Jio: ಜಿಯೋ ರಿಚಾರ್ಜ್ ಮಾಡುವವರಿಗೆ ಬೇಸರದ ಸುದ್ದಿ, ಈ ಪ್ಲ್ಯಾನ್ ಸ್ಥಗಿತ ಮಾಡಿದ ಜಿಯೋ.
ಹೆಚ್ಚಿನ ಗ್ರಾಹಕರು ಬಳಕೆ ಮಾಡುವ ರಿಚಾರ್ಜ್ ಪ್ಲಾನ್ ಅನ್ನು ಜಿಯೋ ಇದೀಗ ರದ್ದು ಮಾಡಿದೆ.
Trending Recharge Plan Discontinued: ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್, ಬಿಎಸ್ಎನ್ಎಲ್, ವೊಡಾಫೊನ್ ಐಡಿಯಾಗಳು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತಿರುತ್ತವೆ.
ಇದೀಗ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ಜಿಯೋ (Jio)ತನ್ನ ಬಳಕೆದಾರರಿಗೆ ಶಾಕ್ ನೀಡಿದೆ. ಜಿಯೋ ದ ಹೆಚ್ಚಿನ ಗ್ರಾಹಕರು ಬಳಕೆಮಾಡುವ ಒಂದು ರಿಚಾರ್ಜ್ ಪ್ಲಾನ್ ಅನ್ನು ಜಿಯೋ ಇದೀಗ ಸ್ಥಗಿತ ಗೊಳಿಸಿದೆ. ಆ ಪ್ಲ್ಯಾನ್ ಯಾವುದು ಎನ್ನುವ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಜಿಯೋ ದ ಟ್ರೆಂಡಿಂಗ್ ನಲ್ಲಿದ್ದ ರಿಚಾರ್ಜ್ ಪ್ಲ್ಯಾನ್ ಸ್ಥಗಿತ
ಹೌದು ಇದೀಗ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಟ್ರೆಂಡಿಂಗ್ ನಲ್ಲಿರುವ ರಿಚಾರ್ಜ್ ಪ್ಲ್ಯಾನ್ ಅನ್ನು ದಿಡೀರನೆ ಸ್ಥಗಿತಗೊಳಿಸುವ ಮೂಲಕ ಶಾಕ್ ನೀಡಿದೆ. ಜಿಯೋ ದ ಹೆಚ್ಚಿನ ಗ್ರಾಹಕರು ಬಳಸುವ 119 ರೂ ರಿಚಾರ್ಜ್ ಪ್ಲ್ಯಾನ್ ಅನ್ನು ಜಿಯೋ ಬಂದ್ ಮಾಡಿದೆ. ಈ ರಿಚಾರ್ಜ್ ಯೋಜನೆಯನ್ನು ಅಧಿಕೃತ ವೆಬ್ ಸೈಟ್ ಹಾಗೂ MyJio ಅಪ್ಲಿಕೇಶನ್ ನಿಂದ ತೆಗೆದು ಹಾಕಿದೆ.
ಜಿಯೋ ಜೊತೆಗೆ ಏರ್ಟೆಲ್ ಕೂಡ ತನ್ನ ಅತಿ ಕಡಿಮೆ ರಿಚಾರ್ಜ್ ಅದ 99 ಅನ್ನು ಸ್ಥಗಿತ ಗೊಳಿಸಿದೆ. ಸಧ್ಯ ಏರ್ಟೆಲ್ ನ ಕೈಗೆಟಕುವ ರಿಚಾರ್ಜ್ ಪ್ಲ್ಯಾನ್ 155 ರೂ ಆಗಿದೆ. ಹಾಗೇ ಜಿಯೋ ದ 119 ರೂ ನ ರಿಚಾರ್ಜ್ ಪ್ಲ್ಯಾನ್ ಸ್ಥಗಿತ ಗೊಂಡ ನಂತರ 149 ರೂ ನ ರಿಚಾರ್ಜ್ ಪ್ಲ್ಯಾನ್ ಹೆಚ್ಚು ಪ್ರಾಮುಖ್ಯತೆಯನ್ನ ಪಡೆದಿದೆ. 149 ರೂ. ನ ರಿಚಾರ್ಜ್ ಪ್ಲ್ಯಾನ್ ಅನ್ನು ಸ್ಥಗಿತ ಗೊಂಡ 119 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ ಗೆ ಹೋಲಿಸಿದರೆ ಹೆಚ್ಚುವರಿ ಪ್ರಯೋಜನವನ್ನು ಪಡೆಯಬಹುದಾಗಿದೆ.
149 ರೂಪಾಯಿ ರಿಚಾರ್ಜ್ ಪ್ಲ್ಯಾನ್ ಪ್ರತಿ ದಿನ 1GB ಡೇಟಾ, 100 SMS ಹಾಗೂ ಉಚಿತ ಕರೆ ಯೊಂದಿಗೆ 20 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಬಳಕೆದಾರರು jio tv, jio cinema, ಮತ್ತು jio cloud ಚಂದದರಿಕೆಗಳಿಗೆ ಪ್ರವೇಶ ಮಾಡಬಹುದಾಗಿದೆ. ಹಾಗೆ ಏರ್ಟೆಲ್ ನ 155 ರೂ ನ ರಿಚಾರ್ಜ್ ಪ್ಲ್ಯಾನ್ 24 ದಿನದ ಮಾನ್ಯತೆಯನ್ನು ಪಡೆದಿದೆ ಹಾಗೇ ಅನಿಯಮಿತ ಕರೆ , ಒಟ್ಟು 1GB ,300 SMS ಅನ್ನು ನೀಡುತ್ತದೆ. ಇತರ ಪ್ರಯೋಜನವೆಂದರೆ hello tune, Wynk ಸಂಗೀತವನ್ನು ಒಳಗೊಂಡಿದೆ.