BRS: ಪ್ರತಿ ಮಹಿಳೆಗೆ 3000 ರೂ ಮತ್ತು 400 ರೂ ಗ್ಯಾಸ್ ಸಿಲಿಂಡರ್, ಸರ್ಕಾರ ಇನ್ನೊಂದು ಘೋಷಣೆ.
ಚುನಾವಣೆಯ ಕಾರಣ ಸರ್ಕಾರ ಇನ್ನೊಂದು ಘೋಷಣೆಯನ್ನ ಮಾಡಿದೆ.
Election Gurantees 2023: ದಿನ ಬಳಕೆಯ ವಸ್ತುವಾದ ಅಡುಗೆ ಅನಿಲ ಸಿಲಿಂಡರ್ ಹಾಗು ಇನ್ನಿತರ ವಿಷಯವಾಗಿ ಭರತ್ ರಾಷ್ಟ್ರ ಸಮಿತಿ ( BRS ) ಮಹತ್ವದ ಮಾಹಿತಿ ನೀಡಿದೆ. ದಿನನಿತ್ಯ ಉಪಯೋಗವಾಗುವ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನ ಸಾಮಾನ್ಯರಿಗೆ ಸಿಲಿಂಡರ್ ಕೊಳ್ಳುವುದು ಬಹಳ ಕಷ್ಟ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಶ್ವಾಸನೆ ಬಹಳ ಸಹಕಾರಿ ಆಗಲಿದೆ.
ಕೇವಲ ಅಡುಗೆ ಅನಿಲ ಸಿಲಿಂಡರ್ ಮಾತ್ರವಲ್ಲದೆ ಇನ್ನಿತರ ಸೌಲಭ್ಯಗಳ ಬಗ್ಗೆ ಸರ್ಕಾರ ಆಶ್ವಾಸನೆ ನೀಡಿದೆ ಅದೇನೆಂದರೆ, ಪ್ರತಿಯೊಬ್ಬ ಮಹಿಳೆಗೆ 3 ಸಾವಿರ ರೂಪಾಯಿ, ಬಿಪಿಎಲ್ (BPL) ಕುಟುಂಬಕ್ಕೆ 5 ಲಕ್ಷ ವಿಮೆ, ಅಡುಗೆ ಅನಿಲ ಸಿಲಿಂಡರ್ ಗೆ 400 ರೂಪಾಯಿ, ಪಿಂಚಣಿ ಹೆಚ್ಚಳ ಸೇರಿದಂತೆ ಹಲವು ಭರವಸೆಗಳ ಪ್ರಣಾಳಿಕೆಯನ್ನು ಭರತ್ ರಾಷ್ಟ್ರ ಸಮಿತಿ (BRS) ಬಿಡುಗಡೆ ಮಾಡಿದೆ.

ಜನರಿಗೆ ಭರವಸೆ ನೀಡಿದ ಭರತ್ ರಾಷ್ಟ್ರ ಸಮಿತಿ (BRS)
ಹಲವು ವಿಚಾರವಾಗಿ ಅಂದರೆ ಮಹಿಳೆಗೆ 3 ಸಾವಿರ ರೂಪಾಯಿ, ಬಿಪಿಎಲ್ (BPL) ಕುಟುಂಬಕ್ಕೆ 5 ಲಕ್ಷ ವಿಮೆ, ಅಡುಗೆ ಅನಿಲ ಸಿಲಿಂಡರ್ ಗೆ 400 ರೂಪಾಯಿ, ಪಿಂಚಣಿ ಹೆಚ್ಚಳ ವಾಗಿ ಹಲವು ಭರವಸೆಯನ್ನು BRS ನೀಡಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಆರ್ ಎಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ಕಾಂಗ್ರೆಸ್ ಘೋಷಿಸಿರುವ ಆಶ್ವಾಸನೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಭರತ್ ರಾಷ್ಟ್ರ ಸಮಿತಿ (BRS) ನಿಂದ ಹಲವು ಯೋಜನೆಗಳು ಜಾರಿ
ಬಿಪಿಎಲ್ ಪಡಿತರ ಚೀಟಿ ಹೊಂದಿರುವ 93 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲು ಕೆಸಿಆರ್ (KCR) ವಿಮಾ ಯೋಜನೆ ಜಾರಿ ಮಾಡಲಾಗುವುದು. ಅದರಲ್ಲಿ ಪ್ರತಿ ಕುಟುಂಬಕ್ಕೆ 5 ಲಕ್ಷ ವಿಮೆ ನೀಡಲಾಗುವುದು. ಸರ್ಕಾರವೇ ಎಲ್‌ಐಸಿ 3,600 ರಿಂದ 4,000 ರೂ ಪ್ರೀ ಮಿಯಂ ಪಾವತಿಸುತ್ತದೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

ಸೌಭಾಗ್ಯ ಲಕ್ಷ್ಮಿ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಮಹಿಳೆಯರಿಗೆ ಮಾಸಿಕ 3 ಸಾವಿರ ರೂಪಾಯಿ ಆರ್ಥಿಕ ನೆರವು, 400 ರೂಪಾಯಿಗೆ ಅಡುಗೆ ಸಿಲಿಂಡರ್, ಆಸರೆ ಪಿಂಚಣಿ ಯೋಜನೆಯಡಿ ವಿವಿಧ ವರ್ಗದ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಪಿಂಚಣಿ ಹೆಚ್ಚಿಸಲಾಗುವುದು.
2024ರ ಮಾರ್ಚ್ ಬಳಿಕ ಪಿಂಚಣಿ ಮೊತ್ತವನ್ನು 2016 ರೂ. ನಿಂದ 3,016 ರೂ. ಗೆ ಹೆಚ್ಚಿಸಿ ಬಳಿಕ ಪ್ರತಿ ವರ್ಷವೂ ಏರಿಕೆ ಮಾಡಿ ಐದು ವರ್ಷದೊಳಗೆ ಅದನ್ನು 5,000 ರೂ.ಗೆ ಏರಿಸುವ ಯೋಜನೆ ರೂಪಿಸಲಾಗಿದೆ. ದೈಹಿಕ ವಿಶೇಷಚೇತನರಿಗೆ ಮುಂದಿನ ಐದು ವರ್ಷಗಳಲ್ಲಿ ಪಿಂಚಣಿಯನ್ನು 4,016 ರಿಂದ 6,016 ರೂ. ಗೆ ಏರಿಸಲಾಗುವುದು.