Tukali Santhosh: ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡ ಸಂತೋಷ್, ಖಡಕ್ ವಾರ್ನಿಂಗ್ ಮಾಡಿದ ಬಿಗ್ ಬಾಸ್.

ಬಿಗ್ ಬಾಸ್ ಮನೆಯಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡ ಸಂತೋಷ್.

Tukali Santhosh Enters Bigg Boss House: ‘ಬಿಗ್​ ಬಾಸ್​ ಕನ್ನಡ ಸೀಸನ್​ 10′ (Bigg Boss Kannada Season 10) ಸಂಚಿಕೆಗಳು ಈಗಾಗಲೇ ಪ್ರಾಂಭವಾಗಿದ್ದು. ಎಲ್ಲ ಸ್ಪರ್ದಿಗಳು ಬಿಗ್ ಮನೆಯನ್ನು ಪ್ರವೇಶಿಸಿದ್ದಾರೆ. ಆದರೆ ಈ ಸಲದ ಸ್ಪರ್ಧಿಗಳ ಹೆಸರಿನಲ್ಲಿ ಕೆಲವು ಸಮಸ್ಯೆಗಳಿದ್ದು,ಅದೇನೆಂದರೆ ಒಂದೇ ಹೆಸರಿರುವ ಇಬ್ಬರು ವ್ಯಕ್ತಿಗಳು.

ಈ ಬಗ್ಗೆ ಬಿಗ್ ಬಾಸ್ ಕೆಲವು ಕ್ರಮ ಕೈಗೊಂಡಿದ್ದಾರೆ. ಈ ಮನೆಯಲ್ಲಿ ಇಬ್ಬರು ಸಂತೋಷ್​ ಕುಮಾರ್​ ಇದ್ದಾರೆ. ಅದರಿಂದ ವೀಕ್ಷಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ನಿಮ್ಮನ್ನು ಏನೆಂದು ಕರೆಯಬೇಕು’ ಎಂದು ಬಿಗ್​ ಬಾಸ್​ ಪ್ರಶ್ನಿಸಿದರು. ‘ನನ್ನನ್ನು ತುಕಾಲಿ ಸಂತೋಷ್​ ಎಂದೇ ಕರೆಯರಿ’ ಎಂದು ಹಾಸ್ಯ ನಟ ಸಂತು ಹೇಳಿದರು.

Tukali Santhosh Enters Bigg Boss House
Image Credit: TV9kannada

ತುಕಾಲಿ ಸಂತೋಷ್ ಅವರ ಹೆಸರಿನ ನಿಜಾಂಶ

‘ಬಿಗ್​ ಬಾಸ್​ ಕನ್ನಡ ಸೀಸನ್​ 10 ಶೋನಲ್ಲಿ ಕಾಮಿಡಿ ನಟ ತುಕಾಲಿ ಸಂತೋಷ್​ ಅವರು ಸ್ಪರ್ಧಿಸುತ್ತಿದ್ದಾರೆ. ಅವರು ಈ ರೀತಿ ಹೆಸರು ಇಟ್ಟುಕೊಂಡಿದ್ದರ ಬಗ್ಗೆ ಅನೇಕರಿಗೆ ಕೌತುಕ ಇದೆ. ಆ ಬಗ್ಗೆ ಅವರು ಓಪನಿಂಗ್​ ಸಂಚಿಕೆಯಲ್ಲೇ ಮಾಹಿತಿ ನೀಡಿದರು. ಒಂದು ಸ್ಕಿಟ್​ನಲ್ಲಿ ತುಕಾಲಿ ಎಂಬ ಪಾತ್ರ ಮಾಡಿದ ಬಳಿಕ ಅವರ ಹೆಸರಿನ ಜೊತೆ ಆ ವಿಶೇಷಣ ಸೇರಿಕೊಂಡಿತು. ಈಗ ಬಿಗ್​ ಬಾಸ್​ (Bigg Boss) ಕೂಡ ಈ ಹೆಸರಿನ ಬಗ್ಗೆ ತಕರಾರು ತೆಗೆದಿದ್ದಾರೆ. ‘ನಿಮ್ಮನ್ನು ತುಕಾಲಿ ಅಂತ ಕರೆಯೋದು ಅಷ್ಟೊಂದು ಸರಿ ಎನಿಸುತ್ತಿಲ್ಲ’ ಎಂದು ಬಿಗ್​ ಬಾಸ್​ ಹೇಳಿದ್ದಾರೆ. ಆ ಘಟನೆ ಸಖತ್​ ಫನ್ನಿ ಆಗಿತ್ತು.

ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿರುವುದು ಗೊಂದಲಕ್ಕೆ ಕಾರಣ

ಈ ಹಿಂದಿನ ಸೀಸನ್​ನಲ್ಲಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಇದ್ದರು. ಈಗ 10ನೇ ಸೀಸನ್​ನಲ್ಲಿ ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ ಅವರು ಬಂದಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಒಂದೇ ಹೆಸರಿನ ಒಬ್ಬರು ವ್ಯಕ್ತಿಗಳು ಬಂದಿದ್ದು ಇದೇ ಮೊದಲೇನೂ ಅಲ್ಲ. ಸಂತೋಷ್​ ಅಂತ ಕರೆದಾಗ ಇಬ್ಬರಿಗೂ ಗೊಂದಲ ಆಗಬಹುದು. ಬಿಗ್​ ಬಾಸ್​ ಆದೇಶ ನೀಡಿದಾಗ ಅದು ಯಾವ ಸಂತೋಷ್ ​ಗೆ ಸಂಬಂಧಿಸಿದ್ದು ಎಂಬ ಪ್ರಶ್ನೆ ಮೂಡಬಹುದು. ಆ ಕಾರಣಕ್ಕಾಗಿ ಬಿಗ್​ ಬಾಸ್​ ತಕರಾರು ತೆಗೆದಿದ್ದಾರೆ.

Tukali Santhosh Enters Bigg Boss House
Image Credit: Asianetnews

ತುಕಾಲಿ ಸಂತೋಷ್​ ಬದಲಾಗಿ ತುಕಾಲಿ ಅವರೇ ಅಂತ ಕರೆಯುತ್ತೇವೆ

‘ಮನೆಯಲ್ಲಿ ಒಂದು ಸಮಸ್ಯೆ ಎದುರಾಗಿದೆ. ಈ ಮನೆಯಲ್ಲಿ ಇಬ್ಬರು ಸಂತೋಷ್​ ಕುಮಾರ್ ಇದ್ದಾರೆ. ಅದರಿಂದ ವೀಕ್ಷಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ನಿಮ್ಮನ್ನು ಏನೆಂದು ಕರೆಯಬೇಕು’ ಎಂದು ಬಿಗ್​ ಬಾಸ್​ ಪ್ರಶ್ನಿಸಿದರು. ‘ನನ್ನನ್ನು ತುಕಾಲಿ ಸಂತೋಷ್​ ಎಂದೇ ಕರೆಯರಿ’ ಎಂದು ಹಾಸ್ಯ ನಟ ಸಂತು ಹೇಳಿದರು. ‘ನಿಮ್ಮನ್ನು ತುಕಾಲಿ ಅಂತ ಕರೆಯೋದು ಅಷ್ಟು ಸರಿ ಅನಿಸುತ್ತಿಲ್ಲ. ಹಾಗಾಗಿ ಗೌರವಯುತವಾಗಿ ನಿಮ್ಮನ್ನು ತುಕಾಲಿ ಅವರೇ ಅಂತ ಕರೆಯುತ್ತೇವೆ’ ಎಂದು ಹೇಳುವ ಮೂಲಕ ಬಿಗ್​ ಬಾಸ್​ ನಗೆ ಚಟಾಕಿ ಹಾರಿಸಿದರು.

Leave A Reply

Your email address will not be published.