SSY Benefits: ಮಗಳ ಮದುವೆಗೆ ಕೇಂದ್ರದಿಂದ ಸಿಗಲಿದೆ 64 ಲಕ್ಷ, 416 ರೂ ಕಟ್ಟಿ ಇಂದೇ ಯೋಜನೆಗೆ ಸೇರಿ.

ಮಗಳ ಮದುವೆ ಮತ್ತು ಶಿಕ್ಷಣಕ್ಕೆ ಹಣ ಕೂಡಿಡುವ ಇಂದೇ ಕೇಂದ್ರದ ಈ ಯೋಜನೆಗೆ ಸೇರಿಕೊಳ್ಳಿ.

Sukanya Samriddhi Yojana Benefits: ಹೆಣ್ಣು ಮಕ್ಕಳು ಇದ್ದ ಮನೆಯಲ್ಲಿ ಹೂಡಿಕೆ ಬಹಳ ಮುಖ್ಯವಾಗಿರುತ್ತದೆ. ಸಣ್ಣ ಪುಟ್ಟ ವ್ಯಾಪಾರಿಗಳು, ತಿಂಗಳ ಸಂಬಳ ಬರುವ ಉದ್ಯೋಗಿಗಳು, ಸೇರಿ ಸಾಮಾನ್ಯ ಜನರು ತಮ್ಮ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ, ಮದುವೆಯಂತಹ ಕಾರ್ಯಗಳಿಗೆ ದೊಡ್ಡ ಮೊತ್ತದ ಹಣ ಕೂಡಿಡುವ ಪ್ಲಾನ್ ಮಾಡುತ್ತಾರೆ.

ಹಣದುಬ್ಬರ ಗಗನಕ್ಕೇರಿಸುತ್ತಿರುವುದರಿಂದ ಏಕಾಏಕಿ ಲಕ್ಷಾಂತರ ರೂಪಾಯಿಯನ್ನು ಒಟ್ಟುಗೂಡಿಸುವುದು ಕಷ್ಟದ ಕೆಲಸ. ಹೀಗಾಗಿ ಸಾಲದ ಶೂಲಕ್ಕೆ ಬೀಳುವುದನ್ನು ತಪ್ಪಿಸಲು ಬುದ್ದಿವಂತಿಕೆಯಿಂದ ಹೂಡಿಕೆ ಮಾಡಿದರೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು.

sukanya samriddhi yojana benefits
Image Credit: Ffreedom

ಹೆಣ್ಣು ಮಕ್ಕಳ ಭವಿಷ್ಯಕ್ಕೆ ಹೂಡಿಕೆ ಮುಖ್ಯ

ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗಾಗಿ ನೀವು ಆರ್ಥಿಕವಾಗಿ ಬಲಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಉಳಿತಾಯವನ್ನು ಪ್ರಾರಂಭಿಸಬೇಕು. ನಿಮ್ಮ ಮಗಳ ವಿದ್ಯಾಭ್ಯಾಸ ಮತ್ತು ಮದುವೆಯ ಆರ್ಥಿಕ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samriddhi Yojana) ಜಾರಿಗೆ ತಂದಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುವ ಬಗ್ಗೆ ಮಾಹಿತಿ

ನಿಮ್ಮ ಮಗಳಿಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಲು ಯಾವುದು ಉತ್ತಮ ಸಮಯ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಪುತ್ರಿ ಹುಟ್ಟಿದ ತಕ್ಷಣವೇ ಈ ಖಾತೆಯನ್ನು ತೆರೆಯುವುದು ಒಳ್ಳೆಯದು. ನಿಮ್ಮ ಮಗಳಿಗೆ 10 ವರ್ಷ ತುಂಬುವ ಮೊದಲು ನೀವು ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. ಮಗಳು ಹುಟ್ಟಿದ ನಂತರ ಖಾತೆಯನ್ನು ತೆರೆಯುವ ಮೂಲಕ 15 ವರ್ಷಗಳ ವರೆಗೆ ಯೋಜನೆಯಲ್ಲಿ ವಂತಿಕೆ ಹಣವನ್ನು ಪಾವತಿಸಬೇಕು.

