Smart TV: ದೇಶದಲ್ಲಿ ಲಾಂಚ್ ಆಯಿತು ದುಬಾರಿ ಬೆಲೆಯ ಎರಡು ಸ್ಮಾರ್ಟ್ TV, ಯಾವ ಟಿವಿಯಲ್ಲಿ ಇರದ ಫೀಚರ್.
ಸ್ಮಾರ್ಟ್ ಟಿವಿ ಖರೀದಿಸುವವರಿಗೆ ಇಲ್ಲಿದೆ TCL ನಿಂದ ಎರಡು ಸ್ಮಾರ್ಟ್ tv.
TCL P745 4K UHD And TCLC755 QD Mini LED 4K Smart TV: ಭಾರತದ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ TCL ಕಂಪನಿ ಹೊಸ ಅಲೆಯನ್ನು ಸ್ರಷ್ಟಿಸುವ ಸೂಚನೆಯನ್ನು ನೀಡಿದೆ. ತನ್ನ ಬಜೆಟ್ ಶ್ರೇಣಿಯಲ್ಲಿ ಎರಡು ಸ್ಮಾರ್ಟ್ ಟಿವಿಯನ್ನು ಪರಿಚಯಿಸುತ್ತಿದೆ. ಹೊಸ ಟೆಕ್ನೋಲಜಿ ಯೊಂದಿಗೆ ಹೊಸ ಟಿವಿ ಗಳು ಗ್ರಾಹಕರನ್ನು ಆಕರ್ಷಿಸಲಿದೆ. ಟಿಸಿಎಲ್ (TCL) ಸ್ಮಾರ್ಟ್ ಡಿವೈಸ್‌ಗಳು ಸ್ಮಾರ್ಟ್ ಗ್ಯಾಜೆಟ್ ವಿಭಾಗದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಿವೆ.
ಈ ನಡುವೆ ಟಿಸಿಎಲ್ ಹೊಸ ರೀತಿಯ ಎರಡು Smart TV ಲಾಂಚ್ ಮಾಡಿದೆ. ಈ ಸ್ಮಾರ್ಟ್ ಟಿವಿಗಳು ಫ್ರೀಸಿಂಕ್ ಪೀಚರ್ಸ್ ಹಾಗೂ 120Hz ಸೌಲಭ್ಯ ಪಡೆದುಕೊಂಡಿವೆ. P745 4K ಯುಹೆಚ್‌ಡಿ ಸ್ಮಾರ್ಟ್ ಟಿವಿ ಮತ್ತು ಟಿಸಿಎಲ್ ಇಂಡಿಯಾ C755 ಕ್ಯೂಡಿ ಮಿನಿ ಎಲ್‌ಇಡಿ 4K ಟಿವಿ ಗಳನ್ನು ಘೋಷಣೆ ಮಾಡಿದೆ.

ಟಿಸಿಎಲ್ P745 4K ಯುಹೆಚ್‌ಡಿ ಸ್ಮಾರ್ಟ್‌ಟಿವಿ ವಿಷೇಶತೆ
ಈ ಸ್ಮಾರ್ಟ್‌ಟಿವಿ ಮೆಟಾಲಿಕ್ ಬೆಜೆಲ್-ಲೆಸ್ ವಿನ್ಯಾಸ ಪಡೆದುಕೊಂಡಿದ್ದು,ಈ ಟಿವಿ 43, 50, 55, 65, 75 ಹಾಗೂ 85 ಇಂಚಿನ ವೇರಿಯಂಟ್‌ನಲ್ಲಿ ಲಭ್ಯ ಇದೆ. ಫ್ಲಾಟ್ ಮತ್ತು ಎಲ್‌ಸಿಡಿ ಡಿಸ್‌ಪ್ಲೇ ಹಾಗೂ DLED ಬ್ಯಾಕ್‌ಲೈಟ್ ಆಯ್ಕೆ ಹೊಂದಿದೆ. ಇದರೊಂದಿಗೆ 3840×2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಇದರಲ್ಲಿದೆ. ಇದರ ಜೊತೆಗೆ ಡಾಲ್ಬಿ ವಿಷನ್ ಹೆಚ್‌ಡಿಆರ್ 10+ ಮೂಲಕ ವೀಕ್ಷಣೆಯಲ್ಲಿ ಉತ್ತಮ ಅನುಭವ ಪಡೆದುಕೊಳ್ಳಬಹುದು.
ಈ ಟಿವಿ ಮಿರಾಕಾಸ್ಟ್, ವಿಡಿಯೋ ಚಾಟ್ ಮತ್ತು ತ್ವರಿತ ಸೆಟ್ಟಿಂಗ್‌ಗಳ ಆಯ್ಕೆಯನ್ನು ಹೊಂದಿದೆ.
ಹ್ಯಾಂಡ್ಸ್-ಫ್ರೀ ವಾಯ್ಸ್ ಕಂಟ್ರೋಲ್, ಗೇಮ್ ಮಾಸ್ಟರ್ 2.0, ಮಿರಾಕಾಸ್ಟ್, ವಿಡಿಯೋ ಚಾಟ್ ಮತ್ತು ತ್ವರಿತ ಸೆಟ್ಟಿಂಗ್‌ಗಳು ಆಯ್ಕೆಯನ್ನು ಈ ಟಿವಿ ಹೊಂದಿದೆ.ಇನ್ನು AiPQ ಪ್ರೊಸೆಸರ್ 3.0 ಮೂಲಕ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಟಿವಿ ಗೂಗಲ್ ಅಸಿಸ್ಟೆಂಟ್ ಬಿಲ್ಟ್-ಇನ್ ಜೊತೆಗೆ ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಹಾಗೆಯೇ 10W+10W ಸ್ಪೀಕರ್, ಇಂಟಿಗ್ರೇಟೆಡ್ ಸ್ಪೀಕರ್ ಬಾಕ್ಸ್ ಆಯ್ಕೆ ಇದ್ದು, ಡಾಲ್ಬಿ ಅಟ್ಮಾಸ್, ಡಿಟಿಎಸ್ ಎಕ್ಸ್, 2.1 ಚಾನೆಲ್ ಆಡಿಯೋ ಬೆಂಬಲ ಈ ಟಿವಿಯಲ್ಲಿದೆ.

