Tata Altroz: ಟಾಟಾ ಈ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಮಾರುತಿ, ಕಡಿಮೆ ಬೆಲೆ ಮತ್ತು 23 Km ಮೈಲೇಜ್.
ಟಾಟಾ ಕಂಪನಿಯ ಈ ಕಾರಿಗೆ ಹೆಚ್ಚಿಗೆ ಡಿಮ್ಯಾಂಡ್, ಎಲ್ಲರೂ ಇಷ್ಟಪಡುವ ವಿಶೇಷತೆ ಹೊಂದಿದೆ ಈ ಕಾರು
Tata Altroz Car: ದೇಶಿಯ ಮಾರುಕಟ್ಟೆಯಲ್ಲಿ ಅನೇಕ ಕಾರು ಕಂಪನಿ ಗಳಿವೆ ಅದರಲ್ಲಿ ಜನಪ್ರಿಯತೆ ಹೊಂದಿದ ಕಂಪನಿ ಅಂದರೆ ಟಾಟಾ ಕಂಪನಿ. ಈ ಕಂಪನಿಯಾ ಕಾರುಗಳು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಬರುತ್ತದೆ.
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಈ ಕಾರುಗಳು ಪರಿಚಯಿಸಲ್ಪಟ್ಟಿದ್ದು, ಇಂದಿಗೂ ಕೂಡ ವಿಶೇಷತೆ ಕಡೆಗೆ ಗಮನ ಹರಿಸಿದೆ ಎನ್ನಬಹುದು. ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅಲ್ಟೋಜ್ (Altroz) ಕಾರು ಗ್ರಾಹಕರಿಗೆ ಪರಿಚಯಿಸಲ್ಪಟ್ಟಿದ್ದು, ವಿತರಣೆಗೆ ಒಂದಷ್ಟು ಹೆಚ್ಚು ಸಮಯಾವಕಾಶ ಬೇಕಾಗಿದೆ ಎಂದು ಕಂಪನಿ ಹೇಳಿದೆ.

ಈ ಕಾರು ನಿಮ್ಮ ಕೈ ಸೇರಲು ಅಧಿಕ ಸಮಯ ಪಡೆದುಕೊಳ್ಳುತ್ತದೆ
ಟಾಟಾ ಅಲ್ಟೋಜ್ (Tata Altroz) ಡೀಸೆಲ್ ಆವೃತ್ತಿಗಳು ಗ್ರಾಹಕರ ಕೈ ಸೇರಲು ಹೆಚ್ಚಿನ ಅಧಿಕ ಹೊಂದಿವೆ. ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು 6 ವಾರಗಳ ಸಮಯಬೇಕು. ಅದೇ ರೀತಿಯಲ್ಲಿ ಪೆಟ್ರೋಲ್ ಹಾಗೂ ಸಿಎನ್‌ಜಿ ಅಲ್ಟೋಜ್ ಹ್ಯಾಚ್‌ಬ್ಯಾಕ್, 4 ವಾರಗಳಿಗೆ ಡಿಲೆವರಿಯಾಗಲಿದೆ. ಇದು, ಮುಂಬೈ ನಗರಕ್ಕೆ ಮಾತ್ರ ಅನ್ವಯಿಸುತ್ತದೆ. ಆದರೆ, ರಾಜ್ಯದಿಂದ ರಾಜ್ಯಕ್ಕೆ ಕಾಯುವಿಕೆ ಅವಧಿ ಬೇರೆಯಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಶಿಪ್ ಭೇಟಿ ನೀಡುವುದು ಉತ್ತಮ .
ಟಾಟಾ ಅಲ್ಟೋಜ್ (Tata Altroz)ಕಾರಿನ ವೈಶಿಷ್ಟತೆಗಳು
ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್ ಅಥವಾ 6 ಸ್ವೀಡ್ ಡುಯಲ್ ಕ್ಲಚ್ (ಡಿಸಿಟಿ) ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿವೆ. ಅಲ್ಟೋಜ್ ಸಿಎನ್‌ಜಿ ರೂಪಾಂತರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಹೊಂದಿದ್ದು, 73.5 PS ಗರಿಷ್ಠ ಪವರ್ ಹಾಗೂ 103 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ.
5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ಸುರಕ್ಷತೆಯ ದೃಷ್ಟಿಯಿಂದಲೂ ಈ ಕಾರು, ಅತ್ಯುತ್ತಮವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಹೊಂದಿದೆ. ಹಾಗು 7 – ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಿದೆ.

ಟಾಟಾ ಅಲ್ಟೋಜ್ (Tata Altroz)ಕಾರಿನ ಎಂಜಿನ್ ಸಾಮರ್ಥ್ಯ ಹಾಗು ಮೈಲೇಜ್
ಈ ಕಾರು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 86 PS ಪವರ್, 113 Nm ಪೀಕ್ ಟಾರ್ಕ್, 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 PS ಗರಿಷ್ಠ ಪವರ್, 140 Nm ಪೀಕ್ ಟಾರ್ಕ್ ಹಾಗೂ 1.5-ಲೀಟರ್ ಡಿಸೇಲ್ ಎಂಜಿನ್ 90 PS ಗರಿಷ್ಠ ಪವರ್ ಹಾಗೂ 200 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಟಾಟಾ ಅಲ್ಟೋಜ್ ಹ್ಯಾಚ್‌ಬ್ಯಾಕ್ 18.05 – 23.64 kmpl ಮೈಲೇಜ್ ನೀಡುತ್ತದೆ.
ಟಾಟಾ ಅಲ್ಟೋಜ್ (Tata Altroz)ಕಾರಿನ ಬೆಲೆ
ಟಾಟಾ ಅಲ್ಟೋಜ್ ಹ್ಯಾಚ್‌ಬ್ಯಾಕ್ ಪೆಟ್ರೋಲ್ ಹಾಗೂ ಡಿಸೇಲ್ ಮಾದರಿಗಳು ರೂ.6.60 ಲಕ್ಷದಿಂದ ರೂ.10.74 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಸಿಎನ್‌ಜಿ ಅಲ್ಟೋಜ್ ರೂ.7.55 ಆರಂಭಿಕ ದರಕ್ಕೆ ಗ್ರಾಹಕರಿಗೆ ಸಿಗುತ್ತದೆ. ಎಕ್ಸ್‌ಇ, ಎಕ್ಸ್‌ಇ ಪ್ಲಸ್, ಎಕ್ಸ್‌ಎಂ ಪ್ಲಸ್, ಡಾರ್ಕ್ ಎಡಿಷನ್ ಸೇರಿದಂತೆ ವಿವಿಧ ರೂಪಾಂತರದ ಆಯ್ಕೆಯಲ್ಲಿ ಖರೀದಿದಾರರಿಗೆ ಈ ಕಾರು ಲಭ್ಯವಿದೆ.