Tata CNG: 26 ಕಿ.ಮೀ ಮೈಲೇಜ್‌ನ ಟಾಟಾದ ಈ ಕಾರಿಗೆ ಭಾರೀ ಬೇಡಿಕೆ, 6 ಲಕ್ಷ ಆರಂಭಿಕ ಬೆಲೆ.

26 Km ಮೈಲೇಜ್ ಕೊಡುವ ಈ ಟಾಟಾ ಕಾರಿಗೆ ಭರ್ಜರಿ ಡಿಮ್ಯಾಂಡ್.

Tata Punch CNG Cars: ದೇಶಿಯ ಮಾರುಕಟ್ಟೆಯಲ್ಲಿ ಟಾಟಾ (Tata) ಕಂಪನಿಯ ವಾಹನಗಳು ಬಹು ಬೇಡಿಕೆಯ ವಾಹನಗಳಲ್ಲಿ ಒಂದಾಗಿದೆ. ಹಲವಾರು ವರ್ಷಗಳಿಂದ ಟಾಟಾ ಕಂಪನಿ ತನ್ನ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರಂತೆ ಈಗ ಟಾಟಾ ಪಂಚ್ (Tata Punch) ಕಾರು ಕೂಡ ಬಹುಬೇಡಿಕೆಯ ಸೇಲ್ ಕಾಣುತ್ತಿದೆ.

ಟಾಟಾ ಪಂಚ್ ಪೆಟ್ರೋಲ್ ರೂಪಾಂತರಗಳನ್ನು ಇವತ್ತು ಬುಕ್ಕಿಂಗ್ ಮಾಡಿದರೆ, 4 ವಾರಗಳಲ್ಲಿ ವಿತರಣೆಯಾಗಲಿದೆ. ಡಿಲೆವರಿಗೆ ತಗುಲುವ ಸಮಯ ರಾಜ್ಯದಿಂದ ರಾಜ್ಯಕ್ಕೆ, ಡೀಲರ್‌ಶಿಪ್, ಸ್ಟಾಕ್ ಲಭ್ಯತೆ ಆಧರಿಸಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂ ಸಂಪರ್ಕಿಸಿರಿ. ಈ ಮೈಕ್ರೋ ಎಸ್‌ಯುವಿ ಪ್ಯೂರ್, ಅಡ್ವೆಂಚರ್ ಸೇರಿದಂತೆ 4 ರೂಪಾಂತರಗಳೊಂದಿಗೆ ಸಿಗಲಿದೆ.

Tata Punch CNG Cars
Image Credit: Car Wale

ಟಾಟಾ ಪಂಚ್ (Tata Punch) ಕಾರಿನ ವೈಶಿಷ್ಟತೆಗಳು

ಟಾಟಾ ಪಂಚ್ ಕಾರು ಪ್ರಮುಖವಾಗಿ, ಕನೆಕ್ಟ್ದ್ ಕಾರ್ ಟೆಕ್, 7 – ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7 – ಇಂಚಿನ ಸೆಮಿ – ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಕ್ಲೇಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಜೊತೆಗೆ 366 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದಲೂ ಈ ಕಾರು, ಅತ್ಯುತ್ತಮವಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ ) ರೇರ್ ಡಿಫಾಗರ್‌, ರೇರ್ ಪಾರ್ಕಿಂಗ್ ಸೆನ್ಸರ್‌, ರೇರ್ ವ್ಯೂ ಕ್ಯಾಮೆರಾ ಮತ್ತು ISOFIX ಆಂಕರ್‌ನ್ನು ಒಳಗೊಂಡಿದೆ.ಈ ಟಾಟಾ ಪಂಚ್ ಕಾರಿನಲ್ಲಿ 5 ಜನರು ಆರಾಮದಾಯವಾಗಿ ಪ್ರಯಾಣಿಸಬಹುದಾಗಿದೆ.

ಟಾಟಾ ಪಂಚ್ (Tata Punch) ಕಾರಿನ ಎಂಜಿನ್ ಸಾಮರ್ಥ್ಯ
ಈ ಕಾರು ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. 1.2 – ಲೀಟರ್ ಪೆಟ್ರೋಲ್ ಎಂಜಿನ್, 88 PS ಗರಿಷ್ಠ ಪವರ್ ಹಾಗೂ 115 Nm ಪೀಕ್ ಟಾರ್ಕ್ ಉತ್ಪಾದಿಸಿವ ಸಾಮರ್ಥ್ಯವನ್ನು ಒಳಗೊಂಡಿದೆ. 5- ಸ್ವೀಡ್ ಮ್ಯಾನುವಲ್/ 5 – ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಸಿಎನ್‌ಜಿ ರೂಪಾಂತರ ಕೂಡ 1.2 – ಲೀಟರ್ ಎಂಜಿನ್ ಪಡೆದಿದೆ. ಆದರೆ ಕೊಂಚ ಕಡಿಮೆ ಪವರ್ ಹೊರಹಾಕುತ್ತದೆ. ಇದು, 73.5 PS ಗರಿಷ್ಠ ಪವರ್ ಮತ್ತು 103 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 5 – ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಲಭ್ಯವಿದೆ.

tata punch price
Image Credit: Overdrive

ಟಾಟಾ ಪಂಚ್ (Tata Punch) ಕಾರಿನ ಮೈಲೇಜ್

ಟಾಟಾ ಪಂಚ್ ಕಾರಿನ ಮೈಲೇಜ್ ವಿಷಯಕ್ಕೆ ಬರುವುದಾದರೆ, ಪೆಟ್ರೋಲ್ ರೂಪಾಂತರ 18.8 kmpl ರಿಂದ 20.09 kmpl, ಸಿಎನ್‌ಜಿ ವೇರಿಯೆಂಟ್ 26.99 km/kg ಇಂಧನ ದಕ್ಷತೆಯನ್ನು ಹೊಂದಿದೆ. ಇನ್ನು ಟಾಟಾ ಕಂಪನಿಯು ಪಂಚ್ ಎಸ್‌ಯುವಿ ಯನ್ನು ಎಲೆಕ್ಟ್ರಿಕ್ ರೂಪದಲ್ಲಿಯೂ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ರೂ.12 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶಕ್ತಿಯುತ ಬ್ಯಾಟರಿ ಬಳಕೆ ಮಾಡುವ ಸಾಧ್ಯತೆಯಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 500 km ರೇಂಜ್ ನೀಡಬಹುದು ಎಂದು ಹೇಳಲಾಗಿದೆ.

ಟಾಟಾ ಪಂಚ್ (Tata Punch) ಕಾರಿನ ಬೆಲೆ
ಟಾಟಾ ಪಂಚ್ ಕಾರಿನ ಆರಂಭಿಕ ಬೆಲೆ ರೂ.6 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಈ ಕಾರು ಕ್ಯಾಲಿಪ್ಸೊ ರೆಡ್, ಅಟಾಮಿಕ್ ಆರೆಂಜ್, ಡೇಟಾನಾ ಗ್ರೇ ಸೇರಿದಂತೆ 8 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

Leave A Reply

Your email address will not be published.