ಟಿಸಿಎಲ್ P745 4K ಯುಹೆಚ್‌ಡಿ ಸ್ಮಾರ್ಟ್‌ಟಿವಿ ಬೆಲೆ
ಟಿಸಿಎಲ್ P745 4K ಯುಹೆಚ್‌ಡಿ ಸ್ಮಾರ್ಟ್‌ಟಿವಿ ಬೆಲೆ 3,09,990 ರೂ.ಗಳಾಗಿದೆ. ಈ ಸ್ಮಾರ್ಟ್‌ಟಿವಿಗಳನ್ನು ಚಿಲ್ಲರೆ ಅಂಗಡಿಗಳು ಹಾಗೂ ಬ್ರ್ಯಾಂಡ್ ಶೋರೂಮ್‌ಗಳು ಮತ್ತು ಅಧಿಕೃತ ಡೀಲರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.
ಟಿಸಿಎಲ್ ಇಂಡಿಯಾ C755 ಕ್ಯೂಡಿ ಮಿನಿ ಎಲ್‌ಇಡಿ 4K ವಿಶೇಷತೆ
ಈ ಸ್ಮಾರ್ಟ್‌ಟಿವಿ 50, 55, 65, 75, 85 ಹಾಗೂ 98 ಇಂಚಿನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಸ್ಲಿಮ್ ಮತ್ತು ಯುನಿ-ಬಾಡಿ ವಿನ್ಯಾಸ ಪಡೆದುಕೊಂಡಿದ್ದು, ಡಿಸ್‌ಪ್ಲೇ ಮಾತ್ರವಲ್ಲದೆ ಟಿವಿ ಸಹ ಆಕರ್ಷಕವಾಗಿದೆ. ಈ ಸ್ಮಾರ್ಟ್‌ಟಿವಿ 3840×2160 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 144Hz VRR ಹಾಗೂ 240Hz DLG ಫೀಚರ್ಸ್ ಪಡೆದುಕೊಂಡಿದೆ.

ಇದರೊಂದಿಗೆ 6000:1 ಕಾಂಟ್ರಾಸ್ಟ್ ಅನುಪಾತ, 16:09 ಆಕಾರ ಅನುಪಾತ, 550 ನಿಟ್ಸ್ ಹೊಳಪು ಆಯ್ಕೆ ಹಾಗೂ 96% ಡಿಸಿಐ-P3 ನೊಂದಿಗೆ ಡಾಲ್ಬಿ ವಿಷನ್ ಐಕ್ಯೂ ಹೆಚ್‌ಎಲ್‌ಜಿ, ಹೆಚ್‌ಡಿಆರ್10+ ಮೂಲಕ ಸ್ಮಾರ್ಟ್‌ಟಿವಿ ವೀಕ್ಷಕರು ಉತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಅಷ್ಟೇ ಅಲ್ಲದೆ AiPQ ಪ್ರೊಸೆಸರ್ 3.0 ಬಲ ಪಡೆದಿದ್ದು, ಇದರಿಂದ ಉತ್ತಮವಾದ ಸ್ಟ್ರೀಮಿಂಗ್ ಅನುಭವ ಸಿಗಲಿದೆ. ಈ ಸ್ಮಾರ್ಟ್‌ಟಿವಿ ಗೂಗಲ್ ಅಸಿಸ್ಟೆಂಟ್ ಬಿಲ್ಟ್-ಇನ್ ಜೊತೆಗೆ ಗೂಗಲ್ ಟಿವಿ ಆಯ್ಕೆಯನ್ನು ಬೆಂಬಲಿಸಲಿದೆ. ಇದರೊಟ್ಟಿಗೆ ಗೇಮ್ ಮಾಸ್ಟರ್ 2.0, ಮಿರಾಕಾಸ್ಟ್, ವೀಡಿಯೊ ಚಾಟ್ ಮತ್ತು ತ್ವರಿತ ಸೆಟ್ಟಿಂಗ್ ಆಯ್ಕೆ ಇದರಲ್ಲಿದೆ.
ಟಿಸಿಎಲ್ ಇಂಡಿಯಾ C755 ಕ್ಯೂಡಿ ಮಿನಿ ಎಲ್‌ಇಡಿ 4K ಬೆಲೆ
ಟಿಸಿಎಲ್ C755 ಕ್ಯೂಡಿ ಮಿನಿ ಎಲ್‌ಇಡಿ 89,990 ರೂ.ಗಳ ಬೆಲೆಯಿಂದ ಆರಂಭ ಆಗಲಿದ್ದು, 4,99,990 ರೂ.ಗಳ ವರೆಗೆ ಬೆಲೆ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿ ಚಿಲ್ಲರೆ ಅಂಗಡಿಗಳು ಹಾಗೂ ಬ್ರ್ಯಾಂಡ್ ಶೋ ರೂಮ್‌ಗಳು ಮತ್ತು ಅಧಿಕೃತ ಡೀಲರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.