Tata Ev: ಎಲೆಕ್ಟ್ರಿಕ್ ವಾಹನಗಳಲ್ಲಿ ದಾಖಲೆ ಬರೆಯಲಿದೆ ಈ ಅಗ್ಗದ ಟಾಟಾ ಕಾರ್, ಭರ್ಜರಿ 453 km ಮೈಲೇಜ್

453 ಕಿಲೋಮೀಟರ್ ಕಾರಿನ ಮುಂದೆ ಇತರೆ ಕಾರುಗಳ ಬೇಡಿಕೆ ಕಡಿಮೆಯಾಗಿದೆ.

Tata Ev Mileage Cars: ಈಗಿನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ (Electric) ವಾಹನಗಳ ಹವಾ ಹೆಚ್ಚಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ವಿಭಿನ್ನ ವೈಶಿಷ್ಟತೆ ಯೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸ್ರಷ್ಟಿ ಮಾಡುತ್ತಿದೆ. ಪೆಟ್ರೋಲ್ ಡೀಸೆಲ್ ಗಳ ಬೆಲೆ ಹೆಚ್ಚಾಗುತ್ತಿದಂತೆ ವಾಹನ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಕಡೆ ಗಮನ ಹರಿಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಕಾರುಗಳು ತನ್ನದೇ ಆದ ಹೆಸರನ್ನು ಉಳಿಸಿಕೊಂಡಿದ್ದೆ. ಟಾಟಾ ಕಂಪನಿ (Tata Company) ಅಗ್ಗದ ಬೆಲೆಯ, ಹೊಸ ಲುಕ್ ನೊಂದಿಗೆ ಹೆಚ್ಚು ಮೈಲೇಜ್ ನೀಡುವ ಕಾರನ್ನು ಕಾರು ಪ್ರಿಯರಿಗಾಗಿ ಸಿದ್ದ ಮಾಡಿದೆ.

Tata Nexon New Electric Car Mileage
Image Credit: Moneycontrol

ಟಾಟಾ ಕಂಪನಿಯ ನ್ಯೂ ಲುಕ್ ಎಲೆಕ್ಟ್ರಿಕ್ ಕಾರ್ 
ಟಾಟಾ ಮೋಟಾರ್ಸ್ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಗ್ರಾಹಕರಿಗೆ ಉಡುಗೊರೆಯಾಗಿ TATA NEXON EV ಫೇಸ್ ಲಿಫ್ಟ್ ಅನ್ನು ಬಿಡುಗಡೆ ಮಾಡಲಿದೆ ಎಂಬುದರ ಬಗ್ಗೆ ಟೀಸರ್‌ನಲ್ಲಿ ಕಂಡುಬಂದಿದ್ದು. Tata Motors ಸೆಪ್ಟೆಂಬರ್ 7, 2023 ರಂದು TATA NEXON EV ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡುತ್ತದೆ, ಆದರೆ ಇದು 2023 ನೆಕ್ಸಾನ್‌ನೊಂದಿಗೆ ಸೆಪ್ಟೆಂಬರ್ 14 ರಂದು ಬಿಡುಗಡೆಯಾಗಲಿದೆ.

ಇದಕ್ಕೂ ಮೊದಲು, ಮಾರುಕಟ್ಟೆಯಲ್ಲಿನ ಅನೇಕ ವರದಿಗಳಲ್ಲಿ ಅದರ ವೈಶಿಷ್ಟ್ಯಗಳ ವಿವರಗಳು ಸೋರಿಕೆಯಾಗಿವೆ. ಹೊಸ ಟೀಸರ್‌ನಲ್ಲಿ ನೋಡಿದಂತೆ, ಟಾಟಾ ತನ್ನ Nexon ಮೊದಲ ಮಾದರಿಗೆ ಹೋಲಿಸಿದರೆ ಹೆಚ್ಚು ನವೀಕರಿಸಿದ ನೋಟದೊಂದಿಗೆ NEXON EV ಅನ್ನು ಪರಿಚಯಿಸುತ್ತಿದೆ.

