Tax: ಆಸ್ತಿ ಮಾರಾಟ ಮಾಡುವವರಿಗೆ ಹೊಸ ತೆರಿಗೆ ನಿಯಮ, ಕೃಷಿ ಭೂಮಿಗೂ ಕಟ್ಟಬೇಕು ಇಷ್ಟು ತೆರಿಗೆ.
ಕೃಷಿ ಭೂಮಿ ಮಾರಾಟ ಮಾಡಿದರು ತೆರಿಗೆ ಕಟ್ಟಬೇಕು.
Tax on Agricultural Land Sale: ಭೂಮಿ ಮಾರಾಟದ ವಿಷಯದಲ್ಲಿ ಹಲವಾರು ಗೊಂದಲಗಳು ಕೆಲವರಲ್ಲಿ ಇರುತ್ತದೆ. ಮಾರಾಟ ಮಾಡುವ ಭೂಮಿಗೂ ತೆರಿಗೆ ಪಾವತಿ ಇದೆಯ ಎಂಬ ಪ್ರಶ್ನೆ ಕೂಡ ಇದೆ. ನೆಲದ ಮಾಲಕತ್ವವನ್ನು ಕ್ಯಾಪಿಟಲ್ ಅಸೆಟ್ ಎಂದು ಪರಿಗಣಿಸಲಾಗುತ್ತದೆ.
ಇದಕ್ಕೆ ಲಾಭ ತೆರಿಗೆ (Tax) ಅಥವಾ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಆದರೆ, ಕೃಷಿಭೂಮಿಯಾದರೆ ತೆರಿಗೆ ಇರುತ್ತದಾ ಎಂಬುದು ಪ್ರಶ್ನೆ. ಗ್ರಾಮೀಣ ಭಾಗದ ಕೃಷಿಭೂಮಿಯ ಮಾರಾಟದಿಂದ ಸಿಗುವ ಹಣಕ್ಕೆ ಕ್ಯಾಪಿಟಲ್ ಗೇನ್ ತೆರಿಗೆ ಇರುವುದಿಲ್ಲ. ನಗರ ಭಾಗದ ಕೃಷಿಭೂಮಿಗೆ ಈ ತೆರಿಗೆ ಅನ್ವಯ ಆಗುತ್ತದೆ.

ಯಾವ್ಯಾವ ಭೂಮಿಗೆ ತೆರಿಗೆ ಕಡ್ಡಾಯ?
ಒಂದು ಸ್ಥಿರಾಸ್ತಿಯನ್ನು ಮಾರಿದಾಗ ಅದಕ್ಕೆ ತೆರಿಗೆ ಅನ್ವಯ ಆಗುತ್ತದೆ ಎಂಬುದು ಗೊತ್ತಿರುವ ವಿಚಾರ. ಸ್ಥಿರಾಸ್ತಿಗಳಿಗೆ ಸಾಮಾನ್ಯವಾಗಿ ಲಾಭ ತೆರಿಗೆ ಅಥವಾ ಕ್ಯಾಪಿಟಲ್ ಗೈನ್ ಟ್ಯಾಕ್ಸ್ (Capital Gain Tax) ಇರುತ್ತದೆ. ಆದರೆ, ಕೃಷಿ ಜಮೀನಿಗೂ ಇದು ಅನ್ವಯ ಆಗುತ್ತದಾ ಎಂಬ ಗೊಂದಲ ಹಲವರಲ್ಲಿದೆ. ಕೃಷಿ ಭೂಮಿ ಎಲ್ಲಿದೆ, ಯಾವ ಉದ್ದೇಶಕ್ಕೆ ಮಾರಲಾಗುತ್ತಿದೆ ಎಂಬುದರ ಮೇಲೆ ತೆರಿಗೆ ಅನ್ವಯ ಆಗುತ್ತದಾ ಇಲ್ಲವಾ ಎಂಬುದು ನಿರ್ಧಾರ ಆಗುತ್ತದೆ.
ಮನೆ, ಕಾರು, ಷೇರು, ಬಾಂಡ್ ಇತ್ಯಾದಿಗಳಂತೆ ಸ್ಥಿರಾಸ್ತಿಯನ್ನೂ ಕ್ಯಾಪಿಟಲ್ ಅಸೆಟ್ (Capital Asset) ಎಂದು ಪರಿಗಣಿಸಲಾಗುತ್ತದೆ. ಒಂದು ಸ್ಥಿರಾಸ್ತಿ ಮಾರಿದಾಗ ಸಿಗುವ ಲಾಭದ ಪ್ರಮಾಣದ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಇರುತ್ತದೆ. ಹಾಗೆಯೇ, ನೀವು ಆ ಆಸ್ತಿ ಪಡೆದು ಎಷ್ಟು ವರ್ಷಕ್ಕೆ ಅದನ್ನು ಮಾರುತ್ತಿದ್ದೀರಿ ಎಂಬುದರ ಮೇಲೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಅಥವಾ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ.

ಕೃಷಿ ಭೂಮಿಗೆ ತೆರಿಗೆ ಇದೆಯಾ?
ಇನ್ನು, ಕೃಷಿ ಜಮೀನಿನ ವಿಚಾರಕ್ಕೆ ಬರುವುದಾದರೆ, ಭಾರತದಲ್ಲಿ ಗ್ರಾಮೀಣ ಭಾಗದಲ್ಲಿರುವ ಕೃಷಿ ಜಮೀನಿನ ಆಸ್ತಿಯನ್ನು ಕ್ಯಾಪಿಟಲ್ ಅಸೆಟ್ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ಈ ಆಸ್ತಿ ಮಾರಿದಾಗ ಲಾಭ ತೆರಿಗೆ ಅನ್ವಯ ಆಗುವುದಿಲ್ಲ. ಭಾರತದಲ್ಲಿ ಕೃಷಿ ಭೂಮಿ ಎಲ್ಲಿದೆ ಎನ್ನುವುದರ ಮೇಲೆ ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ನಗರಸಭೆ, ಪುರಸಭೆ ಇತ್ಯಾದಿ ವ್ಯಾಪ್ತಿಗೆ ಬರದ ಪ್ರದೇಶದಲ್ಲಿರುವ ಜಮೀನನ್ನು ಗ್ರಾಮೀಣ ಕೃಷಿ ಜಮೀನು ಎಂದು ಪರಿಗಣಿಸಲಾಗುತ್ತದೆ.
ನಗರದ ಕೃಷಿ ಜಮೀನಿನ ಮಾರಾಟಕ್ಕೆ ತೆರಿಗೆ ಇರುತ್ತದೆ
10,000 ಜನಸಂಖ್ಯೆಗಿಂತ ಹೆಚ್ಚಿರುವ ಮುನ್ಸಿಪಾಲಿಟಿಯ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿನ ಕೃಷಿಭೂಮಿಯನ್ನು ನಗರ ಕೃಷಿಜಮೀನು ಎಂದು ಪರಿಗಣಿಸಲಾಗುತ್ತದೆ. ಈ ವ್ಯಾಪ್ತಿಗೆ ಒಳಪಡುವ ಭೂಮಿಗೆ ತೆರಿಗೆ ಕಡ್ಡಾಯವಾಗಿರುತ್ತದೆ.