Tata: 300 ಕಿಲೋಮೀಟರ್ ಮೈಲೇಜ್ ಕೊಡುವ ಈ ಟಾಟಾ ಕಾರಿನ ಮುಂದೆ ಮಂಕಾದ MG Comet.

ಬಂದಿದ್ದು ಈ ಕಾರ್ ಸುಮಾರು 300 ಕಿಲೋಮೀಟರ್ ಮೈಲೇಜ್ ಕೊಡುತ್ತದೆ.

Tata Nano Electric Car: ಟಾಟಾ ಕಂಪನಿಯ (Tata Motors) ಅನೇಕ ಕಾರುಗಳು ಮರುಕಟ್ಟೆಯ್ಲಲಿದ್ದು, ಟಾಟಾ ಕಂಪನಿ ವಿಶೇಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಟಾಟಾ ಕಂಪನಿಯ ಕಾರುಗಳು ಇಂದಿಗೂ ಕೂಡ ತನ್ನ ಹೆಸರನ್ನು ಉಳಿಸಿಕೊಂಡಿದೆ. ಹಾಗೆ ಟಾಟಾದವರ ಇನ್ನೊಂದು ಆಕರ್ಷಕ ಲುಕ್ ಇರುವ ಕಾರು ಮಾರುಕಟ್ಟೆಗೆ ಕಾಣಸಿಗಲಿದೆ.

ಟಾಟಾ ಶೀಘ್ರದಲ್ಲೇ ತನ್ನ ಹೊಸ ಕಾರು ಟಾಟಾ ನ್ಯಾನೋವನ್ನು ಆಟೋ ವಲಯದಲ್ಲಿ ಪರಿಚಯಿಸಲಿದೆ. ಈ ಕಾರನ್ನು ಪ್ರಮುಖ ನವೀಕರಣಗಳೊಂದಿಗೆ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು. ಕಡಿಮೆ ಬೆಲೆಯ ಕಾರ್ ಇದಾಗಿರಲಿದ್ದು ಈ ಕಾರ್ ಗರಿಷ್ಟ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರ್ ಆಗಿರಲಿದೆ ಎಂದು ಕಂಪನಿ ಹೆಮ್ಮೆಯಿಂದ ಹೇಳಿಕೊಂಡಿದೆ. 

Tata Nano Electric Car Feature
Image Credit: Shrifreevs

Tata Nano Electric Car Feature
Tata Nano Electric ಕಾರಿನಲ್ಲಿ ಆಕರ್ಷಕ ವಿನ್ಯಾಸ ಮತ್ತು ಹೈಟೆಕ್ ವೈಶಿಷ್ಟ್ಯಗಳನ್ನು ಕಾಣಬಹುದು. ಟಾಟಾ ನ್ಯಾನೋ ದೇಶದಲ್ಲಿ ಕಡಿಮೆ ಬೆಲೆಯ, 5 ಆಸನ ಇರುವ ಕಾರಾಗಿದ್ದು ಇದನ್ನು ಲಖ್ಟಾಕಿಯಾ ಎಂದೂ ಕರೆಯುತ್ತಾರೆ. Tata Nano Electric ಕಾರಿನಲ್ಲಿಯೇ ಅತೀ ದೊಡ್ಡ ಗಾತ್ರದ ಕಾರಾಗಿದೆ. ಟಾಟಾ ನ್ಯಾನೋ ಇವಿಯಲ್ಲಿ ಸ್ಪೋರ್ಟಿ ಲುಕ್ ಅನ್ನು ಕಾಣಬಹುದು. ಇದರೊಂದಿಗೆ, ಈ ಟಾಟಾ ನ್ಯಾನೋದಲ್ಲಿ ವಿಭಿನ್ನ ವಿನ್ಯಾಸ ಮತ್ತು ನೋಟವನ್ನು ನೋಡಬಹುದು.

ಹೊಸ ಟಾಟಾ ನ್ಯಾನೋದಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಕಾರ್ ಏರ್‌ಬ್ಯಾಗ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಎಸಿ, ಫ್ರಂಟ್ ಪವರ್ ವಿಂಡೋಸ್, ಬ್ಲೂಟೂತ್, ಬಹು-ಮಾಹಿತಿ ಪ್ರದರ್ಶನ ಮತ್ತು ರಿಮೋಟ್ ಲಾಕಿಂಗ್ ಸಿಸ್ಟಮ್ ಅನ್ನು ಪಡೆಯಬಹುದು.

Tata Nano Electric Car Battery Capacity
Image Credit: Delhibreakings

Tata Nano Electric Car Battery Capacity
ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಕಾಣಬಹುದು. ಟಾಟಾ ನ್ಯಾನೋ EV ನಲ್ಲಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು ಲಭ್ಯವಿದೆ. ಇನ್ನು ಹೊಸ ಟಾಟಾ ನ್ಯಾನೋ ಕಾರ್ ಸುಮಾರು 300 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ.

Tata Nano Electric Car Price
Tata Nano Electric ಕಾರು ಯಾವಾಗ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂಬುದರ ಕುರಿತು ಇನ್ನೂ ಅಧಿಕೃತ ದೃಢೀಕರಣವಿಲ್ಲ. ಶೀಘ್ರದಲ್ಲೇ ಟಾಟಾ ನ್ಯಾನೋ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕಾರಿನ ಬೆಲೆ ಸುಮಾರು 5 ಲಕ್ಷ ಇರಬಹುದು. ಟಾಟಾ ನ್ಯಾನೋ MG Comet ಗಿಂತ ಉತ್ತಮವಾಗಿರುತ್ತದೆ.

Leave A Reply

Your email address will not be published.