Toyota: ಕೇವಲ 11,000 ಸಾವಿರಕ್ಕೆ ಬುಕ್ ಮಾಡಿ 26 ಕಿಲೋಮೀಟರ್ ಮೈಲೇಜ್ ಕೊಡುವ ಟೊಯೋಟಾ ಕಾರ್.
ಟೊಯೋಟಾ ರೋಮಿಯರ್ ಕಾರ್ ನ ಬೆಲೆ ಹಾಗೂ ವಿಶೇಷತೆ ಬಗ್ಗೆ ತಿಳಿದುಕೊಳ್ಳಿ.
Toyota Rumion Car Price In India: ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಹೊಸ ಮಾದರಿಯ ಕಾರ್ ಗಳು ಎಂಟ್ರಿ ಕೊಡುತ್ತಿದೆ. ಸಾಕಷ್ಟು ಜನಪ್ರಿಯ ಕಂಪನಿಗಳು ವಿಭಿನ್ನ ವಿನ್ಯಾಸದ ಕಾರ್ ಗಳನ್ನುಪರಿಚಯಿಸುತ್ತಿದೆ. ಇದೀಗ ಟೊಯೋಟಾ ಟೊಯೋಟಾದ ಬಹುನಿರೀಕ್ಷಿತ ಎಂಪಿವಿ ಮಾರುಕಟ್ಟೆಯನ್ನು ಸದ್ಯದಲ್ಲೇ ಪ್ರವೇಶಿಸಲಿದೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಮಾರುತಿ ಸುಜುಕಿ ಕಂಪನಿಗಳ ಪಾಲುದಾರಿಕೆಯ ಭಾಗವಾದ ಮತ್ತೊಂದು ಉತ್ಪನ್ನ ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಮಾರುತಿ ಸುಜುಕಿಯ ಜನಪ್ರಿಯ ಎರ್ಟಿಗಾದ ರಿಬ್ಯಾಡ್ಜ್ ಆವೃತ್ತಿ ಇದಾಗಿದ್ದು ಆರು ರೂಪಾಂತರದಲ್ಲಿ ಮಾರುಕಟ್ಟೆಗೆ ಬರಲಿದೆ. ಇದೀಗ ನೂತನ ಟೊಯೋಟಾ ರೂಮಿಯಾನ್ ಎಂಪಿವಿ ಬೆಲೆ ಬಹಿರಂಗವಾಗಿದೆ.

ಟೊಯೋಟಾ ರೂಮಿಯಾನ್ (Toyota Rumion)
ಮಾರುಕಟ್ಟೆಯಲ್ಲಿ ಇದೀಗ ಟೊಯೋಟಾ ಕಂಪನಿಯ ಟೊಯೋಟಾ ರೂಮಿಯಾನ್ ಕಾರ್ ಬಿಡುಗಡೆಗೆ ಸಜ್ಜಾಗಲಿದೆ. ಸೆಪ್ಟೆಂಬರ್ 2023 ರಲ್ಲಿಯೇ ಈ ಟೊಯೋಟಾ ರೂಮಿಯಾನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಟೊಯೋಟಾ ರೂಮಿಯಾನ್ ಹೊಸ ತಂತ್ರಜ್ಞಾನಗಳೊಂದಿಗೆ ಮರು ವಿನ್ಯಾಸಗೊಳಿಸಲಾದ ಮಿಶ್ರಲೋಹದ ಚಕ್ರ, ಸಂಪೂರ್ಣ ಕಪ್ಪು ಸಜ್ಜು ಮತ್ತು ಟೊಯೋಟಾ ಬ್ಯಾಡ್ಜಿಂಗ್ ಅನ್ನು ಪಡೆಯಲಿದೆ.
ಟೊಯೋಟಾ ರೂಮಿಯಾನ್ ಎಂಜಿನ್ ಸಾಮರ್ಥ್ಯ
ಟೊಯೋಟಾ ರೂಮಿಯಾನ್ ಕಾರ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಲಾಗಿದ್ದು, 1 .5 ಲೀಟರ್ K-ಸರಣಿಯ ಎಂಜಿನ್ ಅನ್ನು ಪಡೆಯಬಹುದಾಗಿದೆ. ಈ ಎಂಜಿನ್ 103 bhp ಗರಿಷ್ಟ ಶಕ್ತಿಯೊಂದಿಗೆ 138 Nm ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಟೊಯೋಟಾ ರೂಮಿಯಾನ್ ಮೈಲೇಜ್
ಟೊಯೋಟಾ ರೂಮಿಯಾನ್ ಕಾರ್ ನಲ್ಲಿ 7 ಆಸನಗಳನ್ನು ಅಳವಡಿಸಲಾಗಿದ್ದು ಪೆಟ್ರೋಲ್ ಮಾದರಿಯಲ್ಲಿ 20 ಕೀ.ಮೀ ಗರಿಷ್ಟ ಮೈಲೇಜ್ ನೀಡಲಿದೆ. ಇನ್ನು ಈ MPV ನಲ್ಲಿ ಜೈವಿಕ ಇಂಧನ CNG ರೂಪಾಂತರವನ್ನು ಅಳವಡಿಸಿದೆ. ಟೊಯೋಟಾ ರೂಮಿಯಾನ್ CNG ರೂಪಾಂತರವು 26 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಮಾರುತಿ ಎರ್ಟಿಗಾ ಕಾರ್ ಗೆ ಈ ಟೊಯೋಟಾ ರೂಮಿಯಾನ್ ಬಾರಿ ಪೈಪೋಟಿ ನೀಡಲಿದೆ.
ಟೊಯೋಟಾ ರೂಮಿಯಾನ್ ಕಾರ್ ನ ಬೆಲೆ
ಕಂಪನಿಯು ಟೊಯೋಟಾ ರೂಮಿಯಾನ್ ಕಾರ್ ನಲ್ಲಿ 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಮತ್ತು 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡಲಿದೆ. ಇನ್ನು ಟೊಯೋಟಾ ರೂಮಿಯಾನ್ ಕಾರ್ ನ ಬೆಲೆಯ ಬಗ್ಗೆ ಹೇಳುವುದಾದರೆ ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋ ರೂಮ್ ಬೆಲೆ 10.29 ಲಕ್ಷ ಆಗಿದೆ. ಯನ್ನು 11,000 ಪಾವತಿಸುವ ಮೂಲಕ ಸೆಪ್ಟೆಂಬರ್ 8 ರಿಂದ ಕಾರ್ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.