Cricket Captain: ಏಕದಿನ ವಿಶ್ವಕಪ್‌ ನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ಟಾಪ್‌ 5 ನಾಯಕರು ಇವರೇ, ನಿಜಕ್ಕೂ ಗ್ರೇಟ್.

ಏಕದಿನ ವಿಶ್ವಕಪ್ ನಲ್ಲಿ ಸಾಧನೆ ಮಾಡಿದ ಹಲವು ದೇಶಗಳ ಕ್ರಿಕೆಟ್ ನಾಯಕರ ಪಟ್ಟಿ ಇಲ್ಲಿದೆ.

Top 5 Cricket Captain In The World Cup: ಕ್ರಿಕೆಟ್ ಅಭಿಮಾನಿಗಳಲ್ಲಿ ಏಕದಿನ ವಿಶ್ವಕಪ್ (World Cup) ಟೂರ್ನಿ ಅಂತ ಅಂದರೆ ಒಂದು ರೀತಿಯ ಹಬ್ಬ ಇದ್ದಂತೆ. ಅಭಿಮಾನಿಗಳಿಗೆ ಈ ಟೂರ್ನಿ ಯಲ್ಲಿ ಅಷ್ಟೊಂದು ಕ್ರೇಜ್ ಇದ್ದರೆ ಇನ್ನು ಕ್ರಿಕೆಟ್ ಆಟಗಾರರಿಗೆ ಇನ್ನೆಷ್ಟು ಕ್ರೇಜ್ ಇರಬಹುದು. ಹೌದು ಪ್ರತಿಯೊಬ್ಬ ಕ್ರಿಕೆಟಿಗನ ಆಸೆ ತಮ್ಮ ವೃತ್ತಿ ಜೀವನದಲ್ಲಿ ಒಂದಾದರೂ ವಿಶ್ವಕಪ್ ಟೂರ್ನಿಯನ್ನು ಆಡಬೇಕೆಂಬುದಾಗಿರುತ್ತದೆ.

ಅದರಲ್ಲೂ ತಮ್ಮ ದೇಶವನ್ನು ಪ್ರತಿನಿಧಿಸುವ ಕ್ರಿಕೆಟ್ ತಂಡದ ನಾಯಕರಾದರಂತೂ ಮುಗಿದೇ ಹೋಯಿತು. ಅವರಲ್ಲಿ ಇನ್ನಷ್ಟು ಜವಾಬ್ದಾರಿ, ಭಯ ಎಲ್ಲಾ ಇರುತ್ತದೆ. ಪಂದ್ಯ ಗಳನ್ನೂ ಗೆಲ್ಲಿಸುವುದು ನಾಯಕನ ಕೈಯಲ್ಲಿದ್ದು, ಇಡೀ ಟೂರ್ನಿಯ ಜವಾಬ್ದಾರಿ ತಂಡದ ನಾಯಕನ ಮೇಲಿರುತ್ತದೆ.

Ricky Ponting is the successful captain of the Australian team
Image Credit: Sport360

ದೇಶಕ್ಕಾಗಿ ಕಪ್ ಹೊಡೆಯುವ ಛಲ ಎಲ್ಲಾ ಆಟಗಾರರಲ್ಲೂ ಇರುತ್ತದೆ

ಏಕದಿನ ವಿಶ್ವಕಪ್ ಟೂರ್ನಿ (ODI World Cup Tournament), ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡ ಟೂರ್ನಿ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕ್ರಿಕೆಟ್ ಆಡುವ ರಾಷ್ಟ್ರಗಳು, ಅದರಲ್ಲೂ ಬಲಿಷ್ಠ ತಂಡಗಳು ಸೆಣೆಸಾಡುವ ಟೂರ್ನಿ ಇದಾಗಿರುತ್ತದೆ.ಆ ದೊಡ್ಡ ಟೂರ್ನಿಯಲ್ಲಿ ಆಡುವ ಮತ್ತು ತಮ್ಮ ರಾಷ್ಟ್ರ ತಂಡವನ್ನು ಮುನ್ನಡೆಸುವ ಭಾರಿ ಜವಾಬ್ದಾರಿ ಇವರ ಹೆಗಲ ಮೇಲೆ ಇರುತ್ತದೆ. ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಅನೇಕ ನಾಯಕರುಗಳು ನಮ್ಮಲ್ಲಿದ್ದಾರೆ. ಅವರ ಬಗ್ಗೆ ಇಲ್ಲಿ ಮಾಹಿತಿ ಪಡೆಯೋಣ.

ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕರ ಪಟ್ಟಿ

ಆಸ್ಟ್ರೇಲಿಯಾ ತಂಡದ ಯಶಸ್ವಿ ನಾಯಕ ರಿಕಿ ಪಾಂಟಿಂಗ್

ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ತಂಡದ ಯಶಸ್ವಿ ನಾಯಕರುಗಳಲ್ಲಿ ಒಬ್ಬರಾಗಿದ್ದಾರೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂಡಿಸಿದ ಛಾಪು ಇವತ್ತಿಗೂ ಹಾಗೆಯೇ ಇದೆ. ಈ ಅಬ್ಬರದ ಬ್ಯಾಟರ್ ಮೂರು ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. 1999, 2003 ಮತ್ತು 2007 ರಲ್ಲಿ, ಕೊನೆಯ ಎರಡು ವಿಶ್ವಕಪ್‌ನಲ್ಲಿ ತಂಡದ ನಾಯಕರಾಗಿದ್ದರು.

