Education Scheme: SSLC ಮತ್ತು PUC ಪರೀಕ್ಷೆ ಬರೆಯುವ ಮಕ್ಕಳಿಗೆ ಗುಡ್ ನ್ಯೂಸ್, ಹೊಸ ನಿಯಮ ಜಾರಿಗೆ ತಂದ ಮಧು ಬಂಗಾರಪ್ಪ.

SSLC ಮತ್ತು PUC ಪರೀಕ್ಷೆ ಬರೆಯುವ ಮಕ್ಕಳಿಗೆ ಹೊಸ ನಿಯಮ ಜಾರಿ.

SSLC And PUC Board Exam: ಪ್ರಸ್ತುತವಾಗಿ SSLC ಮತ್ತು PUC ವಿದ್ಯಾರ್ಥಿಗಳಿಗೆ ವರ್ಷದಲ್ಲಿ 2 ಬಾರಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ಇದೆ. ಒಮ್ಮೆ ಪರೀಕ್ಷೆಯಲ್ಲಿ ಅನುತೀರ್ಣವಾದರೆ ಇನ್ನೊಮ್ಮೆ ಪರೀಕ್ಷೆ ಬರೆಯುವ ಅವಕಾಶ ಇದೆ. ಆದರೆ ಈಗ SSLC ಮತ್ತು PUC ವಿದ್ಯಾರ್ಥಿಗಳಿಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿ ಬರಲಿದೆ.

ಕಲಿಕಾ ಚೇತರಿಕೆಯ ಕಾರಣದಿಂದಾಗಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ನಿಯಮದಲ್ಲಿ ಬದಲಾವಣೆ ಮಾಡಲು ಈಗ ಸರ್ಕಾರ ಮುಂದಾಗಿದೆ ಎಂದು ಹೇಳಬಹುದು. ಇನ್ನು ರಾಜ್ಯದಲ್ಲಿ SSLC ಮತ್ತು PUC ಪರೀಕ್ಷೆಯಲ್ಲಿ ದೊಡ್ಡ ಬದಲಾವಣೆಯನ್ನ ಸಚಿವರಾದ ಮಧು ಬಂಗಾರಪ್ಪ ಅವರು ಮಾಡಿದ್ದಾರೆ.

SSLC And PUC Board Exam
Image Credit: India

ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರ ಹೊಸ ಘೋಷಣೆ 

ಇಂದು ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಯನ್ನು ಮೂರು ಬಾರಿ ತೆಗೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಮಕ್ಕಳಿಗೆ ಒಂದು ವರ್ಷ ವ್ಯರ್ಥ ಆಗಬಾರದು ಎಂಬ ಕಾರಣಕ್ಕೆ ವರ್ಷದಲ್ಲಿ ಮೂರು ಬಾರಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮಕ್ಕಳು ಎಷ್ಟು ಒತ್ತಡದಲ್ಲಿ ಓದುತ್ತಿರುತ್ತಾರೆ ಎಂಬುದು ನನಗೆ ಗೊತ್ತಿದೆ ಹಾಗಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ SSLC ಮತ್ತು PUCಯ ಪರೀಕ್ಷೆಯನ್ನು ವರ್ಷದಲ್ಲಿ ಮೂರು ಬಾರಿ ಬರೆಯೋದಕ್ಕೆ ಅವಕಾಶ ನೀಡಲಾಗುತ್ತದೆ ಎಂದರು. ಹಾಗು ಅವರು, ಶಾಲಾ ಶಿಕ್ಷಕರಿಗೆ ಇಪ್ಪತ್ತು ಪ್ರಶಸ್ತಿ, ಪ್ರೌಢ ಶಾಲಾ ಶಿಕ್ಷಕರಿಗೆ ಇಪ್ಪತ್ತು ಪ್ರಶಸ್ತಿ, 31 ಉತ್ತಮ ಶಿಕ್ಷಕರಿಗೆ ರಾಜ್ಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.

Madhu Bangarappa About SSLC And PUC Board Exam
Image Credit: Mangaloretoday

ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯ್ಲಲಿ ಬದಲಾವಣೆ 

ಶಾಲೆಗೆ ಹೋಗೋದಕ್ಕೆ ಮಕ್ಕಳಿಗೆ ಶಕ್ತಿ ಬೇಕು ಎನ್ನುವ ಕಾರಣಕ್ಕೆ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಒಂದು ಮೊಟ್ಟೆ ಕೊಡಲಾಗುತ್ತಿತ್ತು. ಈಗ 10ನೇ ತರಗತಿವರೆಗೆ ವಾರಕ್ಕೆ ಎರಡು ಮೊಟ್ಟೆಯನ್ನು ಕೊಡುವಂತ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ ಮಾಡಿದರು. 58 ಲಕ್ಷ ಮಕ್ಕಳಿಗೆ ಈಗ ರಾಜ್ಯ ಮಟ್ಟದಲ್ಲಿ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ ಎಂದರು.

ಅತಿಥಿ ಶಿಕ್ಷಕರ ನೇಮಕಾತಿ 

ಶಿಕ್ಷಕರ ವರ್ಗಾವಣೆಯ ನಂತರ ಕೆಲವೆಡೆ ಶಿಕ್ಷಕರ ಕೊರತೆ ಉಂಟಾಯಿತು. ಸಿಎಂ ಸಿದ್ಧರಾಮಯ್ಯ ಅವರು ಈ ವಿಚಾರ ಗಮನಿಸಿ, ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡಿದರು. 43 ಸಾವಿರ ಮಂದಿ ಈಗ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಯಾವುದೋ ಒಂದು ಕಾರಣಕ್ಕೆ ವಿದ್ಯಾರ್ಥಿಗಳು ಫೇಲ್ ಆದರೇ ಇಡೀ ವರ್ಷ ಅವರ ಜೀವನ ವ್ಯರ್ತವಾಗಬಾರದು. ಪರೀಕ್ಷೆಗಳು ಮಕ್ಕಳನ್ನು ಫೇಲ್ ಮಾಡೋದಕ್ಕಲ್ಲ ಮತ್ತು ಜೀವನದ ಬಗ್ಗೆ ಕಲಿಕೆಗಾಗಿ ಇರಬೇಕು ಎಂದು ತಿಳಿಸಿದರು. ಈ ಒಂದು ನಿರ್ಧಾರ ಎಲ್ಲ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯಕವಾಗಿದೆ.

Leave A Reply

Your email address will not be published.