Demand for Tata Nexon car is high and people are booking more and more.
Image Credit: Carwale

TATA NEXON EV ಫೇಸ್ ಲಿಫ್ಟ್ ನ ವಿನ್ಯಾಸದ ಬಗ್ಗೆ ತಿಳಿಯೋಣ
ಪ್ರಸ್ತುತ Nexon EV ಯ ಪ್ರತಿಯೊಂದು ವಿನ್ಯಾಸದ ಅಂಶವು ಅದರ ಮೊದಲ ಮಾದರಿಯಂತೆಯೇ ಇರುತ್ತದೆ, ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಕರ್ವ್ ಪರಿಕಲ್ಪನೆಯಿಂದ ಪ್ರೇರಿತವಾದ ಇದೇ ವಿನ್ಯಾಸದ ಥೀಮ್ ಅನ್ನು ಪಡೆಯುತ್ತದೆ. ಆದರೂ ಇದು ಹೊಸ ನೋಟವನ್ನು ನೀಡಲು ಹೊಸ LED DRL ಮಾದರಿಗಳನ್ನು ಪಡೆಯುತ್ತದೆ. ನೆಕ್ಸಾನ್ EV ಮುಂಭಾಗವು ಸಂಪರ್ಕಿತ ವಿನ್ಯಾಸದ LED DRL ಗಳ ಸೌಲಭ್ಯವನ್ನು ಹೊಂದಿರುತ್ತದೆ. ಈ ಕಾರಿನಲ್ಲಿ ನಾವು ಅನೇಕ ಇತರ ನವೀಕರಣಗಳನ್ನು ಸಹ ಅದರಲ್ಲಿ ಕಾಣಬಹುದು.

ಹೊಸ EV ಸನ್‌ರೂಫ್, ಹೊಸ 10.25″ ಟಚ್‌ಸ್ಕ್ರೀನ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು Apple CarPlay, 10.25″ ಪೂರ್ಣ ಡಿಜಿಟಲ್, ಇನ್ಸ್ಟ್ರುಮೆಂಟ್ ಸ್ಕ್ರೀನ್, ಹೊಸ ಟಚ್ ಮತ್ತು ಟಾಗಲ್ ಆಧಾರಿತ HVAC ನಿಯಂತ್ರಣಗಳು, ಲೋಗೋದೊಂದಿಗೆ ಹೊಸ ಟು-ಸ್ಪೋಕ್ ಸ್ಟೀರಿಂಗ್ ವೀಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ ವಿಶೇಷವಾಗಿರುತ್ತದೆ.

Demand for Tata Nexon car is high and people are booking more and more.
Image Credit: India.postsen

TATA NEXON EV ಹೊಸ ಎಲೆಕ್ಟ್ರಿಕ್ ಕಾರಿನ ಮೈಲೇಜ್ 
TATA NEXON EV ಹೊಸ ಎಲೆಕ್ಟ್ರಿಕ್ ಕಾರು 30.2 kWh ಮತ್ತು 40.5 kWh ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. ಈ ಬ್ಯಾಟರಿ ಪ್ಯಾಕ್ ಮ್ಯಾಕ್ಸ್ ಮಾದರಿಯೊಂದಿಗೆ 312 km ಮತ್ತು ಗರಿಷ್ಠ 453 km ವ್ಯಾಪ್ತಿಯನ್ನು ಹೊಂದುವ ನಿರೀಕ್ಷೆಯಿದೆ. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ತ್ತ Nexon ಎಲೆಕ್ಟ್ರಿಕ್ ಕಾರಿನ ಬೆಲೆ ಸುಮಾರು 10 ಲಕ್ಷ ರೂಪಾಯಿ ಆಗಿದೆ ಎಂದು ಅಂದಾಜು ಮಾಡಲಾಗಿದೆ.

Leave A Reply

Your email address will not be published.