Suniel Shetty: ನಟ ಸುನಿಲ್ ಶೆಟ್ಟು ಅವರ ನೆಚ್ಚಿನ ಕ್ರಿಕೆಟಿಗ ಯಾರು ಗೊತ್ತಾ…? ಅಳಿಯನಿಗಿಂತ ಈತನೇ ಇಷ್ಟವಂತೆ.
ತನ್ನ ನೆಚ್ಚಿನ ಕ್ರಿಕೆಟರ್ ಯಾರು ಎಂದು ತಿಳಿಸಿದ ಸುನಿಲ್ ಶೆಟ್ಟಿ.
Suniel Shetty Reveals His Favourite Cricketer: ನಟ ಸುನೀಲ್ ಶೆಟ್ಟಿ (Suniel Shetty) ಅವರು ತನ್ನ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂಬುದನ್ನು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಈ ಹಿಂದೆ ಎಷ್ಟೋ ಬಾರಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಕ್ರಿಕೆಟ್ ವಿಷಯ ಬಂದಾಗ ಕ್ರಿಕೆಟರ್ ಕೆ.ಎಲ್ ರಾಹುಲ್ ಬಗ್ಗೆ ಹಾಡಿ ಹೊಗಳಿದ್ದುಂಟು. ಹಾಗು ಅವರ ಆಟದ ಶೈಲಿಯನ್ನು ಮೆಚ್ಚಿ ಮಾತನಾಡಿದರು ಆದರೆ ಈ ಸಲ ಸಂದರ್ಶನವೊಂದರಲ್ಲಿ ತನ್ನ ನೆಚ್ಚಿನ ಕ್ರಿಕೆಟ ಆಟಗಾರ ಕೆ.ಎಲ್ ರಾಹುಲ್ ಅಲ್ಲ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.

ಈ ಕ್ರಿಕೆಟಿಗ ನನ್ನ ಮಗನಂತೆ ಎಂದ ನಟ ಸುನೀಲ್ ಶೆಟ್ಟಿ
ನನ್ನ ಫೆವ್ರೆಟ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದು ಸುನೀಲ್ ಶೆಟ್ಟಿ ಅವರು ಹೇಳಿಕೆ ನೀಡಿದ್ದು. ಈ ಹಿಂದೆ ಕೆ.ಎಲ್ ರಾಹುಲ್ ಅವರ ಬಗ್ಗೆ ಮಾತನಾಡುತ್ತಿದ್ದು, ಈಗ ಕೆ.ಎಲ್ ರಾಹುಲ್ ನನ್ನ ಮಗನಂತೆ ಎಂದು ಹೇಳಿಕೆ ನೀಡಿದ್ದಾರೆ. ಕೆ.ಎಲ್ ರಾಹುಲ್ ಅವರನ್ನು ತನ್ನ ಮಗನೆಂದು ಹೇಳಿ ಅವರ ಮೇಲಿನ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ.
ವಿರಾಟ್ ಕೊಹ್ಲಿಯ ದೊಡ್ಡ ಪಾನ್ ಸುನೀಲ್ ಶೆಟ್ಟಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಒಟ್ಟು 78 ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 48 ಶತಕ ಗಳಿಸಿರುವ ಕಿಂಗ್ ಕೊಹ್ಲಿ, ಈ ಟೂರ್ನಿಯಲ್ಲಿ ಇನ್ನೆರಡು ಶತಕಗಳನ್ನು ಸಿಡಿಸಿದರೆ, ಸಚಿನ್ ತೆಂಡೂಲ್ಕರ್ ಅವರ (49 ಶತಕ) ಶತಕಗಳ ದಾಖಲೆಯನ್ನು ಮುರಿಯಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿಗೆ ಶತಕ ಸಿಡಿಸುವ ಅವಕಾಶವಿತ್ತು.
View this post on Instagram
ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ್ದ ಕೊಹ್ಲಿ, ಕೊನೆಯಲ್ಲಿ ಬಿರುಸಿನ ಆಟಕ್ಕೆ ತಿರುಗಿದರು. 103 ಎಸೆತಗಳಲ್ಲಿ 95 ರನ್ ಗಳಿಸಿ ಆಡುತ್ತಿದ್ದಾಗ ಗೆಲುವಿಗೆ ಇನ್ನೂ 5 ರನ್ ಬಾಕಿಯಿತ್ತು. ಕೊಹ್ಲಿಯ ಶತಕಕ್ಕೂ ಅಷ್ಟೇ ರನ್ ಬೇಕಿತ್ತು. ಈ ವೇಳೆ 104ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಕೊಹ್ಲಿ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನೀಲ್ ಶೆಟ್ಟಿ ಅವರು ನನ್ನ ಫೆವ್ರೆಟ್ ಸ್ಟಾರ್ ಕ್ರಿಕೆಟರ್ ಎಂದಿಗೂ ವಿರಾಟ್ ಕೊಹ್ಲಿಆತ ನಿಜವಾದ ಚೇಸ್ ಮಾಸ್ಟರ್ ಎಂದು ಹೇಳಿದ್ದಾರೆ.