Siddaramaiah About Tiger Nail: ನಟರ ಚೈನ್ ನಲ್ಲಿ ಹುಲಿ ಉಗುರು ಇರುವುದರ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು…?

ಹುಲಿ ಉಗುರು ಲಾಕೆಟ್ ಬಳಕೆಯ ಕುರಿತು CM ಸಿದ್ದರಾಮಯ್ಯ ಅವರ ಹೇಳಿಕೆ ಹೀಗಿದೆ.

Tiger Nail Pendant Case: ಈಗ ಸದ್ಯಕ್ಕೆ ಎಲ್ಲಾ ಕಡೆ ಹುಲಿ ಉಗುರಿನ ಲಾಕೆಟ್ ಮಾಡಿಸಿ ಅದನ್ನು ಬಳಸುತ್ತಿರುವ ಸೆಲೆಬ್ರೆಟಿಗಳ ಬಗ್ಗೆ ಮಾತುಕತೆ. ಮೊದಲನೇದಾಗಿ ಬಿಗ್ ಬಾಸ್ ಸ್ಪರ್ಧಿ ವರ್ತುರ್ ಸಂತೋಷ್ ಅವರು ಹುಲಿ ಉಗುರಿನ ಲಾಕೆಟ್ ಬಳಕೆಯ ಕುರಿತು ಬಿಗ್ ಮನೆಯಿಂದ ನೇರವಾಗಿ ಜೈಲು ಸೇರಿದರು.

ಇವರ ಒಂದು ಪ್ರಕರಣದಿಂದ ಇನ್ನಿತರ ಸೆಲೆಬ್ರೆಟಿಗಳ ಹೆಸರು ಕೂಡ ಈಗ ಕೇಳಿ ಬರುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ, ನವರಸ ನಾಯಕ ಜಗ್ಗೇಶ್, ವಿನಯ್ ಗುರೂಜಿಯವರು ಹುಲಿ ಉಗುರಿನ ಲಾಕೆಟ್ ಬಳಕೆಯ ಕುರಿತು ಫೋಟೋ ವಿಡಿಯೋಗಳು ಹರಿದಾಡುತ್ತಿದ್ದು, ಈ ಕುರಿತು ಇವರೆಲ್ಲಾರ ವಿರುದ್ಧ ದೂರು ದಾಖಲಾಗಿದ್ದು, ವಿಚಾರಣೆ ನೆಡೆಸುವಂತೆ ಒತ್ತಾಯಿಸಲಾಗಿದೆ.

CM Siddaramaiah Latest News
Image Credit: New Indian Express

ಸುದ್ದಿಗೋಷ್ಠಿಯಲ್ಲಿ CM ಸಿದ್ದರಾಮಯ್ಯ

ಅಕ್ಟೋಬರ್ 25 ರಂದು ನಗರದಲ್ಲಿ ಸುದ್ದಿಗೋಷ್ಠಿಯೊಂದಿಗೆ ಮುಖ್ಯಮಂತ್ರಿಗಳು ಹಲವು ವಿಚಾರಗಳ ಕುರಿತು ಮಾತನಾಡಿದರು. ಕರ್ನಾಟಕದಲ್ಲಿ ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್.ಮರೀಗೌಡ ಅವರ ಕಾಲದಲ್ಲಿ ತೋಟಗಾರಿಕಾ ಕ್ಷೇತ್ರ ಅಭಿವೃದ್ಧಿಯ ರೂವಾರಿಯಾಗಿದ್ದರು.

ಮೈಸೂರಿನ ಕೇಂದ್ರಸ್ಥಳದಲ್ಲಿರುವ ಕರ್ಜನ್ ಪಾರ್ಕ್ ನಲ್ಲಿ ಡಾ.ಎಂ.ಹೆಚ್.ಮರೀಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಡಾ.ಎಂ.ಹೆಚ್. ಮರೀಗೌಡರ ಸಾಧನೆಗಳು ಎಲ್ಲರಿಗೂ ಸ್ಪೂರ್ತಿ ತರಲಿದೆ ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಅವರು ಸರ್ಕಾರಿ ಅಧಿಕಾರಿಯಾಗಿ ನಿಷ್ಠೆ ಹಾಗೂ ಬದ್ಧತೆಯಿಂದ ತೋಟಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದರು ಎಂದು ತಿಳಿಸಿದರು.

Tiger Nail Pendant Case
Image Credit: News Karnataka

ಹುಲಿ ಉಗುರಿನ ಲಾಕೆಟ್ ಬಳಕೆಯ ಕುರಿತು CM ಸಿದ್ದರಾಮಯ್ಯ ಮಹತ್ವದ ಹೇಳಿಕೆ

ಇತೀಚಿಗೆ ಹುಲಿ ಉಗುರಿನ ಬಳಕೆಯ ಆರೋಪದಲ್ಲಿ ಹಲವು ಸೆಲೆಬ್ರೆಟಿಗಳ ಹೆಸರು ಸಿಲುಕಿಕೊಂಡಿದ್ದು, ನಟರಾದ ದರ್ಶನ್ ಹಾಗೂ ಜಗ್ಗೇಶ್ ಅವರ ಪ್ರಕರಣ ದಾಖಲಾಗಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದಾಗ, ಮುಖ್ಯ ಮಂತ್ರಿಗಳು ನನಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Leave A Reply

Your email address will not be published.