Tata: ವಿಜಯದಶಮಿಗೆ ಕಾರ್ ಖರೀದಿಸುವವರಿಗೆ ಬಂಪರ್ ಆಫರ್ ನೀಡಿದ ಟಾಟಾ, ಕಡಿಮೆ ಬೆಲೆಗೆ ಬುಕ್ ಮಾಡಿ.
ಟಾಟಾ ಕಂಪನಿಯಾ ಹೊಸ ಕಾರು ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಲ್ಲಿದೆ, ಇಂದೇ ಬುಕ್ ಮಾಡಿ
Tata Tiago Car Offer: ದೇಶೀಯ ಮಾರುಕಟ್ಟೆಯಲ್ಲಿ ಹಲವು ಕಾರು ಕಂಪನಿಗಳಿವೆ ಅದರಲ್ಲಿ ಬಹಳ ಬೆಸ್ಟ್ ಅಂತ ಅಂದರೆ ಟಾಟಾ (Tata) ಕಂಪನಿಯ ಕಾರುಗಳು. ಈ ಕಂಪನಿ ಕಾರುಗಳು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಹಾಗು ಅನೇಕ ವಿಶೇಷತೆಯನ್ನು ಹೊಂದಿರುತ್ತದೆ.
ಅಷ್ಟೇ ಅಲ್ಲದೆ ಈ ಕಂಪನಿಯ ಕಾರುಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇರುತ್ತದೆ. ಈಗ ಹಬ್ಬದ ಸೀಸನ್ ನಲ್ಲಿ ಕಾರು ಖರೀದಿ ಮಾಡುವ ಪ್ಲ್ಯಾನ್ ಇದ್ದರೆ ಟಾಟಾದವರ ಹೊಸ ಟಾಟಾ ಟಿಯಾಗೋ (Tata Tiago) ಅನ್ನು ಖರೀದಿಸಿ. ಈ ಕಾರು ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಮೆಚ್ಚುಗೆಯನ್ನು ಪಡೆದಿದೆ.

ಬೇಡಿಕೆ ಹೆಚ್ಚಿಸಿಕೊಂಡ ಟಾಟಾ ಟಿಯಾಗೋ
ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಕಾರುಗಳನ್ನು ಮಾರಾಟಗೊಳಿಸುವ ಮೂಲಕ ಟಾಟಾ ಕಂಪನಿ ಖ್ಯಾತಿಗಳಿಸಿದೆ. ಅದರ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಟಿಯಾಗೊ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದೆ. ಈ ಅಕ್ಟೋಬರ್ (October) ತಿಂಗಳು ಟಾಟಾ ಟಿಯಾಗೊ ಕಾರಿನ ಕಾಯುವಿಕೆ ಅವಧಿ ಗಣನೀಯವಾಗಿ ಇಳಿಕೆಯಾಗಿದೆ.
ಸಿಎನ್‌ಜಿ ರೂಪಾಂತರವನ್ನು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಮಾಡಲು 8 ವಾರ ಕಾಯಬೇಕು. ಪೆಟ್ರೋಲ್ ರೂಪಾಂತರಗಳು, 4 ವಾರಗಳ ಕಾಯುವಿಕೆ ಅವಧಿಯನ್ನು ಹೊಂದಿವೆ. ಇದು, ಮುಂಬೈ ಮಹಾನಗರಿಗೆ ಮಾತ್ರ ಅನ್ವಯಿಸುತ್ತದೆ. ರಾಜ್ಯದಿಂದ ರಾಜ್ಯಕ್ಕೆ ಡಿಲೆವರಿಗೆ ಹಿಡಿಯುವ ಸಮಯ ಬೇರೆಯಾಗಿದ್ದು, ಹೆಚ್ಚಿನ ಮಾಹಿತಿಗೆ ಹತ್ತಿರದ ಡೀಲರ್ ಶಿಪ್ ಸಂಪರ್ಕಿಸಬೇಕಾಗುತ್ತದೆ.
ಟಾಟಾ ಟಿಯಾಗೋ (Tata Tiago) ಕಾರಿನ ಎಂಜಿನ್ ಸಾಮರ್ಥ್ಯ ಹಾಗು ಮೈಲೇಜ್
ಟಾಟಾ ಟಿಯಾಗೊ, ಸಿಎನ್‌ಜಿ ರೂಪಾಂತರ ಅದೇ ಎಂಜಿನ್ ಹೊಂದಿದೆ . ಆದರೆ, ಕೊಂಚ ಕಡಿಮೆ ಪವರ್ ಉತ್ಪಾದಿಸುತ್ತದೆ. ಇದು, 73.5 PS ಪವರ್ ಹಾಗೂ 95 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಕೇವಲ 5 – ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ದೊರೆಯುತ್ತದೆ. ಈ ಕಾರು, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ.
ಈ ಕಾರ್ 1.2 – ಲೀಟರ್ ಪೆಟ್ರೋಲ್ ಎಂಜಿನ್ 86 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. 5 – ಸ್ವೀಡ್ ಮ್ಯಾನುವಲ್ ಅಥವಾ 5 – ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. ಮೈಲೇಜ್ ವೇರಿಯೆಂಟ್ ಅನ್ವಯ, 20.01 kmpl – 26.49km/kg ಇಂಧನ ದಕ್ಷತೆ ಹೊಂದಿದೆ.

ಟಾಟಾ ಟಿಯಾಗೋ (Tata Tiago) ಕಾರಿನ ವೈಶಿಷ್ಟತೆಗಳು
ಟಾಟಾ ಟಿಯಾಗೋ ಕಾರು ಪ್ರಮುಖವಾಗಿ, 7 – ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಟಾಟಾ ಟಿಯಾಗೊ ಉತ್ತಮವಾಗಿದ್ದು, ಡುಯಲ್ ಫ್ರಂಟ್ ಏರ್ ಬಾಗ್ಸ್, ABS , EBD , ಪಾರ್ಕಿಂಗ್ ಸೆನ್ಸರ್ಸ್ ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ. ಈ ಕಾರಿಗೆ ಮಾರುತಿ ಸುಜುಕಿ ಸೆಲೆರಿಯೊ, ವ್ಯಾಗನ್ ಆರ್ ಮತ್ತು ಸಿಟ್ರಸ್ ಸಿ3 ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಈ ಕಾರು ಮಿಡ್ನೈಟ್ ಪ್ಲಮ್, ಡೇಟೋನಾ ಗ್ರೇ, ಓಪಲ್ ವೈಟ್, ಅರಿಜೋನಾ ಬ್ಲೂ ಹಾಗೂ ಫ್ಲೇಮ್ ರೆಡ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಟಾಟಾ ಟಿಯಾಗೋ (Tata Tiago) ಕಾರಿನ ಬೆಲೆ
ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್, ರೂ.5.60 ಲಕ್ಷದಿಂದ ರೂ.8.20 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಟಿ (ಒ) ಹಾಗೂ ಎಕ್ಸ್‌ಟಿ ಸೇರಿದಂತೆ 6 ರೂಪಾಂತರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಟಿಯಾಗೊ ಎಲೆಕ್ಟ್ರಿಕ್ ರೂಪದಲ್ಲಿಯೂ ಸಿಗಲಿದ್ದು, ರೂ.8.69 ಲಕ್ಷದಿಂದ 12.04 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 250 ರಿಂದ 315 km ರೇಂಜ್ ನೀಡುತ್ತದೆ.