Tata Punch Feature: ಟಾಟಾ ಪಂಚ್ ಕಾರಿನಲ್ಲಿ ಬಂತು ಹೊಸ ಫೀಚರ್, ಕ್ರೆಟಾ ಕಾರಿಗೆ ಪೈಪೋಟಿ ಕೊಡಲು ಹೊಸ ಫೀಚರ್ ಬಿಡುಗಡೆ.

ಟಾಟಾ ಪಂಚ್ ಕಾರಿನಲ್ಲಿ ಬಂತು ಹೊಸ ಫೀಚರ್.

Tata Punch Feature 2025: ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಹೊಸ ಶೈಲಿಯ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿದೆ. ಮೈಕ್ರೊ ಎಸ್ ಯುವಿ ಮೂಲಕ ಟಾಟಾ ಪಂಚ್ ಭರ್ಜರಿ ಪೈಪೋಟಿ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಮತ್ತೊಂದು ಪ್ರೀಮಿಯಂ ಫೀಚರ್ಸ್ ಸೌಲಭ್ಯವನ್ನು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುವ ಸುಳಿವು ನೀಡಿದೆ.

ಟಾಟಾ ಪಂಚ್ (Tata Punch) ಆಕರ್ಷಕ ಬೆಲೆ, ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಸುರಕ್ಷತೆಯಲ್ಲಿ ಗಮನಸೆಳೆದಿರುವ ಮೈಕ್ರೊ ಎಸ್ ಯುವಿ ಮಾದರಿಯು ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದ್ದು, ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್‌ಟರ್‌ಗೆ ಪೈಪೋಟಿಯಾಗಿ ಹಲವು ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಳ್ಳುತ್ತಿದೆ.

Tata Punch Features
Image Credit: Original Source

ಟಾಟಾ ಪಂಚ್ (Tata Punch) ಕಾರಿನ ವೈಶಿಷ್ಟತೆಗಳು

ಹ್ಯುಂಡೈ ಎಕ್ಸ್‌ಟರ್‌ ಮಾದರಿಯು ಇತ್ತೀಚೆಗೆ ಪಂಚ್ ಕಾರಿಗೆ ಪೈಪೋಟಿಯಾಗಿ ಹಲವಾರು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇದಕ್ಕಾಗಿ ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ನೀಡಲಾಗುತ್ತಿರುವ ಕೆಲವು ಫೀಚರ್ಸ್ ಗಳನ್ನು ಬೆಸ್ ವೆರಿಯೆಂಟ್ ನಲ್ಲೂ ನೀಡಲು ನಿರ್ಧರಿಸಿದೆ.

ಮಾಹಿತಿಗಳ ಪ್ರಕಾರ ನವೀಕೃತ ಪಂಚ್ ಕಾರಿನ ಆರಂಭಿಕ ಮಾದರಿಗೂ ಅನ್ವಯಿಸುವಂತೆ ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೀಡಲಾಗುತ್ತಿದ್ದು, ಸದ್ಯ ಈ ಫೀಚರ್ಸ್ ಅನ್ನು ಪಂಚ್ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ಮಾತ್ರ ನೀಡಲಾಗುತ್ತಿದೆ. ಇದೀಗ ಹೊಸ ಫೀಚರ್ಸ್ ಅನ್ನು ಪಂಚ್ ಕಾರಿನ ಎಲ್ಲಾ ವೆರಿಯೆಂಟ್ ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ಇದು ಪಂಚ್ ಕಾರು ಖರೀದಿದಾರರಿಗೆ ಮತ್ತಷ್ಟು ಐಷಾರಾಮಿ ಡ್ರೈವಿಂಗ್ ಅನುಭವ ನೀಡಲಿದೆ.

ಟಾಟಾ ಪಂಚ್ (Tata Punch) ಕಾರಿನ ಬ್ಯಾಟರಿ ಹಾಗು ಮೈಲೇಜ್

ಹೊಸ ಪಂಚ್ ಇವಿ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿ 24 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಬಹುದಾಗಿದ್ದು, ಇದು ಪ್ರತಿ ಚಾರ್ಜ್ ಗೆ 250 ರಿಂದ 280 ಕಿಲೋ ಮೀಟರ್ ಮೈಲೇಜ್ ನೀಡಬಹುದಾಗಿದೆ. ಜೊತೆಗೆ ಹೊಸ ಕಾರನ್ನು ಟಾಟಾ ಕಂಪನಿ ಅಲ್ಫಾ ಕಾರು ಉತ್ಪಾದನಾ ಪ್ಲಾಟ್ ಫಾರ್ಮ್ ಅಡಿ ನಿರ್ಮಾಣ ಮಾಡುತ್ತಿದ್ದು, ಹೊಸ ಪ್ಲ್ಯಾಟ್ ಫಾರ್ಮ್ ನೊಂದಿಗೆ ಅತ್ಯುತ್ತಮ ಬ್ಯಾಟರಿ ಪ್ಯಾಕ್ ಮತ್ತು ಫೀಚರ್ಸ್ ನೀಡಲಾಗುತ್ತಿದೆ.

ಈ ಮೂಲಕ ಪಂಚ್ ಕಾರು ಪೆಟ್ರೋಲ್ ಮಾದರಿಯಲ್ಲಿ ಪ್ರತಿ ಲೀಟರ್ ಗೆ ಸುಮಾರು 19 ಕಿ.ಮೀ ಮೈಲೇಜ್ ಹೊಂದಿದ್ದರೆ ಕೆಜಿ ಸಿಎನ್‌ಜಿಗೆ ಗರಿಷ್ಠ 26 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಹಲವಾರು ಫೀಚರ್ಸ್ ಗಳನ್ನು ನೀಡಲಾಗಿದೆ. ಇದರೊಂದಿಗೆ ಟಾಟಾ ಕಂಪನಿಯು ಪಂಚ್ ಕಾರಿನಲ್ಲೂ ಇವಿ ಆವೃತ್ತಿ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಇವಿ ಕಾರು ಬಿಡುಗಡೆಗಾಗಿ ಈಗಾಗಲೇ ಕೊನೆಯ ಹಂತದ ಸಿದ್ದತೆ ನಡೆಸಲಾಗುತ್ತಿದೆ.

Tata Punch Car Price
Image Credit: Tata Motors

ಟಾಟಾ ಪಂಚ್ (Tata Punch) ಕಾರಿನ ಬೆಲೆ
ಹೊಸ ಫೀಚರ್ಸ್ ಜೋಡಣೆ ನಂತರ ಪಂಚ್ ಕಾರಿನ ಬೆಲೆಯಲ್ಲಿ ದುಬಾರಿಯಾಗುವ ಸಾಧ್ಯತೆಗಳಿದ್ದು, ಸದ್ಯಕ್ಕೆ ಇದು ಪ್ರಮುಖ ಐದು ವೆರಿಯೆಂಟ್ ಗಳೊಂದಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 6 ಲಕ್ಷದಿಂದ ರೂ. 10.10 ಲಕ್ಷ ಬೆಲೆ ಹೊಂದಿದೆ. ಪಂಚ್ ಕಾರಿನಲ್ಲಿ ಸದ್ಯ ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಗಳು ಲಭ್ಯವಿದ್ದು, 1.2 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ವಿಶೇಷ ತಂತ್ರಜ್ಞಾನ ಹೊಂದಿರುವ ಐಸಿಎನ್‌ಜಿ ಕಿಟ್ ಜೋಡಣೆ ಹೊಂದಿದೆ.

Leave A Reply

Your email address will not be published.