ಅವರು 2003 ರಿಂದ 2011 ರವರೆಗಿನ ವಿಶ್ವ ಕಪ್‌ಗಳಲ್ಲಿ 29 ಪಂದ್ಯಗಳಿಂದ ಆಸ್ಟ್ರೇಲಿಯಾವನ್ನು 26 ಪಂದ್ಯಗಳನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ, ಇವರ ಗೆಲುವಿನ ಶೇಕಡಾವಾರು 89.66% ಆಗಿದೆ. ಸತತ ಏಕದಿನ ವಿಶ್ವಕಪ್ ಗೆಲುವುಗಳ ದಾಖಲೆಯನ್ನು ಸಹ ಇವರು ಹೊಂದಿದ್ದಾರೆ.

New Zealand Cricket Team Captain Stephen Fleming
Image Credit: India TV News

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಸ್ಟೀಫನ್ ಫ್ಲೆಮಿಂಗ್

ಸ್ಟೀಫನ್ ಫ್ಲೆಮಿಂಗ್ ನ್ಯೂಜಿಲ್ಯಾಂಡ್ ಕ್ರಿಕೆಟ್ ಕಂಡ ಅದ್ಭುತ ನಾಯಕ. ಈ ನಾಯಕ ನ್ಯೂಜಿಲೆಂಡ್ ಅನ್ನು 27 ಪಂದ್ಯಗಳಲ್ಲಿ 16 ಪಂದ್ಯಗಳನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ, ಗೆಲುವಿನ ಶೇಕಡಾವಾರು 59.26% ಇದೆ. ಫ್ಲೆಮಿಂಗ್ ಅವರ ಶಾಂತತೆ ಮತ್ತು ಅವರ ಆಟಗಾರರಿಂದ ಉತ್ತಮವಾದದನ್ನು ಪಡೆಯುವ ಸಾಮರ್ಥ್ಯವು ಅವರನ್ನು ಇತರ ನಾಯಕರಿಂದ ಪ್ರತ್ಯೇಕಿಸುತ್ತದೆ.

Clive Lloyd is the captain of the West Indies cricket team
Image Credit: Metro

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಕ್ಲೈವ್ ಲಾಯ್ಡ್

ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಕ್ಲೈವ್ ಲಾಯ್ಡ್ ವೆಸ್ಟ್ ಇಂಡೀಸ್ ಅನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗುರುತಿಸುವಂತೆ ಮಾಡಿದವರು. ಅವರ ಮಾರ್ಗದರ್ಶನದಲ್ಲಿ ಕೆರಿಬಿಯನ್ ತಂಡ ವಿಶ್ವಕಪ್‌ನ ಮೊದಲ ಎರಡು ಆವೃತ್ತಿಗಳನ್ನು (1975 ಮತ್ತು 1979) ಗೆದ್ದುಕೊಂಡಿತು. ಆಕ್ರಮಣಕಾರಿ ಮತ್ತು ನಿರ್ಭೀತವಾಗಿ ಆಡಿ ಲಾಯ್ಡ್ಸ್ ವಿಂಡೀಸ್ ಅನ್ನು ಆಡಿದ 17 ಪಂದ್ಯಗಳಲ್ಲಿ 15 ರಲ್ಲಿ ಗೆಲುವು ತಂದುಕೊಟ್ಟರು, ಇವರ ಗೆಲುವಿನ ಶೇಕಡಾವಾರು 88.24% ಆಗಿದೆ.

MS Dhoni is the strongest captain of the Indian team
Image Credit: Elivetoday

ಭಾರತ ತಂಡದ ಬಲಿಷ್ಠ ನಾಯಕ ಎಂ ಎಸ್ ಧೋನಿ

ಭಾರತ ತಂಡದ ಕೂಲ್ ನಾಯಕ ಎಂ ಎಸ್ ಧೋನಿ ಇವರು 2011 ರಲ್ಲಿ ಭಾರತಕ್ಕೆ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ತಂದುಕೊಟ್ಟರು. ಅವರ ನಾಯಕತ್ವದಲ್ಲಿ ಭಾರತವು 17 ಪಂದ್ಯಗಳಲ್ಲಿ 14 ರಲ್ಲಿ ಎಂದರೆ 82.35% ಶೇಕಡಾವಾರು ಗೆಲುವು ಸಾಧಿಸಿದೆ. ಇದಲ್ಲದೆ, ಅವರು 2011 ಮತ್ತು 2015 ರ ಆವೃತ್ತಿಗಳಲ್ಲಿ ಏಕದಿನ ವಿಶ್ವಕಪ್‌ನಲ್ಲಿ 11 ಗೆಲುವಿನೊಂದಿಗೆ ಭಾರತ ತಂಡವನ್ನು ಮುನ್ನಡೆಸಿದ್ದಾರೆ.

Pakistan Cricket Team Captain Imran Khan
Image Credit: Stuff

ಇಮ್ರಾನ್ ಖಾನ್ 1992 ರಲ್ಲಿ ವಿಶ್ವಕಪ್ ಗೆಲುವಿಗೆ ಕಾರಣರಾದರು

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಇಮ್ರಾನ್ ಖಾನ್ ಅವರು 1992 ರಲ್ಲಿ ಏಕೈಕ ವಿಶ್ವಕಪ್ ಗೆಲುವಿಗೆ ಕಾರಣವಾಯಿತು. ಅವರ ನಾಯಕತ್ವದಲ್ಲಿ, ಪಾಕ್ ತಂಡವು 22 ಪಂದ್ಯಗಳಲ್ಲಿ 14 ರಲ್ಲಿ ಜಯಗಳಿಸಿತು, ಶೇಕಡಾ 63.64 ರಷ್ಟು ಗೆಲುವಿನ ಪ್ರಮಾಣ ಸಾಧಿಸಿತು ಅಂತ ಹೇಳಬಹುದು.

Leave A Reply

Your email address will not be published.