Tiger Nail: ಹುಲಿ ಉಗುರು ಯಾಕೆ ಧರಿಸುತ್ತಾರೆ ಗೊತ್ತಾ..? ಇಲ್ಲಿದೆ ಸಂಪೂರ್ಣ ಮಾಹಿತಿ.
ಹುಲಿ ಉಗುರು ಧರಿಸುವುದರಿಂದ ಆಗುವ ಪ್ರಯೋಜನಗಳೇನು...? ಸಂಪೂರ್ಣ ಮಾಹಿತಿ ಇಲ್ಲಿದೆ.
Tiger Nail Controversy Karnataka: ಈಗ ಎಲ್ಲಾ ಕಡೆ ಹುಲಿ ಉಗುರಿನ ಪ್ರಕರಣವೇ ಸುದ್ದಿ ಆಗಿದೆ. ಈ ಪ್ರಕರಣದಲ್ಲಿ ನಟ, ಗುರೂಜಿಗಳ ಹೆಸರು ಕೇಳಿಬರುತ್ತಿದ್ದು, ಇವರ ವಿರುದ್ಧ ದೂರು ದಾಖಲಾಗಿದ್ದು, ವಿಚಾರಣೆ ಕೂಡ ಪ್ರಾರಂಭ ಆಗಿಯೇ ಎನ್ನಲಾಗಿದೆ.
ಹುಲಿ ಉಗುರು ಪ್ರಕರಣದಲ್ಲಿ ಮೊದಲನೇದಾಗಿ ‘ಬಿಗ್‍ಬಾಸ್‘ (Bigg Boss) ಸ್ಪರ್ಧಿ ಹಾಗು ರೈತರಾಗಿರುವ ವರ್ತುರ್ ಸಂತೋಷ್ ಸಿಲುಕಿಕೊಂಡಿದ್ದು, ಬಿಗ್ ಬಾಸ್ ಮನೆಯಿಂದಲೇ ವರ್ತೂರ್ ಸಂತೋಷ್ ಅವರನ್ನು ಬಂಧಿಸಲಾಗಿತ್ತು. ತದನಂತರ ಇನ್ನಿತರ ಸೆಲೆಬ್ರೆಟಿಗಳ ಹೆಸರು ಈ ಪ್ರಕರಣದಲ್ಲಿ ಬೆಳಕಿಗೆ ಬರುತ್ತಿವೆ.

ಹುಲಿ ಉಗುರಿನ ಪ್ರಕರಣದಲ್ಲಿ ಸಿಲುಕಿರುವ ಸೆಲೆಬ್ರೆಟಿಗಳು
ಹುಲಿ ಉಗುರಿನ ಪ್ರಕರಣದಲ್ಲಿ ವರ್ತುರ್ ಸಂತೋಷ್ ಬಂಧನದ ನಂತರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಕೇಳಿ ಬಂದಿದ್ದು, ಅವರ ಮನೆ ಶೋಧ ಕಾರ್ಯ ನೆಡೆದು ವಿಚಾರಣೆಯಲ್ಲಿ ನಕಲಿ ಹುಲಿ ಉಗುರು ಎಂದು ಸಾಬೀತಾಗಿದೆ ಎನ್ನಲಾಗಿದೆ. ನಂತರ ನವರಸ ನಾಯಕ್ ಜಗ್ಗೇಶ್, ವಿನಯ್ ಗುರೂಜಿ, ಹಾಗು ಇನ್ನಿತರರು ಸಿಲುಕಿಕೊಂಡಿದ್ದು, ವಿಚಾರಣೆ ನೆಡೆಯುತ್ತಿದೆ ಎಂಬ ವರದಿ ನೀಡಲಾಗಿದೆ .
ಪ್ರಾಣಿಗಳ ಅವಶೇಷಗಳಿಗೆ ಹೆಚ್ಚಿನ ಬೇಡಿಕೆ
ಪ್ರಾಣಿಗಳ ಮಾಂಸ, ಚರ್ಮ, ಮೂಳೆ, ಕೊಂಬು, ಉಗುರು, ಕೂದಲು ಇವುಗಳಿಗೆ ಬೇಡಿಕೆ ಹೆಚ್ಚಿದೆ. ಹಿಂದಿನ ಕಾಲದಿಂದಲೂ ಕಾಡುಗಳಲ್ಲಿ ದೊಡ್ಡ ದೊಡ್ಡ ಪ್ರಾಣಿಗಳನ್ನು ಬೇಟೆಮಾಡಿ ಅವುಗಳ ಅವಶೇಷಗಳನ್ನು ದೇಶ ವಿದೇಶಗಳಿಗೆ ರವಾನೆ ಮಾಡಲಾಗುತ್ತಿತ್ತು. ನಂತರದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಸರ್ಕಾರ ಕಡ್ಡಾಯ ಕಾನೂನು ಅನ್ನು ಜಾರಿಗೆ ತಂದು, ಪ್ರಾಣಿಗಳ ಬೇಟೆ ಅವುಗಳ ಅವಶೇಷಗಳ ವ್ಯಾಪಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು. ಹಾಗು ಇಂತಹ ಕೃತ್ಯ ಮಾಡಿದವರಿಗೆ ಕಾನೂನಿನ ಪ್ರಕಾರ ದಂಡ ಹಾಗು ಕಠಿಣ ಶಿಕ್ಷೆಯನ್ನು ಕೂಡ ವಿಧಿಸಲಾಗುವುದು.

