Temple Teertha Prasada: ನೀವು ‘ದೇವಸ್ಥಾನ’ಗಳಲ್ಲಿ ತಪ್ಪದೇ ‘ತೀರ್ಥ ಪ್ರಸಾದ’ ಸ್ವೀಕರಿಸಿ: ಯಾಕೆ ಗೊತ್ತಾ?
ತೀರ್ಥ ಪ್ರಸಾದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ, ತೀರ್ಥದಿಂದ ಅನೇಕ ಕಾಯಿಲೆಗಳು ನಿವಾರಣೆ ಆಗುತ್ತದೆ
Temple Teertha Prasada: ದೇವಸ್ಥಾನಗಳಿಗೆ ಹೋದಾಗ ತೀರ್ಥ ಪ್ರಸಾದಕ್ಕಾಗಿ ಜನರು ಕಾಯುವುದು ಸಹಜ. ಆದರೆ ಶಾಸ್ತ್ರಕ್ಕಾಗಿ ಮಾತ್ರ ಕೆಲವರು ತೀರ್ಥ ಪಡೆಯುತ್ತಾರೆ. ಹೆಚ್ಚಿನವರಿಗೆ ಯಾಕೆ ತೀರ್ಥ ಪಡೆಯಬೇಕು ಹಾಗು ಅದರ ಮಹತ್ವ ಏನು ಎಂದು ತಿಳಿದಿರುವುದಿಲ್ಲ.
ದೇವಸ್ಥಾನದಲ್ಲಿ ಅರ್ಚಕರು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ತೀರ್ಥವನ್ನು ನೀಡುತ್ತಾರೆ. ಈ ತೀರ್ಥದ ನೀರು ಅಸ್ಥಮಾ, ನೆಗಡಿ, ಕೆಮ್ಮು, ಶ್ವಾಸ ಹಾಗೂ ಹೃದಯಸಂಬಂಧಿ ಕಾಯಿಲೆಗಳನ್ನು ಹಾಗೂ ಇತ್ತೀಚಿನ ಮಾರಕ ರೋಗ ಡೆಂಗ್ಯೂವನ್ನೂ ಸಹ ನಿಯಂತ್ರಿಸಬಹುದೆಂದು ಆಯುರ್ವೇದ ತಿಳಿಸುತ್ತದೆ.
ತುಳಸಿ ಎಲೆಯು ಮಾನವನ ಆರೋಗ್ಯವನ್ನು ಸ್ಥಿರದಲ್ಲಿಡುತ್ತದೆ
ತಾಮ್ರ ಹಾಗು ಬೆಳ್ಳಿಯ ಪಾತ್ರೆಯಲ್ಲಿನ ನೀರಿಗೆ ತುಳಸಿ ಎಲೆ ಹಾಕಿ ಕುಡಿಯುದರಿಂದ
ಅದು ತ್ರಿದೋಷಗಳನ್ನು (ವಾತ, ಪಿತ್ಥ, ಕಫ) ನಿವಾರಿಸುವ ಔಷಧಿಯಾಗುತ್ತದೆ ಎನ್ನುತ್ತದೆ ಆಯುರ್ವೇದ. ತುಳಸಿ ನೀರನ್ನು ಕುಡಿಯುದರಿಂದ ಜೀರ್ಣಶಕ್ತಿಯ ಉದ್ದೀಪನವಾಗುತ್ತದೆಂದು ಹೇಳಲಾಗಿದೆ ಹಾಗಾಗಿ ತುಳಸಿನೀರಿನಿಂದ ತಯಾರಿಸಲ್ಪಟ್ಟ ತೀರ್ಥವೂ ಸಹ ಔಷಧಿಯೇ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದ ತಾಮ್ರ,ಬೆಳ್ಳಿ ಹಾಗೂ ಮಣ್ಣಿನ ಪಾತ್ರೆಗಳಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಪಥ್ಯಕರ ಎಂಬುದು ಸಾಬೀತಾಗಿದೆ.
ಶಂಖದ ನೀರು ಹಲವು ಕಾಯಿಲೆಗಳನ್ನು ನಿವಾರಿಸುತ್ತದೆ
ತುಳಸಿ,ತಾಮ್ರ ಅಥವಾ ಬೆಳ್ಳಿ ಪಾತ್ರೆಯಲ್ಲಿನ ನೀರು, ಶಂಖದ ನೀರು,ದೇವರ ವಿಗ್ರಹದ ನೀರು, ಈ ಎಲ್ಲವುಗಳ ಸಮ್ಮಿಶ್ರಣ ತೀರ್ಥ ಹಾಗಾಗಿ ತೀರ್ಥವೂ ಸಹ ಔಷಧಿಯೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆಯುರ್ವೇದದ ಪ್ರಕಾರ ಶಂಖದ ನೀರಿಗೆ ಅನೇಕ ಔಷಧೀಯ ಗುಣಗಳಿರುತ್ತವೆ.ಇದು ಹೊಟ್ಟೆನೋವು, ತಲೆನೋವು,ಅಜೀರ್ಣತೆ,ದೃಷ್ಟಿ ಸಂಬಂಧಿ, ಚರ್ಮಸಂಬಂಧಿ ದೋಷಗಳನ್ನು ನಿವಾರಿಸುತ್ತದೆ.
ಇದರ ಜೊತೆ ದೇವರ ಕಲ್ಲಿನ ಪ್ರತಿಮೆ ಅಥವಾ ಪಂಚಲೋಹ ವಿಗ್ರಹದ ಮೇಲೆ ಅಭಿಷೇಕ ಮಾಡಿದ್ದರಿಂದ ಪ್ರತಿಮೆಯಲ್ಲಿರುವ ಅನೇಕ ಸಕಾರಾತ್ಮಕ ಅಂಶಗಳೂ ತೀರ್ಥದೊಂದಿಗೆ ಸೇರುತ್ತವೆ. ಹಾಗಾಗಿ ತೀರ್ಥ ಅನ್ನುವುದು ಕೇವಲ ದೇವರ ಹೆಸರಿನಲ್ಲಿ ಕುಡಿಯುವಂಥದಲ್ಲ ಇದು ಆರೋಗ್ಯಕ್ಕೂ ಉತ್ತಮ ಔಷಧಿ ಎಂದು ಪರಿಗಣಿಸಲಾಗಿದೆ.