Tata Ev: 465 Km ಮೈಲೇಜ್ ಕೊಡುವ ಈ ಟಾಟಾ ಎಲೆಕ್ಟ್ರಿಕ್ ಕಾರಿಗೆ ಸಕತ್ ಡಿಮ್ಯಾಂಡ್, 6 ತಿಂಗಳ ಬುಕಿಂಗ್ ಅಂತ್ಯ.
ಟಾಟಾ nexon ಎಲೆಕ್ಟ್ರಿಕ್ ಕಾರಿಗೆ ಬೇಡಿಕೆ ಹೆಚ್ಚಾಗಿದ್ದು ಈ ಕಾರ್ ಉತ್ತಮ ಮೈಲೇಜ್ ಕೊಡುತ್ತದೆ.
Tata Nexon EV Facelift: ಟಾಟಾ ಮೋಟರ್ಸ್ (Tata Motors) ಕಾರು ಕಂಪನಿ ಭಾರತದ ಬಹು ಬೇಡಿಕೆಯ ಕಂಪನಿ ಆಗಿದೆ. ಈ ಕಂಪನಿ ಕಾರುಗಳಿಗಾಗಿ ಜನ ಮುಗಿಬಿದ್ದಿದ್ದಾರೆ. ಟಾಟಾ ಕಂಪನಿಯು ಮಾರುಕಟ್ಟೆಯಲ್ಲಿ ಬಹಳ ವಿಶೇಶತೆಯನ್ನು ಹೊಂದಿದೆ ಯಾಕೆಂದರೆ ಈ ಕಾರು ಕಂಪನಿಯು ಅನೇಕ ವಿಶೇಷತೆ ಹೊಂದಿರುವ ಕಾರುಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.
ಹಾಗಾಗಿ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಹೊಂದಿದೆ. ಹಾಗಾದರೆ ಇಷ್ಟು ಬೇಡಿಕೆ ಇರುವ ಆ ಕಾರು ಯಾವುದೆಂದು ನಿಮಗೆ ಕುತೂಹಲವೇ ಇಲ್ಲಿದೆ ನೋಡಿ ಟಾಟಾದವರ ಹೊಸ ಕಾರು.

ಟಾಟಾ ನೆಕ್ಸಾನ್ ಇವಿ ಫೇಸ್‌ಲಿಫ್ಟ್ (Tata Nexon EV Facelift )
ಈ ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ (Tata Nexon Ev Facelift) ಮಾದರಿಗಾಗಿ ಬುಕಿಂಗ್ ಮಾಡಿದ ಗ್ರಾಹಕರು ವಾರಗಟ್ಟಲೆ ಕಾಯಲು ತಯಾರಾಗಿದ್ದಾರೆ. ಈ ಕಾರು ಗ್ರಾಹಕರನ್ನು ಆರರಿಂದ ಎಂಟು ವಾರಗಳವರೆಗೆ ಕಾಯಿಸುತ್ತಿದೆ. ಇದು ಮುಂಬೈನಲ್ಲಿ ಮಾಡಿದ ಬುಕಿಂಗ್ ಗಳಿಗೆ ಅನ್ವಯಿಸುತ್ತದೆ. ನೀವು ಸಹ ಈ ಕಾರನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದರೆ ನಿಮ್ಮ ನಗರದಲ್ಲಿ ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ಮಾದರಿಯ ನಿಖರವಾದ ಕಾಯುವ ಅವಧಿಯ ಬಗ್ಗೆ ತಿಳಿದುಕೊಳ್ಳಲು ನಿಮ್ಮ ಹತ್ತಿರದ ಟಾಟಾ ಮೋಟಾರ್ಸ್ ಡೀಲರ್‌ಶಿಪ್ ಗೆ ಭೇಟಿನೀಡಿ.
ಟಾಟಾ ನೆಕ್ಸಾನ್ ಇವಿ ಕಾರಿನ ರೇಂಜ್
ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಇವಿ ಮಾದರಿಯನ್ನು ಬಿಡುಗಡೆಗೊಳಿಸಿದ್ದು ಈ ಕಾರು ಜನರೇಷನ್ 2 ಮೋಟಾರ್ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ , ಕ್ರಮವಾಗಿ, 127 bhp ಹಾಗೂ 143 bhp ಗರಿಷ್ಠ ಪವರ್, 215 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು, ಇಕೋ, ಸಿಟಿ ಹಾಗೂ ಸ್ಪೋರ್ಟ್ಸ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಹೊಂದಿದ್ದು, ಎಂಆರ್ ರೂಪಾಂತರ ಸಂಪೂರ್ಣ ಚಾರ್ಜಿನಲ್ಲಿ 325 km ಮತ್ತು ಎಲ್‌ಆರ್ ರೂಪಾಂತರ 465 km ರೇಂಜ್ ನೀಡುತ್ತದೆ.

ಹಲವು ಬಣ್ಣಗಳ ಆಯ್ಕೆಯಲ್ಲಿ ಟಾಟಾ ನೆಕ್ಸಾನ್ ಇವಿ ಕಾರು
ಈ ಕಾರನ್ನು ಗ್ರಾಹಕರು ತಮ್ಮ ಮೆಚ್ಚಿನ ಎಲೆಕ್ಟ್ರಿಕ್ ಮಾದರಿಯಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಈ ಟಾಟಾ ನೆಕ್ಸಾನ್ ಇವಿ ಗ್ರಾಹಕರಿಗೆ ಎಂಪವರ್ಡ್ ಆಕ್ಸೈಡ್, ಪ್ರಿಸ್ಟಿನ್ ವೈಟ್ ಫ್ಲೇಮ್ ರೆಡ್ ಒಳಗೊಂಡಂತೆ 7 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ 12.3 – ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ , ಸುರಕ್ಷತೆಯ ದೃಷ್ಟಿಯಿಂದಲ್ಲೂ ಉತ್ತಮವಾಗಿದ್ದು, ನೆಕ್ಸಾನ್ ಇವಿ 6 ಏರ್‌ಬ್ಯಾಗ್ಸ್, ರೇರ್ ಡಿಸ್ಕ್ ಬ್ರೇಕ್ಸ್ ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಪಡೆದಿದೆ.
ಟಾಟಾ ನೆಕ್ಸಾನ್ ಇವಿ ಕಾರಿನ ಬೆಲೆ
ಟಾಟಾ ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಈ ಮಟ್ಟಿಗೆ ಬೇಡಿಕೆ ಪಡೆದುಕೊಳ್ಳುತ್ತದೆ ಎಂದು ಯಾರು ಊಹಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರುವುದರಿಂದ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಬಹುದು. ಟಾಟಾ ನೆಕ್ಸಾನ್ ಇವಿಯ (Tata Nexon EV) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.14.74 ಲಕ್ಷದಿಂದ ರೂ.19.94 ಲಕ್ಷವಾಗಿದೆ .