ಪ್ರಾಣಿ ಅವಶೇಷಗಳು ಜನರ ಪ್ಯಾಶನ್ ವಸ್ತುಗಳಾಗಿವೆ
ರಾಜರ ಕಾಲದಿಂದಲೂ ಪ್ರಾಣಿಗಳ ಮಾಂಸ, ಚರ್ಮ, ಮೂಳೆ, ಕೊಂಬು, ಉಗುರು, ಕೂದಲು ಇತ್ಯಾದಿ ವಸ್ತುಗಳನ್ನು ಬಳಸಲಾಗುತಿತ್ತು. ರಾಜರು ತಮ್ಮ ಹಾರಗಳಿಗೆ ಪ್ರಾಣಿಗಳ ಅವಶೇಷಗಳನ್ನು ಬಳಸುತ್ತಿದ್ದರು, ಋಷಿ ಮುನಿಗಳು ತಾವು ಕುಳಿತುಕೊಳ್ಳಲು ಪ್ರಾಣಿಗಳ ಚರ್ಮವನ್ನು ಬಳಸುತ್ತಿದ್ದರು. ಹುಲಿಯ ಚರ್ಮದ ಮೇಲೆ ಕುಳಿತು ಧ್ಯಾನ ಮಾಡುವಾಗ ಬೆನ್ನುಹುರಿಯ ಉದ್ದಕ್ಕೂ ಶಾಖವನ್ನು ಹೆಚ್ಚಿಸುತ್ತದೆ.
ಅಲ್ಲದೆ ಧ್ಯಾನ ಮಾಡುವಾಗ ಇತರ ಪ್ರಾಣಿಗಳನ್ನು ದೂರವಿರಿಸಲು ಇದು ಸಹಾಯ ಮಾಡುತ್ತದೆ. ಇದಕ್ಕಾಗಿ ಘೋರ ಕಾನನದಲ್ಲಿಯೂ ಋಷಿ ಮುನಿಗಳು ತಪಸ್ಸು ಮಾಡುತ್ತಿದ್ದರು ಎನ್ನಲಾಗಿದೆ. ಶಿವನೂ ಸಹ ಹುಲಿ ಚರ್ಮವನ್ನು ಧರಿಸಿದ್ದನ್ನು ನಾವು ಗಮನಿಸಬಹುದು. ಅಷ್ಟೇ ಅಲ್ಲದೇ ಇಂದಿನ ಪೀಳಿಗೆಯವರು ಪ್ರಾಣಿಗಳ ಚರ್ಮ ಹಾಗು ಉಗುರುಗಳಿಂದ ಲಾಕೆಟ್ ಗಳನ್ನೆಲ್ಲ ಉಪಯೋಗಿಸುವುದು ಕಾಣುತ್ತಿದ್ದೇವೆ.
ಕಾನೂನು ಬಾಹಿರ ಚಟುವಟಿಕೆ
ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಅಸಲಿ ಹುಲಿ ಉಗುರುಗಳ ಆಭರಣ ಮಾಡುವುದು, ಮಾರಾಟ ಮಾಡುವುದು, ಧರಿಸುವುದು ಎಲ್ಲವೂ ಅಪರಾಧ. ಯಾವುದೇ ವನ್ಯಜೀವಿಗೆ ಸಂಬಂಧಿಸಿದ ವಸ್ತುಗಳು ಅಂದರೆ ಚರ್ಮ, ಮೂಳೆ. ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹ ತಪ್ಪು. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10,000 ರೂ ದಂಡ ವಿಧಿಸುವ ಸಾಧ್ಯತೆ ಇದೆ.

ಹುಲಿ ಉಗುರು ಬಳಸುದರಿಂದ ಆಗುವ ಪ್ರಯೋಜನಗಳು
ಕೆಲವು ನಂಬಿಕೆ ಆಚಾರ ವಿಚಾರಗಳಿಂದ ಜನರು ಪ್ರಾಣಿ ಅವಶೇಷಗಳನ್ನು ಬಳಸಲು ಕಾರಣವಾಗಿರುತ್ತದೆ. ಹುಲಿ ಉಗುರಿನ ಲಾಕೆಟ್ ಬಳಸಿದರೆ ಹ್ರದಯಕ್ಕೆ ರಕ್ಷಣೆ ಹಾಗು ಅದನ್ನು ಅದೃಷ್ಟ ಎಂದು ಭಾವಿಸಲಾಗಿದೆ ಆ ಕಾರಣಕ್ಕಾಗಿ ಜನರು ಹುಲಿ ಉಗುರನ್ನು ಬಳಸುತ್ತಾರೆ.
ಅಷ್ಟೇ ಅಲ್ಲದೇ ಅದು ನೋಡಲು ಸಹ ಸುಂದರವಾಗಿ ಕಾಣುತ್ತದೆ ಎಂಬ ಕಾರಣವೂ ಇದೆ. ಅಲ್ಲದೆ ಕಷ್ಟದ ಸಮಯದಲ್ಲಿ ಧೈರ್ಯ-ಶಕ್ತಿ ದೊರೆಯುತ್ತದೆ ಮತ್ತು ರಾಜಯೋಗ ಬರುತ್ತದೆ. ರೋಗ ಅಥವಾ ಅನಾರೋಗ್ಯದಿಂದ ದೂರವಿರಲು ಸಹಾಯ ಮಾಡುವುದರ ಜೊತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಭಾವಿಸಲಾಗಿದೆ. ಆದರೆ ಈ ಕುರಿತಾಗಿ ಯಾವುದೇ ಖಚಿತ ಮಾಹಿತಿಗಳು ಲಭ್ಯವಿಲ್ಲ.