Swavalambi Sarathi : ಈ ಯೋಜನೆಯಲ್ಲಿ ಸರ್ಕಾರವೇ ಟ್ಯಾಕ್ಸಿ ಮತ್ತು ವಾಹನ ಖರೀದಿಸಲು ಹಣ ಕೊಡಲಿದೆ, ಇಂದೇ ಅರ್ಜಿ ಸಲ್ಲಿಸಿ.
ಟ್ಯಾಕ್ಸಿ ಮತ್ತು ವಾಹನ ಖರೀದಿ ಮಾಡುವವರಿಗೆ ಸರ್ಕಾರದಿಂದ ಹೊಸ ಯೋಜನೆ.
Swavalambi Sarathi Yojana Karnataka: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲೂ ಅಲ್ಪ ಸಂಖ್ಯಾತರು, SC-ST ವರ್ಗಕ್ಕೆ ಸೇರಿದವರು ಬಂಪರ್ ಆಫರ್ ಅನ್ನೇ ಪಡೆಯುತ್ತಿದ್ದಾರೆ. ಯಾಕೆಂದರೆ ಸರ್ಕಾರ ಇವರಿಗೆ ಕೊಟ್ಟಷ್ಟು ಯೋಜನೆ ಬೇರೆ ಯಾರಿಗೂ ಕೊಟ್ಟಿಲ್ಲ.
ಹಾಗೆಯೆ ಮುಖ್ಯ ಮಂತ್ರಿಯವರು ಇನ್ನೊಂದು ಹೊಸ ಸೌಲಭ್ಯವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಗಳಿಗಾಗಿ ಜಾರಿಗೆ ತಂದಿದ್ದಾರೆ. ಈ ಯೋಜನೆಯ ಹೆಸರು ಸ್ವಾವಲಂಬಿ ಸಾರಥಿ ಯೋಜನೆ ಆಗಿದೆ. ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ವಾಹನ ಅಥವಾ ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಗೆ ಸಹಾಯಧನ ಹಾಗೂ ಸಾಲ ಸೌಲಭ್ಯವನ್ನು ಪಡೆಯಲು ನವೆಂಬರ್ 29ರ ಒಳಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ವರದಿ ನೀಡಲಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆ ಜಾರಿಗೆ
ಸ್ವಾವಲಂಬಿ ಸಾರಥಿ ಯೋಜನೆಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆ ಸಹಾಯಕ ಆಗಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸ್ವಾವಲಂಭಿ ಸಾರಥಿ ಯೋಜನೆಗಳಡಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೇವಾ ಸಿಂಧು ಪೋರ್ಟಲ್ ಮೂಲಕ ನವೆಂಬರ್ 29 ರ ಒಳಗೆ ಅರ್ಜಿ ಸಲ್ಲಿಸತಕ್ಕದ್ದಾಗಿದೆ.

ಸ್ವಾವಲಂಬಿ ಸಾರಥಿ ಯೋಜನೆಯು ಸರಕು ವಾಹನ ಅಥವಾ ಟ್ಯಾಕ್ಸಿ ಖರೀದಿಗೆ ಸಾಲ ಸೌಲಭ್ಯ ಒದಗಿಸುತ್ತದೆ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆ ನಿಗಮದ ಸಹಾಯಧನ ಹಾಗೂ ಬ್ಯಾಂಕ್ ಸಾಲ ಸಹಯೋಗದೊಂದಿಗೆ ಉದ್ಯೋಗ ಅವಕಾಶವನ್ನು ಸ್ವಾವಲಂಬಿ ಸಾರಥಿ ಯೋಜನೆಯಡಿ ಒದಗಿಸಲಾಗುತ್ತದೆ. ಯೋಜನೆಯಡಿ ಘಟಕವೆಚ್ಚ ಶೇ.70 ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.1 ಲಕ್ಷ, ಘಟಕವೆಚ್ಚ ಶೇ.70 ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.2 ಲಕ್ಷ. ಸ್ವಾವಲಂಬಿ ಸಾರಥಿ ಸರಕು ವಾಹನ/ಟ್ಯಾಕ್ಸಿ(ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ ಘಟಕವೆಚ್ಚದ ಶೇ. 75 ರಷ್ಟು ಸಹಾಯಧನ ಅಥವಾ ಗರಿಷ್ಟ ರೂ.4 ಲಕ್ಷ ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.