Phone Storage: ವಾಟ್ಸಾಪ್ ನಿಂದ ಫೋನ್ ಸ್ಟೋರ್ ಫುಲ್ ಆಗಿದೆಯಾ…? ಈ ಚಿಕ್ಕ ಕೆಲಸ ಮಾಡಿ ಸ್ಟೋರೇಜ್ ಕ್ಲಿಯರ್ ಮಾಡಿ.
ನಿಮ್ಮ ಸ್ಮಾರ್ಟ್ ಫೋನ್ ಸ್ಟೋರೇಜ್ ಫುಲ್ ಆಗಿದೆಯೇ...? ತಪ್ಪದೇ ಈ ಕೆಲಸ ಮಾಡಿ.
Storage Full problem In Smart Phone: ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಕೂಡ ಸ್ಮಾರ್ಟ್ ಫೋನ್ ಅನ್ನು ಬಳಸುತ್ತಿದ್ದಾರೆ. ಸ್ಮಾರ್ಟ್ ಫೋನ್ ಇದ್ದ ಮೇಲೆ ಅವರು ವಾಟ್ಸಾಪ್ ಬಳಕೆದಾರರೇ ಆಗಿರುತ್ತಾರೆ. ಹೌದು ಈಗ ವಾಟ್ಸಾಪ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಹಾಗಾಗಿ whatsapp ಕೋಟ್ಯಂತರ ಗ್ರಾಹಕರನ್ನು ಹೊಂದಿದೆ.
ಇತ್ತೀಚಿಗೆ ವಾಟ್ಸಪ್ಪ್ ಹಲವು ವೈಶಿಷ್ಟತೆಗಳೊಂದಿಗೆ ಅಪ್ಡೇಟ್ ಕೂಡ ಆಗಿದೆ. WhatsApp ನ ಒಂದು ಗ್ರೂಪ್ನಲ್ಲೇ ಅನೇಕ ಮಂದಿ ಸದಸ್ಯರಿರುತ್ತಾರೆ. ಇದರಲ್ಲಿ ನಿಮಿಷಕ್ಕೊಂದು ಫೋಟೋ, ವಿಡಿಯೋ ಅಥವಾ ಜಿಫ್ ಫೈಲ್ಗಳು ಬರುತ್ತಲೇ ಇರುತ್ತದೆ. ಅವಾಗ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ.
ಒಂದೊಂದೆ ಫೋಟೋವನ್ನು ಹುಡುಕಿಕೊಂಡು ಡಿಲೀಟ್ ಮಾಡುವ ಪಾಡು ಯಾರಿಗೂ ಬೇಡ. ಆದರೆ, ವಾಟ್ಸಾಪ್ ನಲ್ಲಿ ಬಂದ ಅನಗತ್ಯ ಫೋಟೋವನ್ನು ಡೌನ್ಲೋಡ್ ಮಾಡದೆ ಇರುವುದಕ್ಕೆ ಒಂದು ಟ್ರಿಕ್ ಇದೆ ಅದೇನೆಂದು ತಿಳಿದುಕೊಳ್ಳಿ. ಈ ವಿಧಾನದ ಮೂಲಕ ಫೋನ್ ಸ್ಟೋರೇಜ್ ಅನ್ನು ಸುಲಭವಾಗಿ ಕ್ಲಿಯರ್ ಮಾಡಬಹುದಾಗಿದೆ.
ಸ್ಮಾರ್ಟ್ ಫೋನ್ ಮೆಮೊರಿ ಸ್ಟೋರೇಜ್ ಫುಲ್ ಸಮಸ್ಯೆ
ವಾಟ್ಸಪ್ ನಲ್ಲಿ ಬಂದ ಫೋಟೋ, ವಿಡಿಯೋಗಳು ಫೋನ್ ಮೆಮೊರಿಯಲ್ಲಿ ಹೋಗಿ ಸ್ಟೋರೇಜ್ ಫುಲ್ ಆಗುವ ಸಮಸ್ಯೆ ಎಲ್ಲರಿಗೂ ಆಗುತ್ತದೆ . ಇಂದು 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್ಫೋನುಗಳು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ.
ಅಂತಹ ಸಂದರ್ಭದಲ್ಲಿ ವಾಟ್ಸಪ್ ಸೆಟ್ಟಿಂಗ್ಸ್ ನಲ್ಲಿರುವ ಸ್ಟೋರೇಜ್-ಡೇಟಾ ಆಯ್ಕೆಗೆ ತೆರಳಿ ಮಿಡಿಯಾ ಅಟೋ-ಡೌನ್ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಹೀಗೆ ಮಾಡಿದರೆ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್ಗಳು ನೀವು ಡೌನ್ಲೋಡ್ ಕೊಟ್ಟರೆ ಮಾತ್ರ ಆಗುತ್ತದೆ. ಮೊಬೈಲ್ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್ ನಲ್ಲಿ ಸೇವ್ ಮಾಡಬಹುದು.
ಅನವಶ್ಯಕ ಅಪ್ಲಿಕೇಶನ್ ಅನ್ನು ಅನ್ಇನ್ಸ್ಟಾಲ್ ಮಾಡಿ
ನಮ್ಮ ಮೊಬೈಲ್ನಲ್ಲಿರುವ ಕೆಲವು ಅಪ್ಲಿಕೇಷನ್ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಫೋನ್ನಲ್ಲಿರುವ ಅಪ್ಲಿಕೇಷನ್ ಗಳನ್ನು ತೆರೆದಂತೆ ಮೊಬೈಲ್ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ. ಇಂತಹ ಅಪ್ಲಿಕೇಷನ್ ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್ ಗಳನ್ನು ಮೊದಲು ಅನ್ಇನ್ಸ್ಟಾಲ್ ಮಾಡಿ.