್ಲೇಖಿಸಿದ್ದರು. ಭಾರತೀಯ ಸಂಸ್ಕೃತಿ ಮತ್ತು ಎಂಟರ್‌ಟೈನ್ಮೆಂಟ್ ಮೇಲೆ ಶಾರುಖ್ ಖಾನ್ ಅವರ ನಿರಂತರ ಪ್ರಭಾವವಿದೆ ಎಂದು ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬೈಕ್ ಜೊತೆ ಶಾರುಖ್ ಖಾನ್ ಫೋಟೋ ನೋಡಿ ಬೈಕ್ ಹಾಗು ಆನಂದ್ ಮಹೀಂದ್ರಾಗೂ ಲಿಂಕ್ ಇದೆ ಎನ್ನಲಾಗಿದೆ.

Leave A Reply

Your email address will not be published.