MS Dhoni: MS ಧೋನಿಯನ್ನ ಟೀಂ ಇಂಡಿಯಾದ ನಾಯಕನನ್ನಾಗಿ ಮಾಡಿದ್ಯಾರು ಗೊತ್ತಾ ?
MS ಧೋನಿಯನ್ನು ಭಾರತದ ಕ್ರಿಕೆಟ್ ತಂಡದ ನಾಯಕನಾಗಿ ಪರಿಚಯಿಸಿದ್ದು ಯಾರು ಎಂದು ತಿಳಿದರೆ ಶಾಕ್ ಆಗುವುದು ಖಚಿತ
Team India Captain MS Dhoni: ದೇಶದಲ್ಲಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಆದರೆ ಎಷ್ಟೇ ಕ್ರಿಕೆಟ್ ಅನ್ನು ಪ್ರೀತಿ ಮಾಡಿದರು ಕ್ರಿಕೆಟ್ ಗೆ ಸಂಬಂಧ ಪಟ್ಟ ಕೆಲವು ಮಹತ್ವದ ವಿಚಾರ ಗೊತ್ತಿರುವುದಿಲ್ಲ. ಕೂಲ್ ಕ್ಯಾಪ್ಟನ್ ಎಂದೇ ಪ್ರಖ್ಯಾತಿ ಪಡೆದಿರುವ MS ಧೋನಿ (MS Dhoni) ಯಾರಿಗೆ ತಿಳಿದಿಲ್ಲ ಹೇಳಿ. ತನ್ನ ಮುಗ್ದ ನಗು, ಆಟದ ವೈಖರಿ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಈ ಆಟಗಾರ ಹೊಂದಿದ್ದಾರೆ.
ತಾಳ್ಮೆಗೆ ಇನ್ನೊಂದು ಹೆಸರೇ MS ಧೋನಿ . ಇಂದಿಗೂ ಕೂಡ ಅವರು ಗಟ್ಟಿಯಾಗಿ ಮಾತನಾಡುವುದು, ಕೋಪ ಮಾಡಿಕೊಳ್ಳುವುದು ನೋಡಿದವರ್ಯಾರಿಲ್ಲ ಎನ್ನಬಹುದು. ಇಂತಹ ಅದ್ಬುತ ವ್ಯಕ್ತಿಯನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಕ್ಯಾಪ್ಟನ್ ಆಗಿ ಪರಿಚಯಿಸಿದ್ಯಾರು ಎಂದು ತಿಳಿದುಕೊಳ್ಳಿ.

ಕ್ಯಾಪ್ಟನ್ ಟ್ಯಾಗ್ ಬೇಡ ಎಂದ ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೆ 2007ರ ಇಂಗ್ಲೆಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾ ನಾಯಕತ್ವ ಹೊಂದುವ ಅವಕಾಶ ಹುಡುಕಿಕೊಂಡು ಬಂದಿತ್ತಂತೆ. ಅಂದಿನ BCCI ಅಧ್ಯಕ್ಷ ಶರದ್ ಪವಾರ್ (Sharad Pawar), ಓವಲ್ ಪಂದ್ಯಕ್ಕೂ ಮುನ್ನ ಸಚಿನ್ಗೆ ನಾಯಕತ್ವ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ರಂತೆ.
ಆದರೆ, ಸಚಿನ್ ಈ ಆಫರ್ ಅನ್ನು ನಿರಾಕರಿಸಿದ್ದಾರೆ. ಅಲ್ಲದೇ ಹಿರಿಯ ಆಟಗಾರನಾಗಿ ಲೀಡರ್ಶಿಪ್ ರೋಲ್ ಯಾವಾಗಲೂ ನಿಭಾಯಿಸ್ತಿನಿ. ಆದರೆ ಕ್ಯಾಪ್ಟನ್ ಟ್ಯಾಗ್ ಬೇಡ ಎಂದು ತಿಳಿಸಿದರಂತೆ. ಹಾಗಾದ್ರೆ ಯಾರನ್ನು ನಾಯಕನಾಗಿ ಮಾಡಬಹುದು ಎಂಬ ಪ್ರಶ್ನೆ ಬಂದಾಗ ಒಬ್ಬ ಉತ್ತಮ ನಾಯಕನನ್ನು ಸಚಿನ್ ಸಜೆಸ್ಟ್ ಮಾಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿಯನ್ನು ಆಯ್ಕೆ ಮಾಡಿದ ಸಚಿನ್ ತೆಂಡೂಲ್ಕರ್
ನಾಯಕನಾಗುವ ಅವಕಾಶ ಬಂದ ಸಮಯದಲ್ಲಿ ಸಚಿನ್ ಅವರ ದೇಹ ಸ್ಥಿತಿ ಚೆನ್ನಾಗಿರಲಿಲ್ಲ . ಸಚಿನ್ ಅವರು ನನ್ನ ಎರಡೂ ಆಯಂಕಲ್ ಇಂಜುರಿಯಾಗಿವೆ. ಫೀಲ್ಡ್ನಲ್ಲಿ ತುಂಬಾ ಹೊತ್ತು ಇರೋದಕ್ಕೆ ಆಗ್ತಿಲ್ಲ. ಡ್ರೆಸ್ಸಿಂಗ್ ರೂಮ್ಗೆ ಹೋಗಿ ಆಗಾಗ ಐಸ್ಪ್ಯಾಕ್ ಇಡೋಕೆ ಆಗಲ್ಲ.ಹಾಗಾಗಿ ನಾಯಕತ್ವದ ವಿಚಾರವಾಗಿ ಸಚಿನ್ ಅವರು ಸಲಹೆ ನೀಡಿದ್ದರು ಅದೇನೆಂದರೆ , ಎಮ್.ಎಸ್ ಧೋನಿಯ ಹೆಸರನ್ನ ಸೂಚಿಸಿ, ನಾನು ಸ್ಲಿಪ್ ಫೀಲ್ಡಿಂಗ್ ಮಾಡುವಾಗ ತುಂಬಾ ಮಾತನಾಡಿದ್ದೇನೆ.
ಧೋನಿಯ ಕ್ರಿಕೆಟಿಂಗ್ ಬ್ರೈನ್ ಅದ್ಭುತವಾಗಿದ್ದು, ಆತ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಸಚಿನ್, ಪವಾರ್ಗೆ ತಿಳಿಸಿದ್ದರು . ತದನಂತರ ಧೋನಿ ನಾಯಕನಾಗಿ ಭಾರತಾಂಬೆಯ ಕಿರೀಟಕ್ಕೆ ಗೆಲುವಿನ ಗರಿಗಳನ್ನ ನೀಡಿದ್ದಾರೆ. ಅಷ್ಟೇ ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲೇ ಉತ್ತಮ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.