Aishwarya Sarja: ಮದುವೆಗೂ ಮುನ್ನವೇ ಅರ್ಜುನ್ ಸರ್ಜಾ ಮಗಳಿಗೆ ಕಂಡೀಷನ್ ಹಾಕಿದ ಮಾವ, ಏನದು ಗೊತ್ತಾ…?

ಮದುವೆಗೆ ಸಿದ್ದರಾದ ಐಶ್ವರ್ಯ ಹಾಗು ಉಮಾಪತಿ ಜೋಡಿ, ಈಗಾಗಲೇ ಕಂಡೀಷನ್ ಹಾಕಿದ ಐಶ್ವರ್ಯ ಮಾವ.

Umapathy Ramaiah And Aishwarya Arjun: ಕನ್ನಡ ಹಾಗು ತಮಿಳು ಚಿತ್ರರಂಗದ ಖ್ಯಾತ ನಟ ಅರ್ಜುನ್ ಸರ್ಜಾ (Arjun Sarja) ಅವರ ಮಗಳು ಐಶ್ವರ್ಯ ಅವರ ನಿಶ್ಚಿತಾರ್ಥ ನಡೆದಿರುತ್ತದೆ. ಅರ್ಜುನ್ ಸರ್ಜಾ ಅವರು ತಮಿಳು ನಟ, ನಿರ್ದೇಶಕ ಹಾಗು ನಿರ್ಮಾಪಕರಾಗಿ ಜನಪ್ರಿಯತೆ ಹೊಂದಿದ್ದು, ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ (Aishwarya) ಕೂಡ ಹಲವು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ನಟ ಅರ್ಜುನ್ ಸರ್ಜಾ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳು ಐಶ್ವರ್ಯ ಆಗಿರುತ್ತಾರೆ. ನಟಿ ಐಶ್ವರ್ಯ ಅವರು ವಿಶಾಲ್ ಅಭಿನಯದ ಪಟ್ಟತ್ತು ಯಾನೈ ಚಿತ್ರದ ಮೂಲಕ ತಮಿಳಿನಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದೂ, ಕನ್ನಡದ ಸಿನಿಮಾದಲ್ಲೂ ನಟಿಸಿದ್ದಾರೆ. ಐಶ್ವರ್ಯಾ ಆ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ .           

Umapathy Ramaiah And Aishwarya Arjun
Image Credit: Etvbharat

 

ಖ್ಯಾತ ನಟನ ಮಗನನ್ನು ಪ್ರೀತಿಸಿದ ಐಶ್ವರ್ಯ
ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರ ಜೊತೆ ಐಶ್ವರ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟ ಅರ್ಜುನ್ ಕೆಲವು ವರ್ಷಗಳ ಹಿಂದೆ ಸರ್ವೈವರ್ ಎಂಬ ರಿಯಾಲಿಟಿ ಗೇಮ್ ಶೋ ನಡೆಸಿಕೊಟ್ಟಿದ್ದರು. ಕಾರ್ಯಕ್ರಮದಲ್ಲಿ ಉಮಾಪತಿ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ಐಶ್ವರ್ಯಾ ಆಗಾಗ್ಗೆ ಶೋ ನೋಡಲು ಸರ್ವೈವರ್ ಸೆಟ್‌ಗಳಿಗೆ ಭೇಟಿ ನೀಡುತ್ತಿದ್ದರು. ಅಲ್ಲಿಯೇ ಐಶ್ವರ್ಯಾ ಉಮಾಪತಿಯೊಂದಿಗೆ ಪರಿಚಿತರಾಗಿದ್ದು ಮತ್ತು ಅಂತಿಮವಾಗಿ ಅದು ಪ್ರೀತಿಗೆ ತಿರುಗಿದ್ದು. ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ಈಗ ವಿವಾಹ ಆಗಲು ಸಿದ್ದರಾಗಿದ್ದಾರೆ.

Aishwarya Sarja
Image Credit: News 18

ಐಶ್ವರ್ಯ ಅರ್ಜುನ್ ಗೆ ಕಂಡೀಶನ್ ಹಾಕಿದ ಮಾವ

ಚೆನ್ನೈನಲ್ಲಿ ನಟ ಅರ್ಜುನ್ ನಿರ್ಮಿಸಿರುವ ಆಂಜನೇಯ ದೇವಸ್ಥಾನದಲ್ಲಿ ಕಳೆದ ತಿಂಗಳು ಐಶ್ವರ್ಯ ಮತ್ತು ಉಮಾಪತಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಹೀಗಿರುವಾಗ ನಟ ತಂಬಿ ರಾಮಯ್ಯ ತಮ್ಮ ಭಾವಿ ಸೊಸೆಗೆ ಕಂಡೀಷನ್ ಹಾಕಿದ್ದಾರೆ ಎಂಬ ಸುದ್ದಿ ಕಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ.

ಐಶ್ವರ್ಯಾ ಈಗಾಗಲೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವುದರಿಂದ ಮದುವೆಯ ನಂತರ ಸಿನಿಮಾದಲ್ಲಿ ನಟಿಸಬಾರದು ಎಂಬುದು ರಾಮಯ್ಯ ವಿಧಿಸಿರುವ ಷರತ್ತು. ಮಾವನ ಈ ಷರತ್ತಿಗೆ ಐಶ್ವರ್ಯಾ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ರಾಮಯ್ಯ ಅವರ ಮದುವೆ ನಡೆಯಲಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಮಾವ ಕಂಡೀಷನ್ ಹಾಕಿದ್ದು ನಿಜಾನಾ ಅಥವಾ ಸುಳ್ಳಾ ಅನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ ಐಶ್ವರ್ಯ ಅವರೇ ಉತ್ತರ ನೀಡಬೇಕಾಗಿದೆ.

Leave A Reply

Your email address will not be published.