Tata Electric: ಈ ಟಾಟಾ ಕಾರಿನ ಮುಂದೆ ಕ್ರೆಟಾ ಕಾರ್ ಬೇಡಿಕೆ ಕಳೆದುಕೊಂಡಿದೆ, ಕಡಿಮೆ ಬೆಲೆ ಮತ್ತು 5 ಸ್ಟಾರ್ ರೇಟಿಂಗ್.

ಟಾಟಾ ಹೊಸ ಕಾರಿನ ಮುಂದೆ ಬೇಡಿಕೆ ಕಳೆದುಕೊಳ್ಳುತ್ತಿದೆ ಕ್ರೆಟಾ ಕಾರ್.

Tata Curvv EV Concept: ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ (Tata) ವಾಹನಗಳು ಬಹಳ ಬೇಡಿಕೆಯನ್ನು ಪಡೆದುಕೊಂಡಿದೆ. ಟಾಟಾ ಕಂಪನಿಯ ಕಾರುಗಳು ಜನರ ನೆಚ್ಚಿನ ಕಾರಾಗಿದೆ ಯಾಕೆಂದರೆ ಈ ಕಂಪನಿಯ ಕಾರುಗಳು ಹಲವು ವೈಶಿಷ್ಟತೆ, ಕಡಿಮೆ ಬೆಲೆ ಹಾಗು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ.

ಟಾಟಾ ಮೋಟಾರ್ಸ್ ತನ್ನ ಬಹುನೀರಿಕ್ಷಿತ ಕರ್ವ್ ಕಾನ್ಸೆಪ್ಟ್(Curvv Concept) ಆವೃತ್ತಿಯನ್ನು ಬಿಡುಗಡೆ ಮಾಡಲು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಹೊಸ ಕಾರು ಮಾದರಿಯು ಎಸ್ ಯುವಿ ವೈಶಿಷ್ಟ್ಯತೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ 5 ವರ್ಷಗಳಲ್ಲಿ 5 ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆ ನಡೆಸುತ್ತಿದ್ದು, ಹೊಸ ಕಾರುಗಳಲ್ಲಿ ಸಾಮಾನ್ಯ ಕಾರುಗಳ ಜೊತೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಬಿಡುಗಡೆಯಾಗಲಿವೆ.

Tata Curvv EV Concept
Image Credit: Carwale

ಪೆಟ್ರೋಲ್ ಹಾಗು ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಈ ಕಾರು ಬಿಡುಗಡೆ ಆಗಲಿದೆ

ಟಾಟಾ ಮೋಟರ್ಸ್ ಕಂಪನಿಯು 2024ರ ಆರಂಭದಲ್ಲಿ Curvv Electric ಆವೃತ್ತಿ ಬಿಡುಗಡೆ ಮಾಡಲಿದ್ದು, ಮುಂದಿನ ಕೆಲವೇ ತಿಂಗಳಿನಲ್ಲಿ ಪೆಟ್ರೋಲ್ ಆವೃತ್ತಿಯು ಸಹ ಬಿಡುಗಡೆಯಾಗಲಿದೆ. ಸದ್ಯ ರೋಡ್ ಟೆಸ್ಟಿಂಗ್ ನಲ್ಲಿ ಕಾಣಿಸಿಕೊಂಡಿರುವ ಕರ್ವ್ ಕಾರು ಮಾದರಿಯು ಕಾನ್ಸೆಪ್ಟ್ ಆವೃತ್ತಿಗಿಂತಲೂ ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದ್ದು, ಇದು ಕೂಪೆ SUV ವೈಶಿಷ್ಟ್ಯತೆಗಳೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗನ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಕರ್ವ್ ಕಾನ್ಸೆಪ್ಟ್ ಕಾರಿನ ವಿಶೇಷತೆ

ಟಾಟಾದವರ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್ ಗಳಾದ ಫ್ಲಶ್ ಡೋರ್ ಗಳು, ಆಟೋ ಪಾರ್ಕ್ ಅಸಿಸ್ಟ್ ಸೌಲಭ್ಯಕ್ಕಾಗಿ 360 ಡಿಗ್ರಿ ಕ್ಯಾಮೆರಾ, ಹೈ ಎಂಡ್ ಮಾದರಿಗಾಗಿ 6 ಏರ್ ಬ್ಯಾಗ್ ಗಳು, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸರ್ಪೊಟ್ ಹೊಂದಿರುವ 10.2 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿದೆ. ಕರ್ವ್ ಕಾನ್ಸಪ್ಟ್ ಕಾರು ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ ಜಿ ಆಯ್ಕೆಯನ್ನು ಸಹ ನೀಡಬಹುದಾಗಿದೆ.

Tata Curvv EV Concept Price
Image Credit: Carwale

ಕರ್ವ್ ಕಾನ್ಸೆಪ್ಟ್ ಕಾರಿನ ಎಂಜಿನ್

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕರ್ವ್ ಮಾದರಿಗಾಗಿಯೇ ಹೊಚ್ಚ ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪರಿಚಯಿಸಬಹುದಾಗಿದ್ದು, ಇದು ಸಾಮಾನ್ಯ ಆವೃತ್ತಿಯೊಂದಿಗೆ 115 ಹಾರ್ಸ್ ಪವರ್ ಮತ್ತು ಟರ್ಬೊ ಆವೃತ್ತಿಯೊಂದಿಗೆ 140 ಹಾರ್ಸ್ ಪವರ್ ಉತ್ಪಾದನೆ ಮೂಲಕ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ. ಇನ್ನು ಎರಡನೇ ತಲೆಮಾರಿನ ಕಾರು ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗುತ್ತಿರುವ ಕರ್ವ್ ಕಾನ್ಸಪ್ಟ್ ಮಾದರಿಯು ಕಂಪ್ಯಾಕ್ಟ್ ಎಸ್ ಯುವಿ ಕಾರುಗಳ ವಿಭಾಗದಲ್ಲಿಯೇ ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಕರ್ವ್ ಕಾನ್ಸೆಪ್ಟ್ ಕಾರಿನ ಬೆಲೆ

ಟಾಟಾ ಮೋಟರ್ಸ್ ನ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10 ಲಕ್ಷದಿಂದ ರೂ. 17 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಟಾಟಾ ಮೋಟಾರ್ಸ್ ಮತ್ತಷ್ಟು ಬೇಡಿಕೆ ತಂದುಕೊಡಲಿದೆ ಎಂದು ಕಂಪನಿ ಹೇಳಿಕೊಂಡಿದೆ .

Leave A Reply

Your email address will not be published.