sukanya samriddhi yojana investment
Image Credit: Informalnewz

ಸುಕನ್ಯಾ ಸಮೃದ್ಧಿ ಯೋಜನೆಯ ಮೆಚ್ಯೂರಿಟಿ ಮೊತ್ತ ಮತ್ತು ಬಡ್ಡಿ ದರ ಪಡೆಯಬಹುದು

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರಗಳನ್ನು ಕೇಂದ್ರ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನೆ ಮಾಡುತ್ತದೆ. ಜುಲೈನಿಂದ ಸೆಪ್ಟೆಂಬರ್ 2023ರ ತ್ರೈಮಾಸಿಕದಲ್ಲಿ ಬಡ್ಡಿದರವು ವಾರ್ಷಿಕವಾಗಿ ಶೇಕಡಾ 8 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ನಿಮ್ಮ ಮಗಳಿಗೆ 18 ವರ್ಷದ ತುಂಬಿದ ಮೇಲೆ, ನೀವು ಮೆಚ್ಯೂರಿಟಿ ಮೊತ್ತದ ಶೇಕಡಾ 50 ರಷ್ಟು ಹಣವನ್ನು ವಾಪಸ್ ಪಡೆಯಬಹುದು. ಮಗಳಿಗೆ 21 ವರ್ಷ ತುಂಬಿದಾಗ ಉಳಿದ ಬಾಕಿಯ ಹಣವನ್ನು ಹಿಂಪಡೆಯಬಹುದು.

64 ಲಕ್ಷ ರೂಪಾಯಿಗಳ ದೊಡ್ಡ ಮೊತ್ತ ಸಂಗ್ರಹಿಸಬಹುದು

ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರತಿ ತಿಂಗಳು 12,500 ರೂಪಾಯಿ ಅಂದರೆ ದಿನಕ್ಕೆ ಸುಮಾರು 416 ರೂಪಾಯಿ ಠೇವಣಿ ಮಾಡಿದರೆ, ವಾರ್ಷಿಕವಾಗಿ 1.5 ಲಕ್ಷ ರೂಪಾಯಿಯಷ್ಟು ಆಗುತ್ತದೆ. ಈ ಹಣಕ್ಕೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ. ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಶೇಕಡಾ 7.6ರಷ್ಟು ಮೆಚ್ಯೂರಿಟಿ ಬಡ್ಡಿಯನ್ನು ಊಹಿಸಿ, ನೀವು ನಿಮ್ಮ ಮಗಳಿಗೆ ಮೆಚ್ಯೂರಿಟಿ ಮೂಲಕ ಗಣನೀಯವಾಗಿ ಹಣವನ್ನು ಈ ಯೋಜನೆಯ ಮೂಲಕ ಸಂಗ್ರಹಿಸಬಹುದು.

sukanya samriddhi yojana latest update
Image Credit: Wintwealth

ಹಣಕಾಸಿನ ಚಿಂತೆ ಇಲ್ಲದೆ ಮಕ್ಕಳ ಭವಿಷ್ಯ ರೂಪಿಸಬಹುದು

ಪುತ್ರಿಗೆ 21 ವರ್ಷ ತುಂಬಿದಾಗ ನೀವು ಸಂಪೂರ್ಣ ಮೊತ್ತವನ್ನು ಹಿಂಪಡೆಯುವಾಗ ಒಟ್ಟು 22,50,00 ಹೂಡಿಕೆ ಮತ್ತು 41,29,634 ಬಡ್ಡಿ ಸೇರಿ ಒಟ್ಟು ಮೆಚ್ಯೂರಿಟಿ ಮೊತ್ತ 63,79,634 ರೂಪಾಯಿ ಸಿಗಲಿದೆ. ತಿಂಗಳಿಗೆ 12,500 ರೂಪಾಯಿಗಳನ್ನು ನಿರಂತರವಾಗಿ ಠೇವಣಿ ಮಾಡುವ ಮೂಲಕ ನಿಮ್ಮ ಮಗಳ ಭವಿಷ್ಯಕ್ಕಾಗಿ 64 ಲಕ್ಷ ರೂಪಾಯಿ ದೊಡ್ಡ ಮೊತ್ತದ ಹಣವನ್ನು ಗಳಿಸಬಹುದು. ಸಾಲ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗುವುದಿಲ್ಲ. ಉನ್ನತ ಶಿಕ್ಷಣ ಅಥವಾ ಮದುವೆಯ ಕಾರ್ಯಗಳನ್ನು ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ನೆರವೇರಿಸಬಹುದು.

Leave A Reply

Your email address will not be published.