Salary Hike: ಸರ್ಕಾರೀ ನೌಕರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ಸಂಬಳದಲ್ಲಿ ಭರ್ಜರಿ ಏರಿಕೆ.
ಸರ್ಕಾರಿ ನೌಕರರಿಗೆ ಶುಭ ಸುದ್ದಿ, ವೇತನ ಹೆಚ್ಚಳ.
State Government Employees: ರಾಜ್ಯದಲ್ಲಿ ಪ್ರತಿ ಸರ್ಕಾರಿ ನೌಕರನು ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವುದು ಸಹಜ. ಹಾಗೆಯೇ ಈ ವರ್ಷ ಬಿಗ್ ಆಫರ್ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ನೀಡಿದೆ. ಸರ್ಕಾರಿ ನೌಕರರ 7ನೇ ವೇತನ ಶ್ರೇಣಿಯ ಬಗ್ಗೆ ಆದೇಶ ಹೊರಡಿಸಿದ್ದು, ಅದರಂತೆ ರಾಜ್ಯ ಸರ್ಕಾರೀ ನೌಕರರ ಸಂಬಳ ದೊಡ್ಡ ಮಟ್ಟದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ.
ಸರ್ಕಾರಿ ನೌಕರರಿಗೆ ಹೆಚ್ಚಿದ ವೇತನ
ಶನಿವಾರ ಚಿತ್ರದುರ್ಗದ ಹೊಸದುರ್ಗದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಅವರು, ರಾಜ್ಯ ಸರ್ಕಾರ ರಚಿಸಿರುವಂತ 7ನೇ ವೇತನ ಆಯೋಗದ ಸಮಿತಿಯು ನವೆಂಬರ್ ಅಂತ್ಯದ ವೇಳೆಗೆ ವೇತನ ಹೆಚ್ಚಳಕ್ಕೆ ಪೂರಕವಾಗಿರುವ ವರದಿಯನ್ನು ಸಲ್ಲಿಸಿದೆ ಎಂದರು.
ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ.38 ರಿಂದ 40ರಷ್ಟು ವೇತನ ಹೆಚ್ಚಾಗುವ ವಿಶ್ವಾಸವಿದೆ ಎಂಬುದಾಗಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.
ವೇತನ ಹೆಚ್ಚಳದ ಬಗ್ಗೆ ಶಿಫಾರಸ್ಸು
7ನೇ ವೇತನ ಆಯೋಗದ ಸಮಿತಿಯನ್ನು ಶುಕ್ರವಾರ ಭೇಟಿ ಮಾಡಿ ಶೇ.38 ರಿಂದ 40ರಷ್ಟು ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಏಪ್ರಿಲ್.1ರಂದು ನಡೆಸಿದ ಒಂದು ದಿನದ ಮುಷ್ಕರದ ಫಲವಾಗಿ ಮಧ್ಯಂತರ ಪರಿಹಾರ ಸಿಕ್ಕಿದೆ ಎಂದು ಹೇಳಿದರು. 7ನೇ ವೇತನ ಆಯೋಗದ ವರದಿ ಜಾರಿ ಹಾಗೂ ಒಪಿಎಸ್ ಮರು ಜಾರಿ ನಮ್ಮ ಪ್ರಮುಖ ಬೇಡಿಕೆಗಳಾಗಿವೆ.
ರಾಜ್ಯ ಸರ್ಕಾರಿ ನೌಕರರ ಕುಟುಂಬಗಳಿಗೆ ಆಸ್ಪತ್ರೆಯಲ್ಲಿ ಕ್ಯಾಶ್ ಲೆಸ್ ಚಿಕಿತ್ಸೆ ಸಿಗುವ ಯೋಜನೆ ಈ ತಿಂಗಳ ಅಂತ್ಯದೊಳಗೆ ಜಾರಿಯಾಗಲಿದೆ ಎಂದು ತಿಳಿಸಿದರು.ಸರ್ಕಾರಿ ನೌಕರರ ನಿರೀಕ್ಷೆಯಂತೆ ವೇತನ ಹೆಚ್ಚಾದರೆ ಸರ್ಕಾರಿ ನೌಕರು ಸಂತೋಷ ಪಡುವುದಂತೂ ಖಚಿತವಾಗಿದೆ. ವೇತನ ಕುರಿತು ಅನೇಕ ಇಲಾಖೆಯವರು ಹಲವು ಭಾರಿ ಮುಷ್ಕರ ಮಾಡಿದ್ದೂ, ಆ ಮುಷ್ಕರಕ್ಕೆ ಈಗ ಬೆಲೆ ಸಿಗುತ್ತಿದೆ ಎನ್ನುವ ಬಗ್ಗೆ ನೌಕರರ ಅಭಿಪ್ರಾಯ ಇದಾಗಿದೆ.